Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಮದುವೆ ಮನೆಯಲ್ಲೇ ಮತ್ತೊಬ್ಬಳ ಜೊತೆ ಸರಸ ? ಸ್ಮೃತಿ ಮಂಧಾನ ಕೈಗೆ ಸಿಕ್ಕಿ ಬಿದ್ದಿದ್ದ ಪಲಾಶ್ ಮುಚ್ಚಲ್-ಸ್ಪೋಟಕ ಸತ್ಯ ಬಯಲು

ಹಿಂದೆ ಒಂದು ಕಾಲ ಇತ್ತು. ಆ ಕಾಲದಲ್ಲಿ ಪ್ರೇಮಕ್ಕೆ ಒಂದು ಅರ್ಥ ಇತ್ತು. ಎದುರಾದ ಎಲ್ಲ ಅಡೆ ತಡೆಯನ್ನು ದಾಟಿಕೊಂಡು ಎರಡು ಹೃದಯಗಳ ಮಿಲನವಾಗುತ್ತಿತ್ತು. ಅರಳಿದ ಪ್ರೇಮಾಂಕುರ ಎರಡು ಜೀವಗಳನ್ನು ಉಸಿರಿಗೆ ಉಸಿರು ತಾಕುವಷ್ಟು ಹತ್ತಿರವನ್ನಾಗಿಸುತ್ತಿತ್ತು. ಹೀಗೆ ಕುದುರಿದ ಪ್ರೀತಿ ಜೀವಮಾನವಡೀ ಜೊತೆಯಾಗೇ ಬಾಳಿಸುತ್ತಿತ್ತು. ಆದರೆ ಈಗ ಹಾಗಿಲ್ಲ. ಪ್ರೀತಿ ಅನ್ನೋ ಪದಕ್ಕೆ ಅರ್ಥ ಬದಲಾಗದೇ ಇದ್ರೂ, ಈ ಪ್ರೀತಿಯನ್ನ ಅರ್ಥೈಸಿಕೊಳ್ಳುವ ರೀತಿ ಬದ್ಲಾಗ್ಬಿಟ್ಟಿದೆ.

ಅದರಲ್ಲಿಯೂ ಬಣ್ಣದ ಪ್ರಪಂಚದಲ್ಲಿ ಇವಳಿಲ್ಲದ್ರೆ ಅವಳು.. ಅವಳು ಅಲ್ಲ ಅಂದರೆ ಮತ್ತೊಬ್ಬಳು.. ಹಂಗಾಗೇ ಈ ಪ್ರೀತೀಲೂ ನಾನಾ ವೆರೈಟಿಗಳು ಬಂದ್ಬಿಟ್ಟಿವೆ. ಪಾರ್ಟ್ ಟೈಮ್ ಪ್ರೀತಿ.. ಫುಲ್ ಟೈಮ್ ಪ್ರೀತಿ.. ಟೈಮ್ ಟು ಟೈಮ್ ಪ್ರೀತಿ.. ಟೈಮ್ ಬೈ ಟೈಮ್ ಪ್ರೀತಿ ಅಂತೆಲ್ಲ ಚಿತ್ರರಂಗದಲ್ಲಿನ ಅನೇಕರು ಯೋಚನೆ ಮಾಡ್ತಾರೆ. ಮುಂದಿರೋ ಲೈಫ್‌ನೇ ಮರೆತು ಬಿಡ್ತಾರೆ. ಉದಾಹರಣೆಗೆ ಪಲಾಶ್ ಮುಚ್ಚಲ್ ಅವರನ್ನೇ ತೆಗೆದುಕೊಳ್ಳಿ.


Smriti Mandhana s Friend Claims Palash Muchhal Was Found With Another Woman and Beaten by Cricketers

ಹೌದು, ಪಲಾಶ್ ಮುಚ್ಚಲ್.. ಖ್ಯಾತ ಗಾಯಕಿ ಪಲಕ್ ಮುಚ್ಚಲ್ ಅವರ ಸಹೋದರ. ಬಾಲಿವುಡ್‌ನಲ್ಲಿ ಈಗಾಗಲೇ ಸಂಗೀತ ನಿರ್ದೇಶಕರಾಗಿ ಕೂಡ ಗುರುತಿಸಿಕೊಂಡಿರುವ ಪಲಾಶ್ ''ಡಿಶ್ಕ್ಯಾಂವ್''.. ''ಅರ್ಧ''.. ''ಭೂತನಾಥ್ ರಿಟರ್ನ್ಸ್''.. ''ಅಮಿತ್ ಸಹಾನಿ ಕಿ ಲಿಸ್ಟ್''.. ''ಮಿಸ್ ತನಕಪುರ ಹಾಜಿರ್ ಹೋ''.. ಅಂತಹ ಚಿತ್ರಗಳಿಗೆ ಸಂಗೀತವನ್ನು ನೀಡಿದ್ದಾರೆ.

ಬಾಲಿವುಡ್‌ನ ಅತೀ ಕಿರಿಯ ಸಂಗೀತ ನಿರ್ದೇಶಕ ಎನ್ನುವ ಹೆಗ್ಗಳಿಕೆಗೆ ಕೂಡ ಪಾತ್ರವಾಗಿರುವ ಪಲಾಶ್ ''ಆರ್ಧ'' ಮತ್ತು ''ಕಾಮ್ ಚಾಲೂ ಹೈ'' ಚಿತ್ರಗಳ ನಿರ್ದೇಶಕ ಕೂಡ ಹೌದು. ಸದ್ಯ ''ರಾಜು ಬಾಜೇವಾಲಾ'' ಎಂಬ ಇವರ ನಿರ್ದೇಶನದ ಚಿತ್ರ ತೆರೆಗೆ ಬರಬೇಕಿದೆ.

ಇಂಥಾ ಪಲಾಶ್ ಮುಚ್ಚಲ್ ಜೊತೆ ಭಾರತ ಮಹಿಳಾ ಕ್ರಿಕೆಟ್ ತಂಡದ ಸ್ಟಾರ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕಿ ಸ್ಮೃತಿ ಮಂಧಾನ ಕಳೆದ ವರ್ಷದ ಅಂತ್ಯದಲ್ಲಿ ಮದುವೆಯಾಗಬೇಕಿತ್ತು. ಸಪ್ತಪದಿ ತುಳಿಯಬೇಕಿತ್ತು.

ಆದರೆ, ಮದುವೆಗೆ ಇನ್ನೇನು ಕೆಲವೇ ಗಂಟೆ ಬಾಕಿ ಇದ್ದಾಗ ಈ ಮದುವೆ ಮುರಿದು ಬಿತ್ತು. ಆದರೆ ಇದಕ್ಕೆ ಕಾರಣ ಮಾತ್ರ ಇಲ್ಲಿಯವರೆಗೆ ಗೊತ್ತಾಗಿಲ್ಲ. ಈ ಹಿನ್ನೆಲೆ ಹಲವರು ಇಬ್ಬರು ಏಕಾಏಕಿ ದೂರವಾಗಿದ್ದೇಕೆ ಎನ್ನುವ ಚರ್ಚೆಯನ್ನು ಇನ್ನೂ ಮಾಡುತ್ತಿದ್ದಾರೆ. ಕಾರಣವನ್ನು ಕೂಡ ಹುಡುಕುತ್ತಿದ್ದಾರೆ.


Smriti Mandhana s Friend Claims Palash Muchhal Was Found With Another Woman and Beaten by Cricketers

ಹೀಗಿರುವಾಗ ಸ್ಮೃತಿ ಮಂಧಾನ ಅವರ ಬಾಲ್ಯದ ಗೆಳೆಯ ವಿಜ್ಞಾನ್ ಮಾನೆ ಮಾನೆ ಮದುವೆ ಮುರಿದು ಬೀಳಲು ಪಲಾಶ್ ಮುಚ್ಚಲ್ ಅವರ ಅನೈತಿಕ ಸಂಬಂಧವೇ ಕಾರಣ ಎಂದು ಬಾಂಬ್ ಎಸೆದಿದ್ದಾರೆ. ಭಾರತೀಯ ಮಹಿಳಾ ಕ್ರಿಕೆಟಿಗರು ಪಲಾಶ್ ಮುಚ್ಚಲ್ ಅವರ ಬೆಂಡೆತ್ತಿದ್ದರು ಎಂದಿದ್ದಾರೆ.

ಈ ಕುರಿತು ''ಹಿಂದೂಸ್ತಾನ್ ಟೈಮ್ಸ್''ಗೆ ನೀಡಿರುವ ಸಂದರ್ಶನದಲ್ಲಿ ಮಾತನಾಡಿರುವ ವಿಜ್ಞಾನ್ ಮಾನೆ ಆ ಮದುವೆ ಸಮಾರಂಭದಲ್ಲಿ (ನವೆಂಬರ್ 23-2025) ನಾನು ಕೂಡ ಇದ್ದೇ ಎಂದು ಹೇಳಿದ್ದಾರೆ. ಆ ದಿನ ಪಲಾಶ್ ಬೇರೆ ಮಹಿಳೆಯ ಜೊತೆ ಸರಸವಾಡುತ್ತಿದ್ದ ಸಮಯದಲ್ಲಿ ರೆಡ್ ಹ್ಯಾಡ್ ಆಗಿ ಸ್ಮೃತಿ ಮಂಧಾನಾ ಕೈಗೆ ಸಿಕ್ಕಿ ಬಿದ್ದಿದ್ದ ಎಂದು ಹೇಳಿರುವ ವಿಜ್ಞಾನ್ ಅದೊಂದು ಭಾರೀ ಭಯಾನಕ ದೃಶ್ಯವಾಗಿತ್ತು, ಆ ನಂತರ ಪರಿಸ್ಥಿತಿ ತುಂಬಾ ಉದ್ವಿಗ್ನವಾಯಿತು ಎಂದು ಹೇಳಿದ್ದಾರೆ. ಮದುವೆಯಲ್ಲಿ ಭಾಗವಹಿಸಲು ಬಂದಿದ್ದ ಶ್ರೇಯಾಂಕ ಪಾಟೀಲ್, ಜೆಮಿಮಾ, ರಾಧಾ ಸೇರಿ ಭಾರತೀಯ ಮಹಿಳಾ ಕ್ರಿಕೆಟಿಗರು ಅಲ್ಲೇ ಪಲಾಶ್‌ಗೆ ಧರ್ಮದೇಟು ಕೂಡ ಕೊಟ್ಟಿದ್ದರು ಎಂದು ಹೇಳಿದ್ದಾರೆ.

ಹೀಗೆ ಆ ದಿನ ಆಗಿದ್ದೇನು ಎಂದು ಹೇಳಿರುವ ವಿಜ್ಞಾನ್ ಮಾನೆ, ಸದ್ಯ ಪಲಾಶ್ ಮುಚ್ಚಲ್ ವಿರುದ್ಧ ಸಾಂಗ್ಲಿಯಲ್ಲಿ 40 ಲಕ್ಷ ರೂಪಾಯಿಯ ವಂಚನೆ ಪ್ರಕರಣ ದಾಖಲಿಸಿದ್ದಾರೆ. ಸಿನಿಮಾ ಮಾಡುವುದಾಗಿ ಹೇಳಿ ಹಣ ಪಡೆದು ನಂಬಿಸಿ ಮೋಸ ಮಾಡಿದ್ದಾರೆ ಎಂದು ತಮ್ಮ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಅದಕ್ಕೆ ಸಂಬಂಧಿಸಿದಂತೆ ಬೇಕಾದ ಪುರಾವೆಗಳನ್ನು ಕೂಡ ಪೊಲೀಸರಿಗೆ ನೀಡಿದ್ದಾರೆ.

ದೂರು ದಾಖಲಾಗುತ್ತಿದ್ದಂತೆಯೇ ತಮ್ಮ ಸೋಶಿಯಲ್ ಮೀಡಿಯಾ ಮೂಲಕ ಪ್ರತಿಕ್ರಿಯೆ ನೀಡಿರುವ ಪಲಾಶ್ ನನ್ನ ವಿರುದ್ಧದ ಈ ಹೇಳಿಕೆಗಳು ಸಂಪೂರ್ಣವಾಗಿ ಆಧಾರರಹಿತ ಮತ್ತು ತಪ್ಪು ಎಂದು ಹೇಳಿದ್ದಾರೆ. ನನ್ನ ಖ್ಯಾತಿಗೆ ಧಕ್ಕೆ ತರುವ ಪ್ರಯತ್ನವನ್ನು ಮಾಡಲಾಗುತ್ತಿದೆ ಎಂದಿದ್ದಾರೆ. ಸದ್ಯ ವಿಜ್ಞಾನ್ ಮಾನೆ ಮದುವೆ ಮುರಿದು ಬೀಳಲು ಪಲಾಶ್ ಮುಚ್ಚಲ್ ಅವರ ಹೆಣ್ಣಿನ ಚಪಲವೇ ಕಾರಣವೆಂದು ಹೇಳಿದ್ದು ಪಲಾಶ್ ಇದಕ್ಕೆ ಹೇಗೆ ಪ್ರತಿಕ್ರಿಯಿಸುತ್ತಾರೆ ಎನ್ನುವುದನ್ನು ಕಾದು ನೋಡಬೇಕಿದೆ. ಮೌನ ಮುರಿದು ತಮ್ಮ ಬಾಲ್ಯದ ಗೆಳೆಯನ ಪರ ಸ್ಮೃತಿ ಮಂಧಾನ ನಿಲ್ತಾರಾ ಎನ್ನುವುದನ್ನು ಕೂಡ ನೋಡಬೇಕಿದೆ.

Credit: Filmibeat

Story first published: Saturday, January 24, 2026, 13:03 [IST]
Other articles published on Jan 24, 2026
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+