WWE ಸೂಪರ್‌ಸ್ಟಾರ್ ಸ್ಕಾಟ್ ಹಾಲ್ ನಿಧನ: ಕಂಬನಿ ಮಿಡಿದ ಅಭಿಮಾನಿಗಳು

ಅಮೆರಿಕಾದ ಖ್ಯಾತ ವೃತ್ತಿಪರ ಕುಸ್ತಿಪಟು ಹಾಲ್ ಆಫ್ ಫೇಮರ್, ಸ್ಕಾಟ್ ಆಲಿವರ್ ಹಾಲ್ ಹೃದಯಾಘಾತಕ್ಕೆ ಒಳಗಾಗಿ ಇಹಲೋಕ ತ್ಯಜಿಸಿದ್ದಾರೆ. ವಿಶ್ವ ಕುಸ್ತಿ ಫೆಡರೇಶನ್‌ನಲ್ಲಿ ಹಾಲ್ ಆಫ್ ಫೇಮ್‌ನಲ್ಲಿ ಒಬ್ಬರಾದ ಇವರು ವರ್ಲ್ಡ್ ಚಾಂಪಿಯನ್‌ಶಿಪ್ ವ್ರೆಸ್ಲಿಂಗ್‌ನೊಂದಿಗೆ ಹೆಸರುವಾಸಿಯಾಗಿದ್ದರು.
WWE ಸೂಪರ್‌ಸ್ಟಾರ್ ಸ್ಕಾಟ್ ಹಾಲ್ ಅವರು ದೊಡ್ಡ ಆರೋಗ್ಯ ಸಮಸ್ಯೆಗಳಿಂದ ನಿರಂತರವಾಗಿ ಬಳಲುತ್ತಿದ್ದು, ಲೈಫ್ ಸಫೋರ್ಟ್‌ನಿಂದ ಆಸ್ಪತ್ರೆಯಲ್ಲಿದ್ದರು. ಇದನ್ನು ತೆಗೆದ ನಂತರ ಅವರು ನಿಧನರಾದರು ಎಂದು ಅವರ ಸ್ನೇಹಿತ ಕೆವಿನ್ ನ್ಯಾಶ್ ಅವರು ಸಾಮಾಜಿಕ ಮಾಧ್ಯಮದಲ್ಲಿ ಸುದ್ದಿಯನ್ನು ಬಹಿರಂಗಪಡಿಸಿದ್ದಾರೆ.
ಈ ತಿಂಗಳ ಆರಂಭದಲ್ಲಿ ಹಿಪ್ ಬದಲಿ ಶಸ್ತ್ರಚಿಕಿತ್ಸೆಯಿಂದ ಉಂಟಾಗುವ ತೊಂದರೆಗಳ ನಂತರ ಜೀವ ಬೆಂಬಲದಲ್ಲಿದ್ದರು. ದುರದೃಷ್ಟವಶಾತ್ ಶನಿವಾರ ರಾತ್ರಿ ಸ್ಕಾಟ್ ಹಾಲ್ ಮೂರು ಬಾರಿ ಹೃದಯಾಘಾತಕ್ಕೆ ಒಳಗಾಗಿ ಸಾವನ್ನಪ್ಪಿದ್ದಾರೆ.
ಹಾಲ್‌ನ ದೀಘಕಾಲಿಕ ಗೆಳೆಯ ಕೆವಿನ್ ನ್ಯಾಶ್ ಭಾನುವಾರ ರಾತ್ರಿ ಇನ್‌ಸ್ಟಾಗ್ರಾಮ್ ಅಕೌಂಟ್ ಮೂಲಕ ಈ ಸುದ್ದಿ ಬಹಿರಂಗಪಡಿಸಿದ್ದು, ಅವರ ಕುಟುಂಬಕ್ಕೆ ಮತ್ತು ಅಭಿಮಾನಿಗಳಿಗೆ ದುಃಖ ಭರಿಸುವ ಶಕ್ತಿಯನ್ನ ಭಗವಂತ ನೀಡಲಿ ಎಂದು ತಿಳಿಸಿದ್ದಾರೆ.
ಈ ಕುರಿತಾಗಿ WWE ಫೆಡರೇಶನ್ ಕೂಡ ಟ್ವೀಟ್ ಮಾಡಿದ್ದು, ಎರಡು ಬಾರಿಯ ಹಾಲ್ ಫೇಮರ್ ಸ್ಕಾಟ್ ಹಾಲ್ ಆತ್ಮಕ್ಕೆ ಶಾಂತಿ ಕೋರಿದೆ.
ಹಾಲ್ ಅನ್ನು ಎರಡು ಬಾರಿ WWE ಹಾಲ್ ಆಫ್ ಫೇಮ್‌ಗೆ ಸೇರಿಸಲಾಯಿತು. ಮೊದಲು 2014 ರಲ್ಲಿ ಈ ಗೌರವ ಲಭಿಸಿದ್ರೆ, 2020 ರಲ್ಲಿ nWo ಸದಸ್ಯರಾಗಿ ಆಯ್ಕೆಗೊಂಡಿದ್ದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications