Paris Olympics 2024: ಪುರುಷರ ಸಿಂಗಲ್ಸ್ ಸ್ಪರ್ಧೆಯಿಂದ ಹಿಂದೆ ಸರಿದ ಮಾಜಿ ನಂ.1 ಟೆನಿಸ್ ಆಟಗಾರ
ಜುಲೈ 25 ಗುರುವಾರ, ಬ್ರಿಟನ್‌ನ ಮಾಜಿ ವಿಶ್ವ ನಂ.1 ಟೆನಿಸ್ ಆಟಗಾರ ಆಂಡಿ ಮರ್ರೆ ಪ್ಯಾರಿಸ್ ಒಲಿಂಪಿಕ್ಸ್‌ನ ಪುರುಷರ ಸಿಂಗಲ್ಸ್ ಸ್ಪರ್ಧೆಯಿಂದ ಹಿಂದೆ ಸರಿದಿದ್ದಾರೆ. ಮರ್ರೆ ಕಳೆದ ಮಂಗಳವಾರ ಸಾಮಾಜಿಕ ಜಾಲತಾಣದ ಪೋಸ್ಟ್ ಮೂಲಕ ಪ್ಯಾರಿಸ್ ಒಲಿಂಪಿಕ್ಸ್ ನಂತರ ನಿವೃತ್ತಿ ಘೋಷಿಸಿದ್ದರು.
ಇದೀಗ ಗುರುವಾರ ಪ್ಯಾರಿಸ್ ಒಲಿಂಪಿಕ್ಸ್‌ನ ಪುರುಷರ ಸಿಂಗಲ್ಸ್ ಸ್ಪರ್ಧೆಯಿಂದ ಮರ್ರೆ ತಮ್ಮ ಹೆಸರನ್ನು ಹಿಂಪಡೆದಿದ್ದಾರೆ. ಆದರೆ, ಡ್ಯಾನ್ ಇವಾನ್ಸ್ ಅವರೊಂದಿಗೆ ಮರ್ರೆ ಡಬಲ್ಸ್‌ನಲ್ಲಿ ಭಾಗವಹಿಸಲಿದ್ದಾರೆ.

ಎರಡು ಬಾರಿ ಒಲಿಂಪಿಕ್ ಚಿನ್ನದ ಪದಕ ವಿಜೇತ ಡಾನ್ ಇವಾನ್ಸ್ ಪುರುಷರ ಡಬಲ್ಸ್‌ನಲ್ಲಿ ಮರ್ರೆ ಜೊತೆಯಾಗಿದ್ದಾರೆ. ತನ್ನ ಮೂರನೇ ಒಲಿಂಪಿಕ್ ಪದಕಕ್ಕೆ ಬಲವಾದ ಆರಂಭವನ್ನು ಮಾಡಲು ಎದುರು ಸಜ್ಜಾಗಿದ್ದಾರೆ.
ಪ್ಯಾರಿಸ್ ಒಲಿಂಪಿಕ್ಸ್‌ನ ಪುರುಷರ ಸಿಂಗಲ್ಸ್ ಸ್ಪರ್ಧೆಯಿಂದ ಹೊರ ಬಂದಿರವುದನ್ನು ದೃಢೀಕರಿಸಿದ ಮರ್ರೆ, ಡಾನ್ ಜೊತೆಗಿನ ಡಬಲ್ಸ್‌ನಲ್ಲಿ ಗಮನಹರಿಸಲು ನಾನು ಸಿಂಗಲ್ಸ್‌ನಿಂದ ಹಿಂದೆ ಸರಿಯಲು ನಿರ್ಧರಿಸಿದ್ದೇನೆ. ನಮ್ಮ ಅಭ್ಯಾಸವು ಅತ್ಯುತ್ತಮವಾಗಿದೆ ಮತ್ತು ನಾವು ಒಟ್ಟಿಗೆ ಚೆನ್ನಾಗಿ ಆಡುತ್ತಿದ್ದೇವೆ ಹೇಳಿದ್ದಾರೆ.
ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಡಬಲ್ಸ್ ಅನ್ನು ಪ್ರಾರಂಭಿಸಲು ಮತ್ತು ಮತ್ತೊಮ್ಮೆ ಗ್ರೇಟ್ ಬ್ರಿಟನ್ ಅನ್ನು ಪ್ರತಿನಿಧಿಸಲು ನಾನು ನಿಜವಾಗಿಯೂ ಎದುರು ನೋಡುತ್ತಿದ್ದೇನೆ ಎಂದು ಮರ್ರೆ ತಿಳಿಸಿದ್ದಾರೆ.
ಎರಡು ಬಾರಿ ಒಲಿಂಪಿಕ್ ಚಾಂಪಿಯನ್
ಎರಡು ಬಾರಿ ಒಲಿಂಪಕ್ಸ್‌ನಲ್ಲಿ ಬ್ರಿಟಿಷ್ ಆಟಗಾರ ಮರ್ರೆ ಚಿನ್ನ ಗೆದ್ದಿದ್ದಾರೆ. 2012 ರ ಲಂಡನ್ ಒಲಿಂಪಿಕ್ಸ್‌ನಲ್ಲಿ ಹುಲ್ಲು ಅಂಕಣದಲ್ಲಿ ತಮ್ಮ ಮೊದಲ ಚಿನ್ನದ ಪದಕವನ್ನು ಗೆದ್ದರು. ಫೈನಲ್‌ನಲ್ಲಿ ಅವರು ಸ್ವಿಸ್ ದಂತಕಥೆ ರೋಜರ್ ಫೆಡರರ್ ಅವರನ್ನು ಮೂರು ಸೆಟ್‌ಗಳಲ್ಲಿ ಸೋಲಿಸಿದರು.
ಬಳಿಕ ರಿಯೊ ಒಲಿಂಪಿಕ್ಸ್ 2016 ರ ಫೈನಲ್‌ನಲ್ಲಿ, ಮರ್ರೆ ಅರ್ಜೆಂಟೀನಾದ ಜುವಾನ್ ಮಾರ್ಟಿನ್ ಡೆಲ್ ಪೊಟ್ರೊ ಅವರನ್ನು ಸೋಲಿಸಿದರು. ಈ ಮೂಲಕ ಎರಡು ಒಲಿಂಪಿಕ್ ಸಿಂಗಲ್ಸ್ ಚಿನ್ನದ ಪದಕಗಳನ್ನು ಗೆದ್ದ ಮೊದಲ ಪುರುಷ ಟೆನಿಸ್ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು.
3 ಗ್ರಾಂಡ್ ಸ್ಲಾಮ್ ಗೆಲುವು
ಇದಲ್ಲದೇ ಮರ್ರೆ 3 ಗ್ರ್ಯಾಂಡ ಸ್ಲಾಮ್ ಪ್ರಶಸ್ತಿಗಳನ್ನು ವಶಪಡಿಸಿಕೊಂಡಿದ್ದಾರೆ. ಮರ್ರೆ 2013 ಮತ್ತು 2016ರಲ್ಲಿ ಎರಡು ಬಾರಿ ವಿಂಬಲ್ಡನ್ ಪ್ರಶಸ್ತಿ ಗೆದ್ದಿದ್ದಾರೆ. ಇದೇ ವೇಳೆ 2012 ರಲ್ಲಿ ಯುಎಸ್ ಓಪನ್ ವಿಜೇತರ ಕೂಡ ಆಗಿದ್ದರು.
ಮತ್ತೊಂದು ವಿಪರ್ಯಾಸ ಎಂದರೆ ಮರ್ರೆ 5 ಬಾರಿ ಆಸ್ಟ್ರೇಲಿಯ ಓಪನ್‌ನ ಫೈನಲ್‌ಗೆ ತಲುಪಿದ್ದು, ಒಮ್ಮೆಯೂ ಪ್ರಶಸ್ತಿಯನ್ನು ವಶಪಡಿಸಿಕೊಳ್ಳಲು ಸಾಧ್ಯವಾಗಲಿಲ್ಲ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications