For Quick Alerts
ALLOW NOTIFICATIONS  
For Daily Alerts

Yashasvi Jaiswal: ಟೆಂಟ್‌ನಲ್ಲಿ ವಾಸಿಸಿ, ಪಾನಿಪೂರಿ ಮಾರುತ್ತಿದ್ದ ಯುವಕ ಈಗ ಭಾರತ ಕ್ರಿಕೆಟ್ ತಂಡಕ್ಕೆ ಆಯ್ಕೆ

ಜುಲೈ 12ರಿಂದ ಆರಂಭವಾಗುವು ವೆಸ್ಟ್ ಇಂಡೀಸ್ ವಿರುದ್ಧದ ಸರಣಿಗಾಗಿ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಯು (ಬಿಸಿಸಿಐ) ಶುಕ್ರವಾರ, ಜೂನ್ 23ರಂದು ಭಾರತದ ಟೆಸ್ಟ್ ಮತ್ತು ಏಕದಿನ ತಂಡಗಳನ್ನು ಪ್ರಕಟಿಸಿದೆ.

ಇದೇ ವೇಳೆ ಭಾರತ ಟೆಸ್ಟ್ ತಂಡದ ಭಾಗವಾಗಿ ಯಶಸ್ವಿ ಜೈಸ್ವಾಲ್ ಕೆರಿಬಿಯನ್‌ಗೆ ತೆರಳುತ್ತಿದ್ದಾರೆ. ಉತ್ತರಪ್ರದೇಶ ಮೂಲದ ಈ ಯುವ ಬ್ಯಾಟರ್‌ನ ಬಹುದಿನಗಳ ಕನಸು ಇದೀಗ ನನಸಾಗಿದೆ. ವೃತ್ತಿಪರ ಕ್ರಿಕೆಟಿಗನಾಗಲು ಮತ್ತು ಭಾರತ ತಂಡಕ್ಕಾಗಿ ಆಡಲು ಯಶಸ್ವಿ ಜೈಸ್ವಾಲ್ ಉತ್ತರಪ್ರದೇಶದಿಂದ ಮುಂಬೈಗೆ ಬಂದನು.

Yashasvi Jaiswal: From A Panipuri Seller To Inform Batsman At Team India: Inspiring Journey

ವೆಸ್ಟ್ ಇಂಡೀಸ್ ವಿರುದ್ಧದ ಭಾರತ ಟೆಸ್ಟ್‌ ತಂಡದಲ್ಲಿ ರುತುರಾಜ್ ಗಾಯಕ್ವಾಡ್ ಮತ್ತು ಮುಖೇಶ್ ಕುಮಾರ್ ಅವರೊಂದಿಗೆ ಯಶಸ್ವಿ ಜೈಸ್ವಾಲ್ ಹೆಸರನ್ನು ಬಿಸಿಸಿಐ ಶುಕ್ರವಾರ ಪ್ರಕಟಿಸಿದೆ.

ಯಶಸ್ವಿ ಜೈಸ್ವಾಲ್ ಬಡ ಕುಟುಂಬದ ಹಿನ್ನೆಲೆಯಿಂದ ಬಂದವರಾಗಿದ್ದಾರೆ ಮತ್ತು ದೊಡ್ಡ ಮಟ್ಟದಲ್ಲಿ ಕ್ರಿಕೆಟ್ ಆಡುವ ಹಂಬಲದೊಂದಿಗೆ ಮುಂಬೈಗೆ ಬಂದಿಳಿದರು. ಯಶಸ್ವಿ ಜೈಸ್ವಾಲ್ ಮೊದಲು ಡೈರಿಯಲ್ಲಿ ವಾಸಿಸಬೇಕಾಯಿತು, ಆಗ ಕೆಲವು ಅರೆಕಾಲಿಕವಾಗಿ ಕೆಲಸವನ್ನೂ ಮಾಡಿದ್ದಾನೆ. ಒಂದು ದಿನ ಕೆಲಸದಲ್ಲಿ ಅಗತ್ಯವಿರುವ ಗಮನವನ್ನು ಯಶಸ್ವಿ ಜೈಸ್ವಾಲ್ ನೀಡದ ಕಾರಣ ಡೈರಿಯ ಮಾಲೀಕರು ಕೆಲಸ ಬಿಡಲು ಹೇಳಿದರು.

ಯಶಸ್ವಿ ಜೈಸ್ವಾಲ್ ಸ್ವಂತ ಮನೆಯನ್ನು ಹೊಂದುವ ಮೊದಲು ಅಕ್ಷರಶಃ ಫುಟ್‌ಪಾತ್‌ನಲ್ಲಿ ವಾಸಿಸುತ್ತಿದ್ದರು. ಮುಂಬೈನ ಆಜಾದ್ ಮೈದಾನದ ಹೊರಗಿನ ಟೆಂಟ್‌ಗಳೇ ಯಶಸ್ವಿ ಜೈಸ್ವಾಲ್‌ನ ವಾಸಸ್ಥಾನವಾಗಿತ್ತು. ಮುಂಬೈನ ಸಾಂತಾಕ್ರೂಜ್ ಪ್ರದೇಶದಲ್ಲಿ ಕ್ರಿಕೆಟ್ ಅಕಾಡೆಮಿಯನ್ನು ನಡೆಸುತ್ತಿದ್ದ ಜ್ವಾಲಾ ಸಿಂಗ್ ಅವರಲ್ಲಿ ಕ್ರಿಕೆಟ್ ತರಬೇತಿಗೆ ಸೇರಿಕೊಂಡರು.

ಅಂತಿಮವಾಗಿ ಯಶಸ್ವಿ ಜೈಸ್ವಾಲ್ ಉತ್ತಮ ಮನೆಗೆ ಸ್ಥಳಾಂತರಗೊಂಡರೂ, ಟೆಂಟ್‌ಗಳಲ್ಲಿ ವಾಸಿಸುತ್ತಿದ್ದಾಗ ಆ ಡೇರೆಗಳ ನಿವಾಸಿಗಳಿಗೆ ಕೆಲವೊಮ್ಮೆ ಪಾನಿಪೂರಿಗಳನ್ನು ಮಾರಾಟ ಮಾಡಲು ಸಹಾಯ ಮಾಡುತ್ತಿದ್ದರು.

2023ರ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಯಶಸ್ವಿ ಜೈಸ್ವಾಲ್ ಅವರ ಅತ್ಯುತ್ತಮ ಪ್ರದರ್ಶನದ ಕಾರಣದಿಂದಾಗಿ, ಇದೀಗ ಭಾರತ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಪ್ರಸಕ್ತ ಋತುವಿನಲ್ಲಿ 14 ಪಂದ್ಯಗಳಿಂದ 48.08ರ ಅದ್ಭುತ ಸರಾಸರಿಯಲ್ಲಿ 625 ರನ್ ಬಾರಿಸಿದರು.

ಈ ಮೊದಲು ಯಶಸ್ವಿ ಜೈಸ್ವಾಲ್ ಹ್ಯಾರಿ ಶೀಲ್ಡ್ ಶಾಲಾ ಮಟ್ಟದ ಪಂದ್ಯಾವಳಿಯಲ್ಲಿ 319 ರನ್ ಗಳಿಸಿದರು ಮತ್ತು 19 ವಿಕೆಟ್‌ಗಳನ್ನು ಪಡೆದಿದ್ದರು. ಆ ಪ್ರದರ್ಶನ ಅವರ ಕ್ರಿಕೆಟ್ ಏಳಿಗೆಗೆ ಅಡಿಪಾಯವಾಯಿತು. 2020ರಲ್ಲಿ ಭಾರತದ ಅಂಡರ್-19 ವಿಶ್ವಕಪ್ ತಂಡಕ್ಕೆ ಆಯ್ಕೆಯಾಗುವ ದೊಡ್ಡ ಕ್ಷಣವೊಂದು ಜೈಸ್ವಾಲ್ ಎದುರು ಬಂದಿತು.

ಆಗ ಯಶಸ್ವಿ ಜೈಸ್ವಾಲ್ 133.33ರ ಸರಾಸರಿಯಲ್ಲಿ 400 ರನ್ ಗಳಿಸಿದರು ಮತ್ತು ನಂತರ ಐಪಿಎಲ್ ಹರಾಜಿನಲ್ಲಿ ರಾಜಸ್ಥಾನ ರಾಯಲ್ಸ್ ಫ್ರಾಂಚೈಸಿ 2.4 ಕೋಟಿ ರೂಪಾಯಿ ಮೊತ್ತಕ್ಕೆ ಆಯ್ಕೆಯಾದರು. ಬಾಲ್ಯದಲ್ಲಿ ಪಾನಿಪೂರಿ ಮಾರುತ್ತಿದ್ದವನಿಗೆ ಕೊನೆಗೂ ಅದ್ಧೂರಿ ಮನೆ ಖರೀದಿಸುವ ಕಾಲ ಕೂಡಿಬಂತು.

ಯಶಸ್ವಿ ಜೈಸ್ವಾಲ್ ಜೀವನದ ಮೂಲ ಉದ್ದೇಶ ಭಾರತ ತಂಡಕ್ಕಾಗಿ ಆಡುವುದಾಗಿತ್ತು. ಇದಕ್ಕಾಗಿ ಐಪಿಎಲ್ 2023ರಲ್ಲಿ ಅದ್ಭುತ ಬ್ಯಾಟಿಂಗ್ ಪ್ರದರ್ಶನ ನೀಡಿ ಎಲ್ಲರ ಗಮನ ಸೆಳೆದರು. ಮುಂಬೈ ಇಂಡಿಯನ್ಸ್ ವಿರುದ್ಧ 62 ಎಸೆತಗಳಲ್ಲಿ 122 ರನ್ ಗಳಿಸಿದರು. ಈ ಇನ್ನಿಂಗ್ಸ್‌ನಲ್ಲಿ ಕೇವಲ 53 ಎಸೆತಗಳಲ್ಲಿ ಶತಕ ಸಿಡಿಸಿದ್ದರು.

2023ರ ಐಪಿಎಲ್ ನಂತರ ರುತುರಾಜ್ ಗಾಯಕ್ವಾಡ್ ಮದುವೆಯಾಗಲು ನಿರ್ಧರಿಸುವುದರೊಂದಿಗೆ, ಬ್ಯಾಕಪ್ ಆರಂಭಿಕ ಸ್ಥಾನಕ್ಕೆ ಬದಲಿಯಾಗಿ ಯಶಸ್ವಿ ಜೈಸ್ವಾಲ್ ಅವರನ್ನು ಆಯ್ಕೆ ಮಾಡಲಾಯಿತು. ಇದೀಗ ಯಶಸ್ವಿ ಜೈಸ್ವಾಲ್ ಟೆಸ್ಟ್ ತಂಡದ ಭಾಗವಾಗಿ ವೆಸ್ಟ್ ಇಂಡೀಸ್‌ ವಿರುದ್ಧ 2 ಟೆಸ್ಟ್ ಪಂದ್ಯಗಳನ್ನು ಆಡಲಿದ್ದಾರೆ.

ಕೆಲವು ವರ್ಷಗಳಿಂದ 3ನೇ ಕ್ರಮಾಂಕದಲ್ಲಿ ಭಾರತದ ಖಾಯಂ ಆಟಗಾರರಾಗಿದ್ದ ಚೇತೇಶ್ವರ ಪೂಜಾರ ಅವರನ್ನು ವೆಸ್ಟ್ ಇಂಡೀಸ್‌ ವಿರುದ್ಧಸ ಸರಣಿಯಿಂದ ಕೈಬಿಟ್ಟಿರುವುದರಿಂದ ಯಶಸ್ವಿ ಜೈಸ್ವಾಲ್ ರಾಷ್ಟ್ರೀಯ ತಂಡದ ಪರ ಚೊಚ್ಚಲ ಟೆಸ್ಟ್ ಪಂದ್ಯವಾಡುವ ಅವಕಾಶ ಹೆಚ್ಚಿದೆ.

ಯಶಸ್ವಿ ಜೈಸ್ವಾಲ್ ಆಡುವ 11ರ ಬಳಗದಲ್ಲಿ ಸ್ಥಾನ ಪಡೆದು ಶತಕ ಗಳಿಸಿದರೆ, ಟೆಸ್ಟ್ ಕ್ರಿಕೆಟ್‌ನಲ್ಲಿ ಸುದೀರ್ಘ ವೃತ್ತಿಜೀವನದ ಆದಿಯಾಗಬಹುದು. ಇದು ಕ್ರಿಕೆಟ್ ಅನ್ನು ಆರಾಧಿಸುವ ಪ್ರತಿ ಭಾರತೀಯನ ಕನಸಾಗಿರುತ್ತದೆ.

Story first published: Friday, June 23, 2023, 19:50 [IST]
Other articles published on Jun 23, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+