ಯೂತ್ ಒಲಿಂಪಿಕ್ಸ್: ಶೂಟಿಂಗ್ ನಲ್ಲಿ ಮನು ಭಾಕರ್ ಗೆ ಐತಿಹಾಸಿಕ ಬಂಗಾರ

ಬ್ಯೂನಸ್ ಏರ್ಸ್, ಅಕ್ಟೋಬರ್ 10: ಅರ್ಜೆಂಟೀನಾದ ಬ್ಯೂನಸ್ ಏರ್ಸ್ ನಲ್ಲಿ ನಡೆಯುತ್ತಿರುವ ಯೂತ್ ಒಲಿಂಪಿಕ್ಸ್ ನಲ್ಲಿ ಭಾರತದ ಶೂಟರ್ ಮನು ಭಾಕರ್ ಬಂಗಾರ ಗೆದ್ದಿದ್ದಾರೆ. ಮಹಿಳಾ ವಿಭಾಗದ 10 ಮೀ. ಏರ್ ಪಿಸ್ತೂಲ್ ನಲ್ಲಿ ಭಾಕರ್ ಐತಿಹಾಸಿಕ ಬಂಗಾರ ಜಯಿಸಿದರು.
ಅಕ್ಟೋಬರ್ 9ರ ಮಂಗಳವಾರ ನಡೆದ ಸ್ಪರ್ಧೆಯಲ್ಲಿ 16ರ ಹರೆಯದ ಭಾಕರ್ 236.5 ಅಂಕ ಕಲೆ ಹಾಕುವುದರೊಂದಿಗೆ ಚಿನ್ನ ತನ್ನದಾಗಿಸಿಕೊಂಡರು. ಇತ್ತೀಚೆಗೆ ಮುಕ್ತಾಯಗೊಂಡ ಇಂಡೋನೇಷ್ಯಾ ಏಷ್ಯಾನ್ ಗೇಮ್ಸ್ ನಲ್ಲಿ ಮತ್ತು ವರ್ಲ್ಡ್ ಚಾಂಪಿಯನ್ ಶಿಪ್ ನಲ್ಲಿ ಮನು ಬರಿಗೈಯಲ್ಲಿ ವಾಪಸ್ಸಾಗಿದ್ದರು.
ಇದೇ ವಿಭಾಗದಲ್ಲಿ ಬೆಳ್ಳಿ ಪದಕ ರಷ್ಯಾದ ಐನಾ ಎನಿನಾ ಪಾಲಾಯಿತು. ಎನಿನಾ ಒಟ್ಟು 235.9 ಅಂಕಗಳೊಂದಿಗೆ ರಜತ ಪದಕ ಗೆದ್ದುಕೊಂದರೆ, ರಷ್ಯಾದವರೇ ನಿನೊ ಖುಟ್ಸಿಬೆರಿಜ್ ಅವರು ಕಂಚಿಗೆ ತೃಪ್ತಿಪಟ್ಟರು.
ಪದಕ ಗೆದ್ದ ಬಳಿಕ ಖುಷಿ ಹಂಚಿಕೊಂಡ ಭಾಕರ್, 'ಈ ಜಯ ನನಗೆ ಬಹು ಮುಖ್ಯವಾದುದು, ತುಂಬಾ ವಿಶೇಷವಾದುದು. ಏಷ್ಯಾನ್ ಗೇಮ್ಸ್ ನಲ್ಲಿ ನಿರಾಶೆ ಅನುಭವಿಸಿದ್ದ ನನಗೆ ಈ ಗೆಲುವು ಆತ್ಮಸ್ಥೈರ್ಯ ತುಂಬಿದೆ. ದೇಶಕ್ಕಾಗಿ ಇನ್ನೂ ಹೆಚ್ಚಿನ ಪದಕ ಗೆಲ್ಲುವತ್ತ ನಾನು ಗಮನ ಹರಿಸುತ್ತೇನೆ' ಎಂದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications