Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

Rashmika-Vijay: ವೈವಾಹಿಕ ಜೀವನಕ್ಕೆ ಕಾಲಿಟ್ಟ ರಶ್ಮಿಕಾ-ವಿಜಯ್;ಬೆಳಗ್ಗೆ ತೆಲುಗು, ಸಂಜೆ ಕೊಡವ ಸಂಪ್ರದಾಯದಂತೆ ಮದುವೆ

ಕಳೆದ ಕೆಲವು ದಿನಗಳಿಂದ ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ಮದುವೆ ಸಂಭ್ರಮ ಮನೆ ಮಾಡಿತ್ತು. ಹಳದಿ, ಮೆಹಂದಿ, ಸಂಗೀತ್ ಅಂತ ಈ ಜೋಡಿ ಸಂಭ್ರಮದಲ್ಲಿ ಮುಳುಗಿ ಎದ್ದಿತ್ತು. ಕಳೆದ ಕೆಲವು ದಿನಗಳಿಂದ ರಾಜಸ್ಥಾನದ ಉದಯಪುರದಲ್ಲಿ ರಶ್ಮಿಕಾ-ವಿಜಯ್ ವೆಡ್ಡಿಂಗ್ ಮೂಡ್‌ ಆವರಿಸಿಕೊಂಡಿತ್ತು. ಇಂದು (ಫೆಬ್ರವರಿ 26) ಈ ಜೋಡಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.

ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ ಮಂದಣ್ಣ ಇಬ್ಬರು ಪಕ್ಕಾ ತೆಲುಗು ಹಿಂದೂ ಸಂಪ್ರದಾಯದಂತೆ ಸಪ್ತಪದಿ ತುಳಿದಿದ್ದಾರೆ. ಮೊದಲೇ ವರದಿಯಾದಂತೆ ಈ ಜೋಡಿ ಎರಡು ಸಂಪ್ರದಾಯದಂತೆ ಮದುವೆ ಆಗಲಿದ್ದಾರೆ. ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದಂತೆ ವಿಜಯ್ ದೇವರಕೊಂಡ ಮನೆಯ ಸಂಪ್ರದಾಯದಂತೆ ಈ ಜೋಡಿ ಇಂದು ಬೆಳಗ್ಗೆ 8 ಗಂಟೆಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದೆ.


Rashmika Mandanna and Vijay Deverakonda tie the knot with telugu hindu tradition

ಈ ಮೂಲಕ ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ಇಬ್ಬರೂ ಅಧಿಕೃತವಾಗಿ ದಂಪತಿಗಳಾಗಿದ್ದಾರೆ. ಸದ್ಯ ಮದುವೆ ಬಗ್ಗೆ ಹೆಚ್ಚಿನ ಮಾಹಿತಿ ಹೊರಬಿದ್ದಿಲ್ಲ. ಅಭಿಮಾನಿಗಳು ಇಬ್ಬರ ಮದುವೆ ಫೋಟೋಗಳನ್ನು ಕಣ್ತುಂಬಿಕೊಳ್ಳುವುದಕ್ಕೆ ಎದುರು ನೋಡುತ್ತಿದ್ದಾರೆ. ಹಾಗಂತ ಇಲ್ಲಿಗೆ ಮದುವೆ ಮುಗಿದಿಲ್ಲ. ಇನ್ನೂ ಸಂಜೆ ಕೊಡವ ಸಂಸ್ಖೃತಿಯಂತೆ ಮತ್ತೊಮ್ಮೆ ಮದುವೆ ಆಗಲಿದ್ದಾರೆ.

ಇಂಡಿಯಾ ಟುಡೇ ವರದಿಯಂತೆ ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ಇಬ್ಬರೂ ಎರಡು ಸಂಪ್ರದಾಯದಂತೆ ವಿವಾಹವಾಗಲಿದ್ದಾರೆ. ರಶ್ಮಿಕಾ ಮೂಲತ: ಕೊಡಗಿನವರಾಗಿದ್ದರಿಂದ ಕೊಡವ ಸಂಪ್ರದಾಯದಂತೆಯೂ ವಿವಾಹವಾಗಲಿದ್ದಾರೆ. ವಿಜಯ್ ದೇವರಕೊಂಡು ಕೊಡವ ಉಡುಪು ಧರಿಸಿ, ರಶ್ಮಿಕಾ ಜೊತೆ ಕಾಣಿಸಿಕೊಳ್ಳಲಿದ್ದಾರೆ. ಸದ್ಯ ತಮ್ಮ ವಿವಾಹದ ಸಂಭ್ರಮವನ್ನು ಈ ಜೋಡಿ ಕೇವಲ ಕುಟುಂಬಸ್ಥರು ಹಾಗೂ ಆತ್ಮೀಯರಿಗಷ್ಟೇ ಮೀಸಲಾಗಿ ಇಟ್ಟಿದ್ದಾರೆ.

ಅಭಿಮಾನಿಗಳ 'ವಿರೋಷ್' ಈಗ ನಿಜವಾದ ಜೋಡಿ: ಎರಡು ಪದ್ಧತಿಯಲ್ಲಿ ರಶ್ಮಿಕಾ-ವಿಜಯ್ ಮದುವೆ

ಕಳೆದ ಮೂರು ದಿನಗಳಿಂದ ರಶ್ಮಿಕಾ-ವಿಜಯ್ ರಾಜಸ್ಥಾನದ ಉದಯಪುರದಲ್ಲಿ ಬೀಡುಬಿಟ್ಟಿದ್ದು ತಮ್ಮ ಮದುವೆ ಒಂದೊಂದು ಕ್ಷಣವನ್ನು ಎಂಜಾಯ್ ಮಾಡುತ್ತಿದ್ದಾರೆ. ಈ ಜೋಡಿಗೆ ಕ್ಲೋಸ್ ಇರುವ ಚಿತ್ರರಂಗದ ಆತ್ಮೀಯರು ಕೂಡ ಮದುವೆಯಲ್ಲಿ ಭಾಗಿಯಾಗಿದ್ದಾರೆ. ರಣ್ಬೀರ್ ಕಪೂರ್, ಸಂದೀಪ್ ರೆಡ್ಡಿ ವಂಗಾ ವಿವಾಹದಲ್ಲಿ ಭಾಗಿಯಾಗಿದ್ದಾರೆ ಎನ್ನಲಾಗಿದೆ. ಇನ್ನು ರಶ್ಮಿಕಾ ಗೆಳತಿ ಆಶಿಕಾ ರಂಗನಾಥ್ ಈಗಾಗಲೇ ರಾಜಸ್ಥಾನದ ಉದಯಪುರದಲ್ಲಿ ಇದ್ದಾರೆ. ಇನ್ನೂ ಯಾರೆಲ್ಲ ಭಾಗಿಯಾಗಿದ್ದಾರೆ ಅನ್ನೋದು ಇನ್ನಷ್ಟೇ ಗೊತ್ತಾಗ ಬೇಕಿದೆ.


Rashmika Mandanna and Vijay Deverakonda tie the knot with telugu hindu tradition

ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ ಮಂದಣ್ಣ ಪರಿಚಯ ಶುರುವಾಗಿದ್ದು 2018ರಲ್ಲಿ. ಇಬ್ಬರೂ 'ಗೀತಾ ಗೋವಿಂದಂ' ಸಿನಿಮಾ ಮಾಡುವಾಗ ಸೆಟ್ಟಿನಲ್ಲಿ ಪರಿಚಯವಾಗಿ ಅದು ಪ್ರೀತಿಗೆ ತಿರುಗಿತ್ತು. ಈ ಸಿನಿಮಾ ಬ್ಲಾಕ್‌ಬಸ್ಟರ್ ಹಿಟ್ ಆಯ್ತು. ಈ ಜೋಡಿ ಬಗ್ಗೆ ಸಿನಿಪ್ರಿಯರಿಗೆ ಸಿಕ್ಕಾಪಟ್ಟೆ ಇಷ್ಟ ಆಗಿದ್ದರು. ಇತ್ತ ಇಬ್ಬರಲ್ಲೂ ಪ್ರೀತಿ ಚಿಗುರೊಡೆದಿತ್ತು. ಇದೇ ಸಿನಿಮಾದಿಂದ ಈ ಜೋಡಿ ಡೇಟಿಂಗ್ ಆರಂಭಿಸಿದ್ದರು.

'ಗೀತಾ ಗೋವಿಂದಂ' ಸಿನಿಮಾದಿಂದ ರಶ್ಮಿಕಾ ಹಾಗೂ ವಿಜಯ್ ದೇವರಕೊಂಡ ಬೆಸ್ಟ್ ಪೇರ್ ಲಿಸ್ಟ್ ಸೇರಿದ್ದರು. 'ಗೀತಾ ಗೋವಿಂದಂ' ಸಿನಿಮಾ ಬಳಿಕ ಈ ಜೋಡಿ 'ಡಿಯರ್ ಕಾಮ್ರೆಡ್' ಸಿನಿಮಾದಲ್ಲಿ ಒಟ್ಟಿಗೆ ನಟಿಸಿದರು. ಆದರೆ, ಈ ಸಿನಿಮಾ ಅಂದುಕೊಂಡಷ್ಟು ಬಾಕ್ಸಾಫೀಸ್‌ನಲ್ಲಿ ಸದ್ದು ಮಾಡಿಲ್ಲ. ಇಲ್ಲಿಂದ ಇಬ್ಬರ ಲವ್ ಸ್ಟೋರಿಗೆ ಮತ್ತಷ್ಟು ರೆಕ್ಕೆ ಪುಕ್ಕಗಳು ಅಂಟಿಕೊಂಡಿದ್ದವು. ಇದಾದ್ಮೇಲೆ ಈ ಜೋಡಿ ಪಾರ್ಟಿ, ಜಿಮ್, ಪ್ರವಾಸ ಅಂತ ಸುದ್ದಿಯಾಗಿತ್ತು. ಆಗಲೂ ತಮ್ಮ ಡೇಟಿಂಗ್ ವಿಷಯವನ್ನು ಒಪ್ಪಿಕೊಂಡಿರಲಿಲ್ಲ. ಕೊನೆಗೂ ಈ ಜೋಡಿ ತಮ್ಮ ಪ್ರೀತಿಯನ್ನು ಮತ್ತೊಂದು ಹಂತಕ್ಕೆ ತೆಗೆದುಕೊಂಡು ಹೋಗಿದ್ದಾರೆ. ವೈವಾಹಿಕ ಜೀವನಕ್ಕೆ ಎಂಟ್ರಿ ಕೊಟ್ಟಿದ್ದಾರೆ.

Credit: Filmibeat

Story first published: Thursday, February 26, 2026, 8:23 [IST]
Other articles published on Feb 26, 2026
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+