Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ರುಕ್ಮಿಣಿ ವಸಂತ್ ಹೃದಯ ಗೆದ್ದ ಈ ಚೆಲುವ ಯಾರು? ಕನಕವತಿಯ ಫೋಟೋ ವೈರಲ್ - ಅಯ್ಯಯ್ಯೋ ಎಂದು ಎದೆ ಬಡಿದುಕೊಂಡ ಅಭಿಮಾನಿಗಳು

ಹೇಳಿ ಕೇಳಿ ಇದು ಬಣ್ಣದ ಲೋಕ. ಇಲ್ಲಿ ದಿನಕ್ಕೊಂದು ಸುದ್ದಿಗಳು ಹರಿದಾಡುತ್ತವೆ. ಹೀಗೆ ಹರಿದಾಡುವ ಸುದ್ದಿಗಳಲ್ಲಿ ಕೆಲವು ಸತ್ಯ ಆಗಿದ್ದರೆ ಇನ್ನು ಕೆಲವು ಮಿಥ್ಯ ಆಗಿರುತ್ತವೆ. ಆದರೂ.. ಈ ಅಂತೆ-ಕಂತೆಯ ಸಂತೆಯಲ್ಲಿ ಊಹಾಪೋಹ ಸುದ್ದಿಗಳಿಗೆ ಬರ ಇಲ್ಲ. ಇಂತಹ ಪ್ರಪಂಚದಲ್ಲಿ ತಮ್ಮ ನೆಚ್ಚಿನ ನಾಯಕಿ ಅಪ್ಪಿ ತಪ್ಪಿ ಅಪರಿಚಿತ ವ್ಯಕ್ತಿಯ ಜೊತೆ ತೀರಾ ಆಪ್ತವಾಗಿ ಕಾಣಿಸಿಕೊಂಡರೆ ಮುಗಿಯಿತು.

ಅಭಿಮಾನಿಗಳು ರಾತ್ರಿ ಎಲ್ಲ ನಿದ್ದೆ ಇಲ್ಲದೇ ಒದ್ದಾಡುತ್ತಾರೆ. ಯಾರಿರಬಹುದು ಎಂದು ತಲೆ ಕೆದರಿಕೊಂಡು ಹುಡುಕುತ್ತಾರೆ. ಆ ಹುಡುಗನ ಕುಲ, ಗೋತ್ರ, ಜನ್ಮ ಜಾಲಾಡೋ ವರೆಗೂ ಅವರಿಗೆ ನೆಮ್ಮದಿಯಿರುವುದಿಲ್ಲ. ಹೀಗಿರುವಾಗ ರುಕ್ಮಿಣಿ ವಸಂತ್ ಹುಡುಗನೊಬ್ಬನ ಜೊತೆ ಆತ್ಮೀಯವಾಗಿ ತೆಗೆಸಿಕೊಂಡ ಫೋಟೊ ಕಣ್ಣಿಗೆ ಕಂಡರೆ ಗಂಡು ಅಭಿಮಾನಿಗಳ ಎದೆಯೊಡೆಯದಿರುತ್ತಾ.. ? ಇಂತಹದ್ದೇ ಒಂದು ಅನಿರೀಕ್ಷಿತ ಆಘಾತ ರುಕ್ಮಿಣಿ ವಸಂತ್ ಅವರ ಅಭಿಮಾನಿಗಳಿಗೆ ಸದ್ಯ ಆಗಿದೆ. ಸುರಸುಂದರಾಂಗನ ಜೊತೆ ರುಕ್ಮಿಣಿ ತೆಗೆಸಿಕೊಂಡ ಫೋಟೊ ವೈರಲ್ ಆಗಿದೆ.


unearthed-rukmini-vasanth-s-viral-old-photo-with-siddhant-nag-sparks-intense-dating-buzz

ಹೌದು, ''ಬೀರ್‌ಬಲ್'' ಚಿತ್ರದ ಮೂಲಕ ಕನ್ನಡ ಚಿತ್ರರಂಗ ಪ್ರವೇಶಿಸಿದ ರುಕ್ಮಿಣಿ ವಸಂತ್, ''ಸಪ್ತಸಾಗರದಾಚೆ ಎಲ್ಲೋ ಸೈಡ್ ಎ'' ಮತ್ತು ''ಸೈಡ್ ಬಿ'' ಚಿತ್ರಗಳ ಮೂಲಕ ಕರುನಾಡಿನೆಲ್ಲೆಡೆ ಮನೆ ಮಾತಾದರು. ಅಕ್ಕ-ಪಕ್ಕದ ರಾಜ್ಯದವರ ಕಣ್ಣಿಗೂ ಬಿದ್ದರು. ಕಳೆದ ವರ್ಷ ಬಿಡುಗಡೆಯಾದ ''ಕಾಂತಾರ'' ಮೂಲಕ ಇಡೀ ದೇಶದ ಹೃದಯ ಗೆದ್ದರು.

ಸದ್ಯ ರುಕ್ಮಿಣಿ ವಸಂತ್ ಕನ್ನಡ ಹೊರತು ಪಡಿಸಿ ರಶ್ಮಿಕಾ ಮತ್ತು ಶ್ರೀಲೀಲಾ ಅವರಂತೆಯೇ ಬೇರೆ ಭಾಷೆಗಳಲ್ಲಿ ಬ್ಯುಸಿಯಾಗಿದ್ದಾರೆ. ಇವರ ಹೆಸರಿನಲ್ಲಿ ಭಾರತದೆಲ್ಲೆಡೆ ಅನೇಕ ಅಭಿಮಾನಿ ಸಂಘ ಕೂಡ ಜನ್ಮ ಪಡೆದಿವೆ.

ಇಂಥಾ ರುಕ್ಮಿಣಿ ವಸಂತ್ ಸದ್ದಿಲ್ಲದೇ ಪ್ರೇಮದ ಅಮಲನ್ನೇರಿಸಿಕೊಂಡಿದ್ದಾರಾ.? ಎನ್ನುವ ಅನುಮಾನ ಸದ್ಯ ಹಲವರನ್ನು ಕಾಡುತ್ತಿದೆ. ಚೆಲುವನ ಜೊತೆ ರುಕ್ಮಿಣಿ ವಸಂತ್ ತೆಗೆದುಕೊಂಡಿರುವ ಫೋಟೊ ಒಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಊಹಾಪೋಹಗಳಿಗೆ ಎಡೆ ಮಾಡಿ ಕೊಟ್ಟಿದೆ.

ವೈರಲ್ ಆದ ಈ ಫೋಟೊವನ್ನು ಕಂಡು ರುಕ್ಮಿಣಿ ವಸಂತ್ ಅವರ ಹಲವು ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಕಣ್ಣೀರು ಹಾಕುತ್ತಿದ್ದಾರೆ. ತಮ್ಮ ದುಖ ಹಂಚಿಕೊಳ್ತಿದ್ದಾರೆ. ಆದರೆ ಹುಡುಗನ ಜನ್ಮ ಜಾತಕ ಜಾಲಾಡಿರುವ ಸೋಶಿಯಲ್ ಮೀಡಿಯಾ ಪ್ರವೀಣರ ಬಳಿ ನಿಜಕ್ಕೂ ಈ ವ್ಯಕ್ತಿ ರುಕ್ಮಿಣಿ ವಸಂತ್ ಅವರ ಬಾಯ್‌ಫ್ರೆಂಡಾ..? ಎನ್ನುವುದಕ್ಕೆ ಉತ್ತರ ಇಲ್ಲ. ರುಕ್ಮಿಣಿ ವಸಂತ್ ಕೂಡ ಇಲ್ಲಿಯವರೆಗೆ ತಮ್ಮ ವ್ಯೆಯಕ್ತಿಕ ಜೀವನ ಮತ್ತು ಪ್ರೀತಿಯ ಕುರಿತು ಹೆಚ್ಚಿನ ಮಾಹಿತಿಯನ್ನು ಹಂಚಿಕೊಂಡಿಲ್ಲ. ಫೋಟೊದಲ್ಲಿರುವ ವ್ಯಕ್ತಿ ನನ್ನ ಪ್ರಿಯಕರ ಎಂದು ಯಾವತ್ತು ಹೇಳಿಲ್ಲ.


unearthed-rukmini-vasanth-s-viral-old-photo-with-siddhant-nag-sparks-intense-dating-buzz

ಅಂದ್ಹಾಗೇ ವೈರಲ್ ಆದ ಈ ಫೋಟೊದಲ್ಲಿ ರುಕ್ಮಿಣಿ ಅವರ ತೋಳ ತೆಕ್ಕೆಯಲ್ಲಿ ಬಂಧಿಯಾದ ವ್ಯಕ್ತಿಯ ಹೆಸರು ಸಿದ್ಧಾಂತ್ ನಾಗ್. ಇವರ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲವಾದರೂ ರುಕ್ಮಿಣಿ ವಸಂತ್ ಅವರ ಅಭಿಮಾನಿಗಳು ಮಾಡಿರುವ ತನಿಖೆಯ ಪ್ರಕಾರ ವೃತ್ತಿಯಲ್ಲಿ ಸಿದ್ಧಾಂತ್ ಫೋಟೊಗ್ರಾಫರ್. ಇವರು ಇಬ್ಬರು ಕಳೆದ 8 ವರ್ಷದಿಂದ ಸ್ನೇಹಿತರು. ಸದ್ಯ ಈ ಫೋಟೊ ವೈರಲ್ ಆದ ಬೆನ್ನಲ್ಲೇ ಹಲವರು ಈ ಸ್ನೇಹ ಈಗ ಪ್ರೇಮದ ಸ್ವರೂಪ ಪಡೆದಿದೆ ಎಂಬ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಸಿದ್ಧಾಂತ್ ನಾಗ್ ಅವರ ಕುರಿತು ಹೆಚ್ಚಿನ ಮಾಹಿತಿ ಕಲೆ ಹಾಕುವ ಪ್ರಯತ್ನ ಪಡುತ್ತಿದ್ದಾರೆ.

ನೆನಪಿರಲಿ. ಇನ್ನೊಮ್ಮೆ ನಾವು ನಿಮ್ಮ ಗಮನಕ್ಕೆ ತರುತ್ತಿದ್ದೇವೆ. ಇವೆಲ್ಲವೂ ಅಂತೆ-ಕಂತೆಗಳಷ್ಟೇ. ಅಭಿಮಾನಿಗಳ ಅಭಿಪ್ರಾಯಗಳಷ್ಟೇ. ತಾವು ಪ್ರೀತಿಯಲ್ಲಿ ಬಿದ್ದಿರುವ ವಿಚಾರವನ್ನಾಗಲಿ ಅಥವಾ ವೈರಲ್ ಆದ ಈ ಫೋಟೊ ಹಿಂದಿನ ಕಥೆಯನ್ನಾಗಲಿ..ತಮ್ಮ ಬಗ್ಗೆ ಹಬ್ಬಿರುವ ಈ ಸುದ್ದಿಯ ಬಗ್ಗೆಯಾಗಲಿ.. ರುಕ್ಮಿಣಿ ವಂಸತ್ ಸದ್ಯ ಯಾವುದೇ ಪ್ರತಿಕ್ರಿಯೆಯನ್ನು ನೀಡಿಲ್ಲ.

ಅಂದ್ಹಾಗೇ ಈ ಫೋಟೊ ಇಂದು ನಿನ್ನೆಯದಲ್ಲ. ಎರಡೂವರೆ ವರ್ಷದ ಹಿಂದಿನ ಫೋಟೊ ಇದು. ಖುದ್ದು ಸಿದ್ದಾಂತ್ ನಾಗ್ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಈ ಫೋಟೊ ಹಂಚಿಕೊಂಡಿದ್ದಾರೆ. ಈ ಕ್ಷಣಕ್ಕೂ ಈ ಫೋಟೊ ಇನ್ನೂ ಇದೆ. ಆದರೆ, ಇಲ್ಲಿಯವರೆಗೆ ವೈರಲ್ ಆಗದ ಈ ಫೋಟೊ ಈಗ ವೈರಲ್ ಆಗಿದೆ. ಹಲವರ ಕಣ್ಣಿಗೆ ಈಗ ಬಿದ್ದಿದೆ. ಹೀಗಾಗಿಯೇ ಸಿದ್ದಾಂತ್ ನಾಗ್ ಅವರ ಇನ್‌ಸ್ಟಾಗ್ರಾಮ್ ಖಾತೆಗೆ ದಾಂಗುಡಿ ಇಡುತ್ತಿರುವ ಹಲವು ರುಕ್ಮಿಣಿ ವಸಂತ್ ಅವರ ಅಭಿಮಾನಿಗಳು ತಮ್ಮ ದುಃಖವನ್ನು ಹಂಚಿಕೊಳ್ತಿದ್ದಾರೆ.

ನಿಜಕ್ಕೂ ಸಿದ್ದಾಂತ್ ನಾಗ್ ಯಾರು..? ಅವರ ಹಿನ್ನೆಲೆ ಏನು..? ರುಕ್ಮಿಣಿ ವಸಂತ್ ಮತ್ತು ಸಿದ್ದಾಂತ್ ನಡುವೆ ನಿಜಕ್ಕೂ ಪ್ರೇಮಾಂಕುರವಾಗಿದೆಯಾ..? ಅಥವಾ ಇಬ್ಬರು ಕೇವಲ ಸ್ನೇಹಿತರು ಮಾತ್ರನಾ..? ಈ ಎಲ್ಲ ಪ್ರಶ್ನೆಗಳಿಗೆ ರುಕ್ಮಿಣಿ ವಸಂತ್ ಸದ್ಯ ಉತ್ತರ ಕೊಡಬೇಕಿದೆ. ಇಲ್ಲವಾದಲ್ಲಿ ಮೌನಂ ಸಮ್ಮತಿ ಲಕ್ಷಣಂ ಎಂದು ಅಭಿಮಾನಿಗಳು ಅಂದುಕೊಳ್ಳುವ ಸಾಧ್ಯತೆ ಇದೆ. ನಿಮ್ಮ ಪ್ರಕಾರ ರುಕ್ಮಿಣಿ ಮತ್ತು ಸಿದ್ಧಾಂತ್ ನಡುವೆ ಇರುವುದು ಕೇವಲ ಸ್ನೇಹಾನಾ..? ಅಥವಾ ಪ್ರೀತಿನಾ..? ನಿಮ್ಮ ಅಭಿಪ್ರಾಯವನ್ನು ಕಾಮೆಂಟ್ ಮೂಲಕ ತಿಳಿಸಿ.


unearthed-rukmini-vasanth-s-viral-old-photo-with-siddhant-nag-sparks-intense-dating-buzz

Credit: Filmibeat

Story first published: Saturday, January 24, 2026, 7:50 [IST]
Other articles published on Jan 24, 2026
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+