ಏಷ್ಯನ್ ಗೇಮ್ಸ್ 2018: ಭಾರತಕ್ಕೆ ಪದಕದ ಭರವಸೆ ನೀಡಿದ ಅಂಕಿತಾ

ಜಕಾರ್ತಾ, ಆಗಸ್ಟ 22: ಏಷ್ಯನ್ ಗೇಮ್ಸ್ 2018ರಲ್ಲಿ ಭಾರತದ ಪದಕ ಬೇಟೆ ಚೆನ್ನಾಗೇ ಮುಂದುವರೆದಿದೆ. ಭಾರತದ ಪಕದ ಖಾತೆಯಲ್ಲಿ ಒಟ್ಟು 11 ಪದಕಗಳಿದ್ದು, ಸ್ಟಾರ್ ಟೆನಿಸ್ ಆಟಗಾರ್ತಿ ಅಂಕಿತಾ ರೈನಾ ಅವರು ಮತ್ತೊಂದು ಪದಕದ ಭರವಸೆ ನೀಡಿದ್ದಾರೆ.
ಇಂಡೋನೇಷ್ಯಾದಲ್ಲಿ ನಡೆಯುತ್ತಿರುವ 18ನೇ ಏಷ್ಯನ್ ಗೇಮ್ಸ್ ಕ್ರೀಡಾಕೂಟದ ಮಹಿಳಾ ಟೆನಿಸ್ ಸಿಂಗಲ್ಸ್ ವಿಭಾಗದಲ್ಲಿ ಅಂಕಿತಾ ಸೆಮಿಫೈನಲ್ ಗೆ ಪ್ರವೇಶ ಗಿಟ್ಟಿಸಿಕೊಳ್ಳುವ ಮೂಲಕ ಭಾರತಕ್ಕೆ ಪದಕ ಖಾತ್ರಿಯಾಗಿದೆ. ಬುಧವಾರ ನಡೆದ ಕ್ವಾರ್ಟರ್ ಫೈನಲ್ ನಲ್ಲಿ ಅಂಕಿತಾ ಅವರು ಹಾಂಕಾಂಗ್ ನ ಯುಡಿಸ್ ಚೊಂಗ್ ಅವರನ್ನು 6-4, 6-1ರ ನೇರ ಸೆಟ್ ನಿಂದ ಸೋಲಿಸಿದರು.
ಏಷ್ಯನ್ ಗೇಮ್ಸ್ 2018 ವಿಶೇಷ ಪುಟಕ್ಕೆ ಕ್ಲಿಕ್ ಮಾಡಿ
ಭಾರತದ ಮಹಿಳಾ ಟೆನಿಸ್ ವಿಭಾಗದಲ್ಲಿ ಅಗ್ರ ಸ್ಥಾನದಲ್ಲಿರುವ ಅಂಕಿತಾ, ಚೊಂಗ್ ಅವರಿಂದ ಮೊದಲ ಸೆಟ್ ಗೆದ್ದುಕೊಳ್ಳಲು 54 ನಿಮಿಷಗಳನ್ನು ತೆಗೆದುಕೊಂಡರು. ಆದರೆ ದ್ವಿತೀಯ ಸೆಟ್ ನಲ್ಲಿ ಎದುರಾಳಿಯಿಂದ ಅಂಥ ಪೈಪೋಟಿ ಎದುರಾಗಲಿಲ್ಲ. ಕೇವಲ 27 ನಿಮಿಷಗಳಲ್ಲಿ ಅಂಕಿತ ಅವರು ದ್ವಿತೀಯ ಸೆಟ್ಟನ್ನು ವಶವಾಗಿಸಿಕೊಂಡರು.
ಮಹಿಳಾ ವಿಭಾಗದಲ್ಲಿ ಶೂಟರ್ ರಾಹಿ ಜೀವನ್ ಸರ್ನೋಬತ್ ಅವರು ಬಂಗಾರ ತಂದಾಗ ಭಾರತ ಪದಕ ಪಟ್ಟಿಯಲ್ಲಿ 11 ಪದಕಗಳೊಂದಿಗೆ 6ನೇ ಸ್ಥಾನದಲ್ಲಿತ್ತು. 11 ಪದಕಗಳಲ್ಲಿ 4 ಬಂಗಾರ ಸೇರಿವೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications