Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

French Open 2024: ಪುರುಷರ ಡಬ್ಬಲ್ಸ್‌ನಲ್ಲಿ ಪ್ರಶಸ್ತಿ ಮುಡಿಗೇರಿಸಿಕೊಂಡ ಅರೆವಾಲೊ-ಪಾವಿಕ್‌ ಜೋಡಿ

ಜೂನ್‌ 9 ಭಾನುವಾರ, ಫ್ರೆಂಚ್‌ ಓಪನ್‌ ಗ್ರ್ಯಾಂಡ್ ಸ್ಲಾಮ್ ಟೆನಿಸ್‌ ಟೂರ್ನಿಯ ಪುರುಷರ ಡಬಲ್ಸ್‌ನ ಫೈನಲ್‌ನಲ್ಲಿ ಗೆದ್ದ ಎಲ್ ಸಾಲ್ವಡಾರ್‌ನ ಮಾರ್ಸೆಲೊ ಅರೆವಾಲೊ ಮತ್ತು ಕ್ರೊಯೇಷಿಯಾದ ಮೇಟ್ ಪಾವಿಕ್ ಚಾಂಪಿಯನ್‌ ಪಟ್ಟಕ್ಕೇರಿದ್ದಾರೆ.

ಇಟಾಲಿಯ ಸಿಮೋನ್ ಬೊಲೆಲ್ಲಿ ಮತ್ತು ಆಂಡ್ರಿಯಾ ವವಾಸ್ಸೊರಿ ವಿರುದ್ಧ 7-5, 6-3 ಅಂಕಗಳ ಅಂತರದಿಂದ ಅರೆವಾಲೊ ಮತ್ತು ಪಾವಿಕ್ ಜೋಡಿ ಗೆದ್ದು ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ. ಈ ಮೂಲಕ ಪಾವಿಕ್ ಪುರುಷರ ಡಬಲ್ಸ್‌ನಲ್ಲಿ ಆಡಿದ ನಾಲ್ಕು ಗ್ರ್ಯಾಂಡ್ ಸ್ಲಾಮ್ ಪ್ರಶಸ್ತಿಗಳನ್ನು ಗೆದ್ದ ಸಾಧನೆ ಮಾಡಿದ್ದಾರೆ.

Arevalo-Pavic pair to win 2024 doubles French Open title

ಇನ್ನೊಂದೆಡೆ ಎಲ್​ ಸಾಲ್ವಡಾರ್​ನ ಅರೆವಾಲೊಗೆ ಇದು ಎರಡನೇ ಡಬಲ್ಸ್​ ಪ್ರಶಸ್ತಿಯಾಗಿದೆ. ಪ್ರಶಸ್ತಿ ಗೆಲ್ಲುತ್ತಿದ್ದಂತೆ ಮೈದಾನದಲ್ಲಿ ತಮ್ಮ ತಂಡದೊಂದಿಗೆ ಇಬ್ಬರು ಕುಣಿದು ಕುಪ್ಪಳಿಸುವ ಮೂಲಕ ಸಂಭ್ರಮಾಚರಣೆ ಮಾಡಿದ್ದಾರೆ.

ಪ್ರಬಲ ಪೈಪೋಟಿಯಿಂದ ನಡೆದ ಮೊದಲ ಸೆಟ್‌ನಲ್ಲಿ ಎರಡೂ ಜೋಡಿಗಳು ಗೆಲುವಿಗಾಗಿ ಹೋರಾಟ ನಡೆಸಿದರು. ಆಟ 6-5 ರಲ್ಲಿ ಸಾಗಿದಾಗ, ಟ್ರೈ ಬ್ರೇಕರ್‌ ಮೊರೆ ಹೋಗಲಾಯಿತು. ಈ ಅವಕಾಶವನ್ನು ಬಳಸಿಕೊಂಡ ಅರೆವಾಲೊ ಮತ್ತು ಪಾವಿಕ್ ಜೋಡಿ ಮೊದಲ ಸೆಟ್‌ ಅನ್ನು ಗೆಲ್ಲುವಲ್ಲಿ ಯಶಸ್ವಿಯಾದರು.

ನಂತರ ಎರಡನೇ ಸೆಟ್‌ನಲ್ಲಿ ಇಟಲಿ ಜೋಡಿ ಮೇಲೆ ಪ್ರಾಬಲ್ಯ ಸಾಧಿಸಿದ ‌ಅರೆವಾಲೊ ಮತ್ತು ಪಾವಿಕ್ ಸತತ ಅಂಕಗಳನ್ನು ಪಡೆದರು. ಹೀಗಾಗಿ 6-3 ರಲ್ಲಿ ಸೆಟ್‌ ಅನ್ನು ಗೆದ್ದು, ಚಾಂಪಿಯನ್‌ ಆಗಿ ಹೊರಹೊಮ್ಮಿದರು.

ಫ್ರೆಂಚ್‌ ಓಪನ್‌ ಟೂರ್ನಿಯಲ್ಲಿ ಅರೆವಾಲೊ ಮತ್ತು ಪಾವಿಕ್ ಜೋಡಿ 9ನೇ ಶ್ರೇಯಾಂಕ ಹೊಂದಿದ್ದರು. ಕ್ರೊವೇಷಿಯಾದ ಪಾವಿಕ್​ ಹಾಲಿ ಒಲಂಪಿಕ್ಸ್​ ಡಬಲ್ಸ್​ ಚಾಂಪಿಯನ್​ ಆಗಿದ್ದಾರೆ. ಎಲ್ ಸಾಲ್ವಡಾರ್​ನ ಅರೆವಾಲೊ 2022 ರಲ್ಲಿ ಫ್ರೆಂಚ್​ ಓಪನ್​ ಡಬಲ್ಸ್​ ಚಾಂಪಿಯನ್​ ಆಗಿದ್ದರು. ಜೀನ್ ಜೂಲಿಯನ್ ರೋಜರ್ ಅವರೊಂದಿಗೆ ಪ್ರಶಸ್ತಿ ಗೆದ್ದಿದ್ದರು.

ಪ್ರಶಸ್ತಿ ಗೆಲುವಿನ ಬಳಿಕ ಸಂತಸ ಹಂಚಿಕೊಂಡಿರುವ ಪಾವಿಕ್‌, ಇದು ನನ್ನ ಮೊದಲ ಫ್ರೆಂಚ್‌ ಓಪನ್‌ ಟ್ರೋಫಿಯಾಗಿದ್ದು, ಗೆಲುವು ಸಾಧಿಸಿರುವುದು ಖುಷಿ ತಂದಿದೆ.

ಈ ಹಿಂದೆ ಕೂಡ ಎರಡು ಬಾರಿ ಫೈನಲ್‌ನಲ್ಲಿ ನಾನು ಸೋಲು ಕಂಡಿದೆ. ಈ ಬಾರಿ ಅರೆವಾಲೊ ಜೊತೆಗೂಡಿ ಪ್ರಶಸ್ತಿ ಗೆದ್ದಿರುವುದು ವಿಶೇಷವಾಗಿದೆ ಎಂದಿದ್ದಾರೆ.

ಮತ್ತೊಂದೆಡೆ ಅರೆವಾಲೊ ಅವರು ಕೂಡ ಮಾತನಾಡಿದ್ದು, ಇದು ನನ್ನ ವೃತ್ತಿಜೀವನದ ಫ್ರೆಂಚ್‌ ಓಪಬ್‌ ಡಬಲ್ಸ್‌ನಲ್ಲಿ ಎರಡನೇ ಪ್ರಶಸ್ತಿಯಾಗಿದೆ. ನನ್ನ ಮೇಲೆ ನಂಬಿಕೆ ಇಟ್ಟ ತಂಡ ಮತ್ತು ಕುಂಟುಬಸ್ಥರಿಗೆ ಧನ್ಯವಾದ ಸಲ್ಲಿಸುತ್ತೇನೆ. ಪಾವಿಕ್‌ ಉತ್ತಮ ಜೊತೆಯಾಟ ನೀಡಿದ್ದು, ಈ ಗೆಲುವಿಗೆ ಕಾರಣವಾಯಿತು ಎಂದು ಹೇಳಿದ್ದಾರೆ.

Story first published: Sunday, June 9, 2024, 16:43 [IST]
Other articles published on Jun 9, 2024
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+