ಏಷ್ಯನ್ ಗೇಮ್ಸ್ 2018: ಟೆನಿಸ್ ಡಬಲ್ಸ್ ನಲ್ಲಿ ಬೋಪಣ್ಣ-ಶರಣ್ ಫೈನಲ್ ಗೆ

ಜಕಾರ್ತಾ, ಆಗಸ್ಟ್ 23: ಏಷ್ಯಾನ್ ಗೇಮ್ಸ್ 5ನೇ ದಿನವೂ ಭಾರತದ ಪದಕ ಬೇಟೆ ಮುಂದುವರೆದಿದೆ. ಈಗಾಗಲೇ ಭಾರತದ ಖಾತೆಯಲ್ಲಿ 17 ಪದಕಗಳಿದ್ದು ಪುರುಷರ ಟೆನಿಸ್ ಡಬಲ್ಸ್ ನಲ್ಲಿ ಭಾರತಕ್ಕೆ ಒಂದೋ ಚಿನ್ನ, ತಪ್ಪಿದರೆ ಬೆಳ್ಳಿಯಂತೂ ಖಾತ್ರಿಯಾಗಿದೆ.
ಏಷ್ಯನ್ ಗೇಮ್ಸ್ 2018 ವಿಶೇಷ ಪುಟಕ್ಕೆ ಕ್ಲಿಕ್ ಮಾಡಿ
ಗುರುವಾರ ನಡೆದ ಪುರುಷರ ಟೆನಿಸ್ ಡಬಲ್ಸ್ ಸೆಮಿ ಫೈನಲ್ಸ್ ನಲ್ಲಿ ಭಾರತದ ರೋಹನ್ ಬೋಪಣ್ಣ ಮತ್ತು ದಿವಿಜ್ ಶರಣ್ ಜೋಡಿ ಜಪಾನ್ ನ ಷೊ ಶಿಮಾಬುಕುರೊ-ಕೈಟೊ ಯುಸುಗಿ ಜೋಡಿಯನ್ನು ಸೋಲಿಸಿ ಪ್ರಶಸ್ತಿ ಸುತ್ತಿಗೆ ಲಗ್ಗೆಯಿಟ್ಟಿದೆ.
ಜಪಾನ್ ಆಟಗಾರರೆದುರು ಭಾರತದ ಜೋಡಿಗೆ ಮೊದಲ ಸೆಟ್ ನಲ್ಲಿ ಸೋಲಾಗಿತ್ತು. ಪ್ರಥಮ ಸೆಟ್ಟನ್ನು ಬೋಪಣ್ಣ-ಶರಣ್ 4-6ರಿಂದ ಕಳೆದುಕೊಂಡಿದ್ದರು. ಆದರೆ ಮುಂದಿನ ಸೆಟ್ ನಲ್ಲಿ ಭಾರತದ ಜೋಡಿ ತಿರುಗಿ ಬಿತ್ತು. ದ್ವಿತೀಯ ಸೆಟ್ಟನ್ನು 6-3ರಿಂದ ಗೆದ್ದುಕೊಂಡಿತು.
ಅಂತಿಮ ಸೆಟ್ ನಲ್ಲಿ ಇತ್ತಂಡಗಳಿಂದಲೂ ಭರ್ಜರಿ ಪೈಪೋಟಿ ನಡೆಯಿತು. ಆದರೆ ಅಂತಿಮವಾಗಿ ಬೋಪಣ್ಣ-ಶರಣ್ ಜೋಡಿ 10-8 (ಟೈ ಬ್ರೇಕರ್) ರಿಂದ ಪಂದ್ಯವನ್ನು ಗೆದ್ದುಕೊಂಡಿತು. ಪ್ರಶಸ್ತಿ ಸುತ್ತಿನಲ್ಲಿ ಭಾರತ ತಂಡ ಜಪಾನ್ ನ ಯೊಸೆಕ್ ವಾಟನುಕಿ-ಯುಯಾ ಇಟೊ ಜೋಡಿಯ ಸವಾಲು ಸ್ವೀಕರಿಸಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications