ಏಷ್ಯನ್ ಗೇಮ್ಸ್ 2018: ಮಹಿಳೆಯರ ಟೆನಿಸ್ ನಲ್ಲಿ ಭಾರತಕ್ಕೆ ಕಂಚು

ಜಕಾರ್ತಾ, ಆಗಸ್ಟ್ 23: ಇಂಡೋನೇಶ್ಯಾದ ಜಕಾರ್ತಾದಲ್ಲಿ ನಡೆಯುತ್ತಿರುವ ಏಷಿಯನ್ ಗೇಮ್ಸ್ 2018ರಲ್ಲಿ ಭಾರತದ ಪದಕ ಭೇಟಿ ಮುಂದುವರೆದಿದೆ. ಇಂದು ಮಹಿಳೆಯರ ಟೆನಿಸ್ ಸಿಂಗಲ್ಸ್‌ನಲ್ಲಿ ಭಾರತ ಕಂಚು ಗೆದ್ದಿದೆ.
ಭಾರತದ ನಂ1 ಮಹಿಳಾ ಟೆನಿಸ್ ಸಿಂಗಲ್ಸ್ ಆಟಗಾರ್ತಿ ಅಂಕಿತಾ ರೈನಾ ಅವರು ಕಂಚಿನ ಪದಕ ಗೆದ್ದಿದ್ದಾರೆ. ಸೆಮಿಫೈನಲ್ಸ್ ಸೋತು ಅವರು ಕಂಚಿಗೆ ತೃಪ್ತಿಪಟ್ಟುಕೊಂಡಿದ್ದಾರೆ.
ಏಷ್ಯನ್ ಗೇಮ್ಸ್ 2018 ವಿಶೇಷ ಪುಟಕ್ಕೆ ಕ್ಲಿಕ್ ಮಾಡಿ
ಚೀನಾದ ಶುಯಿ ಜಾಂಗ್ ಅವರೊಂದಿಗೆ ಸೆಮಿಫೈನಲ್‌ನಲ್ಲಿ ಕಾದಾಟ ನಡೆಸಿದ ಅಂಕಿತಾ, 4-6, 6-7 ರ ನೇರ ಸೆಟ್‌ಗಳಲ್ಲಿ ಸೋತಿದ್ದಾರೆ. ಶುಯಿ ಜಾಂಗ್ ಅವರು ವಿಶ್ವ ಮಹಿಳಾ ಟೆನಿಸ್ ranking ನಲ್ಲಿ 34ನೇ ಸ್ಥಾನದಲ್ಲಿದ್ದಾರೆ.
ಗುಜರಾತ್‌ನ ಅಹಮದಾಬಾದ್ ನವರಾದ ಅಂಕಿತಾ ರೈನಾ ಅವರು, ಭಾರತದ ಪ್ರಸ್ತುತ ಮಹಿಳಾ ಸಿಂಗಲ್ಸ್ ranking ನಲ್ಲಿ ಅಗ್ರಸ್ಥಾನದಲ್ಲಿದ್ದಾರೆ.
ಪುರುಷರ ಟೆನ್ನಿಸ್ ಡಬಲ್ಸ್‌ನಲ್ಲಿ ರೋಹನ್ ಬೋಪಣ್ಣ ಹಾಗೂ ದಿವಿಜ್ ಶವನ್ ಅವರು ಫೈನಲ್ ಪ್ರವೇಶಿಸಿದ್ದು, ಚಿನ್ನ ಅಥವಾ ಬೆಳ್ಳಿ ಪದಕ ಗೆಲ್ಲುವುದು ಖಾತ್ರಿಯಾಗಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications