For Quick Alerts
ALLOW NOTIFICATIONS  
For Daily Alerts

US Open 2024: ಪ್ರಶಸ್ತಿ ಮುಡಿಗೇರಿಸಿಕೊಂಡ ಅರೀನಾ ಸಬಲೆಂಕಾ; ನಗದು ಬಹುಮಾನ ಕೇಳಿದ್ರೆ ಶಾಕ್!

ಶನಿವಾರ ನಡೆದ 2024ರ ಯುಎಸ್ ಓಪನ್ ಮಹಿಳಾ ಸಿಂಗಲ್ಸ್‌ನ ರೋಚಕ ಫೈನಲ್ ಪಂದ್ಯದಲ್ಲಿ ಬೆಲಾರಸ್‌ನ ಅರೀನಾ ಸಬಲೆಂಕಾ ಇತಿಹಾಸ ಸೃಷ್ಟಿಸಿದ್ದಾರೆ. ಅಮೆರಿಕದ ಜೆಸ್ಸಿಕಾ ಪೆಗುಲಾ ಅವರನ್ನು 7-5, 7-5 ನೇರ ಸೆಟ್‌ಗಳಿಂದ ಅರೀನಾ ಸಬಲೆಂಕಾ ಸೋಲಿಸಿದ್ದಾರೆ.

ಇದರೊಂದಿಗೆ ಅರೀನಾ ಸಬಲೆಂಕಾ ಅಂತಿಮವಾಗಿ ತಮ್ಮ ಚೊಚ್ಚಲ ಯುಎಸ್ ಓಪನ್ ಪ್ರಶಸ್ತಿಯನ್ನು ಗೆದ್ದು ಸಂಭ್ರಮಿಸಿದ್ದಾರೆ. ಇದು ಸಬಲೆಂಕಾ ಅವರ ಮೂರನೇ ಗ್ರ್ಯಾಂಡ್ ಸ್ಲಾಮ್ ಆಗಿದ್ದು, ಓ ಪ್ರಶಸ್ತಿ ಗೆಲುಯವಿನ ಬಳಿಕ ಅವರು ಭಾವುಕರಾಗಿದ್ದಾರೆ. ಸಬಲೆಂಕಾ ಕಳೆದ ವರ್ಷ ಯುಎಸ್ ಓಪನ್ ಫೈನಲ್‌ನಲ್ಲಿ ಕೊಕೊ ಗೌಫ್ ವಿರುದ್ಧ ಮತ್ತು ಎರಡು ವರ್ಷಗಳ ಹಿಂದೆ ಸೆಮಿಫೈನಲ್‌ನಲ್ಲಿ ಸೋಲು ಕಂಡಿದ್ದರು.

Arina Sabalenka wins 2024 US Open Womens Singles title

ಯುವ ಓಪನ್ 2024 ಮಹಿಳಾ ಸಿಂಗಲ್ಸ್ ಫೈನಲ್‌ ಪಂದ್ಯದಲ್ಲಿ ಪ್ರಬಲ ಪೈಪೋಟಿ ಏರ್ಪಟ್ಟಿತ್ತು. ಎರಡನೇ ಸೆಟ್‌ನಲ್ಲಿ 0-3ರಿಂದ ಹಿನ್ನಡೆಯಲ್ಲಿದ್ದು ಬ್ರೇಕ್ ಪಾಯಿಂಟ್ ಎದುರಿಸುತ್ತಿದ್ದರೂ ಪೆಗುಲಾ ಅಮೋಘ ಆಟವಾಡಿ 5-3ರಲ್ಲಿ ಮುನ್ನಡೆ ಸಾಧಿಸಿದರು. ಆದರೆ ಸಬಲೆಂಕಾ ಅದ್ಭುತ ಪುನರಾಗಮನ ಮಾಡುವ ಮೂಲಕ ಅಂತಿಮವಾಗಿ ಗೆಲುವು ಸಾಧಿಸಿದರು.

ಈ ಗೆಲುವಿನೊಂದಿಗೆ ಏಂಜೆಲಿಕ್ ಕೆರ್ಬರ್ ಅವರ ದಾಖಲೆಯನ್ನು ಮುರಿದ ಅರೀನಾ ಸಬಲೆಂಕಾ ಒಂದೇ ಋತುವಿನಲ್ಲಿ ಎರಡೂ ಹಾರ್ಡ್‌ಕೋರ್ಟ್ ಪ್ರಶಸ್ತಿಗಳನ್ನು ಗೆದ್ದ ಮೊದಲ ಮಹಿಳೆ ಟೆನಿಸ್ ಆಟಗಾರ್ತಿಯಾಗಿದ್ದಾರೆ.

ನಗದು ಬಹುಮಾನ ಎಷ್ಟು?

ಯುಎಸ್ ಓಪನ್ ಗೆದ್ದ ಸಬಲೆಂಕಾ ಅವರಿಗೆ ಭಾರೀ ನಗದು ಬಹುಮಾನ ಸಿಕ್ಕಿದೆ. 2024ರ ಐಪಿಎಲ್ ಚಾಂಪಿಯನ್ ಕೋಲ್ಕತ್ತಾ ನೈಟ್ ರೈಡರ್ಸ್‌ ತಂಡಕ್ಕೆ (20 ಕೋಟಿ) ನೀಡಿದ ಮೊತ್ತಕ್ಕಿಂತ ಹೆಚ್ಚು ಪಡೆದಿದ್ದಾರೆ.
3.6 ಮಿಲಿಯನ್ (ಸುಮಾರು 30 ಕೋಟಿ 23 ಲಕ್ಷ) ನಗದು ಬಹುಮಾನವನ್ನು ಚಾಂಪಿಯನ್ ಸಬಲೆಂಕಾ ಗೆದ್ದಿದ್ದಾರೆ. ಈ ನಗದು ಬಹುಮಾನ ಕಳೆದ ವರ್ಷಕ್ಕಿಂತ 20 ರಷ್ಟು ಹೆಚ್ಚು. ರನ್ನರ್ ಅಪ್ ಆದ್ದ ಅಮೆರಿಕದ ಪೆಗುಲಾ 1.8 ಮಿಲಿಯನ್ ಡಾಲರ್ (15 ಕೋಟಿ 11 ಲಕ್ಷ ರೂ.) ಪಡೆದುಕೊಂಡಿದ್ದಾರೆ.

Story first published: Sunday, September 8, 2024, 11:23 [IST]
Other articles published on Sep 8, 2024
POLLS
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+