Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಡಬ್ಲ್ಯೂಟಿಎ ವರ್ಷದ ಆಟಗಾರ್ತಿಯಾಗಿ ಅಮೆರಿಕಾದ ಕೆನಿನ್ ಆಯ್ಕೆ

American Sofia Kenin named WTA Player of the Year

ವಾಷಿಂಗ್ಟನ್: ವಿಮೆನ್ಸ್ ಟೆನಿಸ್ ಅಸೋಸಿಯೇಶನ್ (ಡಬ್ಲ್ಯೂಟಿಎ) ವರ್ಷದ ಆಟಗಾರ್ತಿಯಾಗಿ ಅಮೆರಿಕಾದ ಸೋಫಿಯಾ ಕೆನಿನ್ ಆಯ್ಕೆಯಾಗಿದ್ದಾರೆ. ಪ್ರತಿಷ್ಠಿತ ಆಸ್ಟ್ರೇಲಿಯಾ ಓಪನ್‌ನಲ್ಲಿ ಗ್ರ್ಯಾಂಡ್‌ಸ್ಲ್ಯಾಮ್ ಪ್ರಶಸ್ತಿ ಗೆದ್ದ ಸಾಧನೆಗಾಗಿ ಕೆನಿನ್‌ಗೆ ಈ ಗೌರವ ಒಲಿದಿದೆ.

ಆಸ್ಟ್ರೇಲಿಯಾ ಓಪನ್‌ ಸಿಂಗಲ್ಸ್‌ನಲ್ಲಿ ಕೆನಿನ್ ಸೋಫಿಯಾ ಅವರು ವಿಶ್ವ ನಂ.1 ಆಟಗಾರ್ತಿ ಆಸ್ಟ್ರೇಲಿಯಾದ ಆಶ್ಲೇ ಬಾರ್ಟಿ ಅವರನ್ನು ಸೆಮಿಫೈನಲ್‌ನಲ್ಲಿ ಸೋಲಿಸಿದ್ದರು. ಅಲ್ಲದೆ ಮೆಲ್ಬರ್ನ್ ಪಾರ್ಕ್‌ನಲ್ಲಿ ನಡೆದಿದ್ದ ಫೈನಲ್‌ ಪಂದ್ಯದಲ್ಲಿ ಎರಡು ಬಾರಿಯ ಗ್ರ್ಯಾಂಡ್‌ಸ್ಲ್ಯಾಮ್‌ ವಿಜೇತೆ ಸ್ಪೇನ್‌ನ ಗಾರ್ಬೈನ್ ಮುಗುರುಜಾ ಅವರನ್ನು ಸೋಲಿಸಿದ್ದರು.

ಫ್ರೆಂಚ್ ಓಪನ್ ಫೈನಲ್‌ಗೂ ಪ್ರವೇಶಿಸಿದ್ದ ಕೆನಿನ್, ವೃತ್ತಿ ಜೀವನದ ಅತ್ಯುತ್ತಮ ಶ್ರೇಯಾಂಕ 4ರಲ್ಲಿ ಸೀಸನ್ ಕೊನೆಗೊಳಿಸಿದ್ದರು. ಡಬ್ಲ್ಯೂಟಿಎ ವರ್ಷದ ಆಟಗಾರ್ತಿ ಗೌರವಕ್ಕೆ ಪಾತ್ರವಾಗುತ್ತಿರುವ 8ನೇ ಅಮೆರಿಕಾದ ಆಟಗಾರ್ತಿಯಾಗಿ 22ರ ಹರೆಯದ ಕೆನಿನ್ ಗುರುತಿಸಿಕೊಂಡಿದ್ದಾರೆ.

ಇದಕ್ಕೂ ಮುನ್ನ ಅಮೆರಿಕಾದಿಂದ ಸೆರೆನಾ ವಿಲಿಯಮ್ಸ್, ಮಾರ್ಟಿನಾ ನವ್ರಾಟಿಲೋವಾ, ಲಿಂಡ್ಸೆ ಡೇವನ್‌ಪೋರ್ಟ್, ಟ್ರೇಸಿ ಆಸ್ಟಿನ್, ಕ್ರಿಸ್ ಎವರ್ಟ್, ವೀನಸ್ ವಿಲಿಯಮ್ಸ್ ಮತ್ತು ಜೆನ್ನಿಫರ್ ಕ್ಯಾಪ್ರಿಯಾಟಿ ಇದೇ ಗೌರವಕ್ಕೆ ಪಾತ್ರರಾಗಿದ್ದರು.

Story first published: Wednesday, December 9, 2020, 18:38 [IST]
Other articles published on Dec 9, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+