Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಆಗಸ್ಟ್ ಮೊದಲ ವಾರದಿಂದ ತರಬೇತಿ ಶಿಬಿರ ಆರಂಭಿಸಲು ರೆಸ್ಲಿಂಗ್ ಫೆಡರೇಷನ್ ಚಿಂತನೆ

Wrestling Federation Of India Likely To Start Training Camp By 1st Week Of August

ಕೊರೊನಾ ವೈರಸ್‌ನ ಕಾರಣದಿಂದಾಗಿ ಎಲ್ಲಾ ಕ್ರೀಡಾಪಟುಗಳು ತರಬೇತಿಯಿಂದ ದೂರವಿದ್ದಾರೆ. ದೇಶದಲ್ಲಿ ಕೊರೊನಾ ವೈರಸ್‌ನ ಪ್ರಭಾವ ಹೆಚ್ಚಾಗುತ್ತಿರುವ ಕಾರಣದಿಂದಾಗಿ ಇನ್ನು ಕೂಡ ತರಬೇತಿ ಆರಂಭಿಸದಿದ್ದರೆ ಮುಂದಿನ ಒಲಿಂಪಿಕ್ಸ್‌ಗೆ ಹಿನ್ನಡೆಯಾಗುವುದನ್ನು ಅರಿತ ರೆಸ್ಲಿಂಗ್ ಫೆಡರೇಶನ್ ತರಬೇತಿ ಶಿಬಿರ ಆರಂಭಕ್ಕೆ ಸಿದ್ದತೆ ನಡೆಸುತ್ತಿದೆ.

ಆಗಸ್ಟ್ ಮೊದಲ ವಾರದಿಂದ ರೆಸ್ಲರ್‌ಗಳ ಶಿಬಿರವನ್ನು ಆರಂಭಿಸಲು ರೆಸ್ಲಿಂಗ್ ಫೆಡರೇಶನ್ ಆಫ್ ಇಂಡಿಯಾ ಚಿಂತನೆ ನಡೆಸುತ್ತಿದೆ. ಈ ಬಗ್ಗೆ ಫೆಡರೇಶನ್‌ನ ಸಹಾಯಕ ಕಾರ್ಯದರ್ಶಿ ವಿನೋದ್ ತೋಮರ್ ಖಚಿತಪಡಿಸಿದ್ದು ತರಬೇತಿ ಶಿಬಿರವನ್ನು ಆರಂಭಿಸಲು ಉತ್ಸುಕವಾಗಿರುವುದಾಗಿ ತಿಳಿಸಿದ್ದಾರೆ.

ಆರಂಭದಲ್ಲಿ ಕೇವಲ ಒಲಿಂಪಿಕ್ಸ್‌ನಲ್ಲಿ ಪಾಲ್ಗೊಳ್ಳವ ಕ್ರೀಡಾಪಟುಗಳಿಗೆ ಮಾತ್ರವೇ ತರಬೇತಿಯನ್ನು ನೀಡಲಾಗುತ್ತದೆ. ಅದಾದ ಬಳಿಕ ಉಳಿದ ಕ್ರೀಡಾಪಟುಗಳನ್ನೂ ಕೂಡ ಈ ತರಬೇತಿ ಶಿಬಿರಕ್ಕೆ ಸೇರ್ಪಡೆಗೊಳಿಸುವ ಯೋಚನೆಯಿದೆ ಎಂದು ಮಾಹಿತಿ ನೀಡಿದರು.

'ನಾವು ಆಗಸ್ಟ್ ಮೊದಲ ವಾರದಿಂದ ತರಬೇತಿ ಶಿಬಿರವನ್ನು ಆರಂಭಿಸುವ ಬಗ್ಗೆ ಯೋಚನೆ ನಡೆಸುತ್ತಿದ್ದೇವೆ. ಈ ಬಗ್ಗೆ ಚರ್ಚೆಗಳನ್ನು ನಡೆಸಿದ್ದೇವೆ. ಆರಂಭದಲ್ಲಿ ಐದು ವಿಭಾಗಗಳಲ್ಲಿ ಒಲಿಂಪಿಕ್ಸ್‌ನಲ್ಲಿ ಪಾಲ್ಗೊಳ್ಳುವ ರೆಸ್ಲರ್‌ಗಳಿಗೆ ತರಬೇತಿ ಆಹ್ವಾನಿಸಲಾಗುತ್ತದೆ. ಬಳಿಕ ಉಳಿದ ರೆಸ್ಲರ್‌ಗಳಿಗೆ ವಿಸ್ತರಿಸಲಾಗುತ್ತದೆ' ಎಂದು ತೋಮರ್ ಹೇಳಿದ್ದಾರೆ.

ಕಳೆದ ಮಾರ್ಚ್‌ ತಿಂಗಳಿನಿಂದ ರೆಸ್ಲಿಂಗ್ ತರಬೇತಿ ಶಿಬಿರ ಮುಂದೂಡಿಕೆಯಾಗಿತ್ತು. ಸದ್ಯ ಹೆಚ್ಚಿ ಕ್ರೀಡೆಗಳ ತರಬೇತಿ ಆರಂಭವಾಗಿದೆ. ಆದರೆ ರೆಸ್ಲಿಂಗ್ ಸಂಪರ್ಕ ಸಂಪರ್ಕವನ್ನು ಹೊಂದುವ ಕ್ರೀಡೆಯಾಗಿರುವ ಕಾರಣದಿಂದಾಗಿ ಈವರೆಗೂ ತರಬೇತಿಯನ್ನು ಆರಂಭಿಸಿರಲಿಲ್ಲ.

Story first published: Thursday, July 23, 2020, 17:06 [IST]
Other articles published on Jul 23, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+