ಏಷ್ಯನ್ ಗೇಮ್ಸ್: ಟೆನಿಸ್ ಡಬಲ್ಸ್ ನಲ್ಲಿ ಬೋಪಣ್ಣ-ಶರಣ್ ಪದಕ ಖಾತ್ರಿ

ಜಕಾರ್ತಾ, ಆಗಸ್ಟ್ 22: ಇಂಡೋನೇಷ್ಯಾ ಏಷ್ಯನ್ ಗೇಮ್ಸ್ ನಾಲ್ಕನೇ ದಿನ ಭಾರತದ ಪದಕ ಖಾತೆಗೆ ಒಟ್ಟು 5 ಪದಕಗಳು ಸೇರ್ಪಡೆಯಾಗಿವೆ. ಭಾರತದ ಟೆನಿಸ್ ಡಬಲ್ಸ್ ತಂಡದ ರೋಹನ್ ಬೋಪಣ್ಣ-ದಿವಿಜ್ ಶರಣ್ ಜೋಡಿ ಸೆಮಿಫೈನಲ್ ಗೆ ಪ್ರವೇಶಿಸಿದ್ದು, ಮತ್ತೊಂದು ಪದಕ ಖಾತ್ರಿಯಾಗಿದೆ.
ಏಷ್ಯನ್ ಗೇಮ್ಸ್ 2018 ವಿಶೇಷ ಪುಟಕ್ಕೆ ಕ್ಲಿಕ್ ಮಾಡಿ
ಆಗಸ್ಟ್ 22ರ ಬುಧವಾರ ನಡೆದ ಪುರುಷರ ಡಬಲ್ಸ್ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಬೋಪಣ್ಣ-ಶರಣ್ ಜೋಡಿ ಚೈನೀಸ್ ತೈಪೆಯ ಯಾಂಗ್ ತ್ಸುಂಗ್-ಹುವಾ ಮತ್ತು ಹಿಸೀ ಚೆಂಗ್ಪಂಗ್ ಜೋಡಿಯನ್ನು 6-3, 5-7, 10-1ರ ಅಂತರದಿಂದ ಹಿಮ್ಮೆಟ್ಟಿಸಿತು.
ಮಹಿಳಾ ಸಿಂಗಲ್ಸ್ ನಲ್ಲಿ ಭಾರತದ ಈಗಿನ ಟೆನಿಸ್ ರಾಣಿ ಅಂಕಿತಾ ರೈನಾ ಅವರೂ ಸೆಮಿಫೈನಲ್ ಗೆ ಪ್ರವೇಶಿಸುವ ಮೂಲಕ ಪದಕದ ಭರವಸೆ ನೀಡಿದ್ದಾರೆ. ಏಷ್ಯನ್ ಗೇಮ್ಸ್ ನಿಂದ ಅನುಭವಿ ಆಟಗಾರ ಲಿಯಾಂಡರ್ ಪೇಸ್ ಹಿಂದೆ ಸರಿದಾಗ ಭಾರತ ತಂಡಕ್ಕೆ ಅಭದ್ರತೆ ಕಾಡಿತ್ತು. ಆದರೆ ಈಗಿನ ನಮ್ಮವರ ಪ್ರದರ್ಶನ ಕೊಂಚ ಸಮಾಧಾನ ನೀಡಿದೆ. ಈಗಾಗಲೇ ಟೆನಿಸ್ ನಿಂದ ಎರಡು ಪದಕಗಳಂತೂ ಖಾತ್ರಿಯಾಗಿವೆ.
ಬುಧವಾರ ನಾಲ್ಕನೇ ದಿನದಾಂತ್ಯಕ್ಕೆ ಭಾರತದ ಪದಕ ಖಾತೆಯಲ್ಲಿ ಒಟ್ಟು 15 ಪದಕಗಳಿದ್ದವು. ಇದರಲ್ಲಿ 4 ಚಿನ್ನ, 3 ಬೆಳ್ಳಿ ಮತ್ತು 8 ಕಂಚಿನ ಪದಕಗಳು ಸೇರಿದ್ದವು. ದಿನದಾಂತ್ಯಕೆ ಭಾರತ ಪದಕ ಪಟ್ಟಿಯಲ್ಲಿ 7ನೇ ಸ್ಥಾನದಲ್ಲಿತ್ತು. ಪದಕ ಪಟ್ಟಿಯ ಅಗ್ರ ಸ್ಥಾನದಲ್ಲಿ ಚೀನಾ, ಜಪಾನ್ ಮತ್ತು ಕೊರಿಯಾ ದೇಶಗಳಿದ್ದವು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications