Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಯೂತ್ ಒಲಿಂಪಿಕ್ಸ್: ವೇಟ್ ಲಿಫ್ಟಿಂಗ್ ನಲ್ಲಿ ಜೆರೆಮಿಗೆ ಐತಿಹಾಸಿಕ ಬಂಗಾರ

Youth Olympics: Jeremy wins Indias first-ever individual weightlifting Gold

ನವದೆಹಲಿ, ಅಕ್ಟೋಬರ್ 9: ಬ್ಯೂನಸ್ ಏರ್ಸ್ ನಲ್ಲಿ ನಡೆಯುತ್ತಿರುವ ಯೂತ್ ಒಲಿಂಪಿಕ್ಸ್ ನಲ್ಲಿ ಭಾರತದ ಜೆರೆಮಿ ಲಲ್ರಿನ್ನಂಗ ಅವರು ಬಾಲಕರ ವೇಟ್ ಲಿಪ್ಟಿಂಗ್ 62 ಕೆಜಿ ವಿಭಾಗದಲ್ಲಿ ಭಾರತಕ್ಕೆ ಐತಿಹಾಸಿಕ ಬಂಗಾರ ಗೆದ್ದಿದ್ದಾರೆ. ವೇಟ್ ಲಿಫ್ಟಿಂಗ್ ನಲ್ಲಿ ಭಾರತ ಚಿನ್ನ ಗೆಲ್ಲುತ್ತಿರುವುದು ಇದೇ ಮೊದಲಬಾರಿ.

ಜೆರಿಮಿ ಅವರು 124 ಕೆಜಿ ಸ್ನ್ಯಾಚ್ ಮತ್ತು 150 ಕೆಜಿ ಕ್ಲೀನ್ ಆ್ಯಂಡ್ ಜರ್ಕ್ ಸೇರಿ ಒಟ್ಟಿಗೆ 274 ಕೆಜಿ ಭಾರ ಎತ್ತುವ ಮೂಲಕ ಬಂಗಾರ ಕೊರಳಿಗೇರಿಸಿಕೊಂಡಿದ್ದಾರೆ. ಸದ್ಯ 15ರ ಹರೆಯದವರಾಗಿರುವ ಜೆರಿಮಿ ಅಕ್ಟೋಬರ್ 26ರಂದು 16ರ ಹರೆಯಕ್ಕೆ ಕಾಲಿರಿಸುತ್ತಿದ್ದಾರೆ.

263 ಕೆಜಿ (122 ಕೆಜಿ + 141 ಕೆಜಿ) ಭಾರ ಎತ್ತಿದ ಟರ್ಕಿಯ ಟೊಪ್ಟಾಸ್ ಕ್ಯಾನರ್ ಅವರು ಬೆಳ್ಳಿ ಗೆದ್ದುಕೊಂಡರೆ, ಕೊಲಂಬಿಯಾದ ವಿಲ್ಲಾರ್ ಎಸ್ಟಿವನ್ ಜೋಸ್ ಅವರು 260 ಕೆಜಿ (115 ಕೆಜಿ + 143 ಕೆಜಿ) ಸಾಧನೆಯೊಂದಿಗೆ ಕಂಚಿನ ಪದಕ ತನ್ನದಾಗಿಸಿಕೊಂಡರು.

Story first published: Tuesday, October 9, 2018, 15:16 [IST]
Other articles published on Oct 9, 2018
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+