ವೀನಸ್ ವಿಲಿಯಮ್ಸ್ ದಂಗುಬಡಿಸಿದ 15ರ ಹರೆಯದ ಶಾಲಾ ಬಾಲಕಿ ಗೌಫ್!

ಲಂಡನ್, ಜುಲೈ 2: ಸೋಮವಾರ (ಜುಲೈ 1) ನಡೆದ ವಿಂಬಲ್ಡನ್ ಮೊದಲ ಸುತ್ತಿನ ಸ್ಪರ್ಧೆಯಲ್ಲಿ ಮಾಜಿ ಚಾಂಪಿಯನ್ ವೀನಸ್ ವಿಲಿಯಮ್ಸ್ ಆಘಾತ ಅನುಭವಿಸಿದ್ದಾರೆ. 15ರ ಹರೆಯದ ಶಾಲಾ ಬಾಲಕಿ ಕೋರಿ ಗೌಫ್ ವಿರುದ್ಧ ವೀನಸ್ ಸೋಲನುಭವಿಸಿದ್ದಾರೆ. ಬಲಾಡ್ಯೆಯನ್ನು ಮಣಿಸುವ ಮೂಲಕ ಗೌಫ್ ಅವರು ವಿಂಬಲ್ಡನ್ ಇತಿಹಾಸ ನಿರ್ಮಿಸಿದ್ದಾರೆ.
ಸೋಮವಾರ ನಡೆದ ಮಹಿಳಾ ಸಿಂಗಲ್ಸ್ ಮೊದಲ ಸುತ್ತಿನ ಸ್ಪರ್ಧೆಯಲ್ಲಿ ಅಮೆರಿಕಾ ಆಟಗಾರ್ತಿ ವೀನಸ್ ಅವರ ವಿರುದ್ಧ ಅಮೆರಿಕಾದವರೇ ಆದ ಗೌಫ್, 6-4, 6-4ರ ನೇರ ಸೆಟ್ ಗೆಲುವು ದಾಖಲಿಸಿದರು. ಈ ಸೋಲಿನೊಂದಿಗೆ ವಿಲಿಯಮ್ಸ್ ಟೂರ್ನಿಯಿಂದ ಹೊರ ಬಿದ್ದಿದ್ದಾರೆ.
36ರ ಹರೆಯದ ವೀನಸ್ ವಿಲಿಯಮ್ಸ್ ಸುಮಾರು ಎರಡು ದಶಕಗಳಿಂದಲೂ ಆಲ್ ಇಂಗ್ಲೆಂಡ್ ಕ್ಲಬ್ ನಡೆಸುವ ಪ್ರತಿಷ್ಠಿತ ವಿಂಬಲ್ಡನ್ ಸ್ಪರ್ಧೆಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಸಿಂಗಲ್ಸ್ ವಿಭಾಗದಲ್ಲಿ ಒಟ್ಟು ಐದು ಬಾರಿ ಚಾಂಪಿಯನ್ಸ್ ಅನ್ನಿಸಿಕೊಂಡಿದ್ದಾರೆ ಕೂಡ. ಈ ಐದು ಪ್ರಶಸ್ತಿಗಳಲ್ಲಿ ಎರಡು ಪ್ರಶಸ್ತಿಗಳನ್ನು ವೀನಸ್ ಗೆಲ್ಲುವಾಗ ಕೋರಿ ಗೌಫ್ ಇನ್ನೂ ಜನಿಸಿರಲೇ ಇಲ್ಲ!
1991ರ ಬಳಿಕ ವಿಬಂಲ್ಡನ್ ಮಹಿಳಾ ಸಿಂಗಲ್ಸ್ ವಿಭಾಗದ ಮೊದಲ ಸುತ್ತಿನ ಸ್ಪರ್ಧೆಯಲ್ಲಿ ಜಯಿಸಿದ ಅತೀ ಕಿರಿಯ ಆಟಗಾರ್ತಿಯಾಗಿ ಕೋರಿ ಗೌಫ್ ಇತಿಹಾಸ ನಿರ್ಮಿಸಿದ್ದಾರೆ. ಪಂದ್ಯದ ಬಳಿಕ ಮಾತನಾಡಿದ ಗೌಫ್, 'ಈ ಖುಷಿಯನ್ನು ಹೇಗೆ ವ್ಯಕ್ತಪಡಿಸಬೇಕೆಂದೇ ನನಗೆ ತೋಚುತ್ತಿಲ್ಲ' ಎಂದು ಭಾವುಕರಾಗಿ ನುಡಿದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications