For Quick Alerts
ALLOW NOTIFICATIONS  
For Daily Alerts

ಏಷ್ಯನ್ ಗೇಮ್ಸ್: ಮಿಶ್ರ ಡಬಲ್ಸ್‌ ಟೆನಿಸ್‌ನಲ್ಲಿ ಚಿನ್ನದ ಪದಕ ಗೆದ್ದ ರೋಹನ್ ಬೋಪಣ್ಣ- ಋತುಜಾ ಭೋಸಲೆ ಜೋಡಿ

ಭಾರತದ ಟೆನಿಸ್ ಜೋಡಿ ರೋಹನ್ ಬೋಪಣ್ಣ ಮತ್ತು ರುತುಜಾ ಭೋಸಲೆ ಅವರು ಚೀನಾದ ಹ್ಯಾಂಗ್‌ಝೌನಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್‌ನ ಮಿಶ್ರ ಡಬಲ್ಸ್‌ ವಿಭಾಗದಲ್ಲಿ ಚಿನ್ನದ ಪದಕವನ್ನು ಗೆದ್ದುಕೊಂಡಿದ್ದಾರೆ. ಹ್ಯಾಂಗ್‌ಝೌ ಒಲಿಂಪಿಕ್ ಸ್ಪೋರ್ಟ್ಸ್ ಸೆಂಟರ್‌ನಲ್ಲಿ ನಡೆದ ರೋಚಕ ಫೈನಲ್‌ನಲ್ಲಿ ಭಾರತದ ಈ ಡೈನಾಮಿಕ್ ಜೋಡಿ 2-6, 6-3, 10-4 ಅಂಕಗಳೊಂದಿಗೆ ತೈವಾನ್ ಜೋಡಿಯಾದ ತ್ಸುಂಗ್-ಹಾವೊ ಹುವಾಂಗ್ ಮತ್ತು ಎನ್-ಶುವೊ ಲಿಯಾಂಗ್ ವಿರುದ್ಧ ಜಯಗಳಿಸಿ ಈ ಸಾಧನೆ ಮಾಡಿದೆ.

Asian Games: Rohan Bopanna and Rutuja Bhosale pair win gold in tennis mixed doubles event

ಮೊದಲ ಸೆಟ್ ಅನ್ನು 2-6 ರಲ್ಲಿ ಕಳೆದುಕೊಂಡ ನಂತರ ಬೋಪಣ್ಣ ಹಾಗೂ ಋತುಜಾ ಜೋಡಿ ಅದ್ಭುತವಾದ ಕಮ್‌ಬ್ಯಾಕ್ ಮಾಡಿತು. ಎರಡನೇ ಸೆಟ್ ಅನ್ನು 6-3 ಅಂತರದಿಂದ ತನ್ನ ವಶಕ್ಕೆ ಪಡೆದುಕೊಂಡ ಕಾರಣ ಪಂದ್ಯ ನಿರ್ಣಾಯಕ ಟೈ-ಬ್ರೇಕರ್‌ಗೆ ತಲುಪಿತ್ತು. 1 ಗಂಟೆ 14 ನಿಮಿಷಗಳ ರೋಚಕ ಸ್ಪರ್ಧೆಯಲ್ಲಿ ಭಾರತದ ಜೋಡಿ ಟೈ ಬ್ರೇಕರ್‌ನಲ್ಲಿ ಪ್ರಾಬಲ್ಯ ಮೆರೆದರು. ಅಂತಿಮವಾಗಿ 10-4 ಗೆಲುವು ಸಾಧಿಸಿ ಚಿನ್ನದ ಪದಕವನ್ನು ತಮ್ಮದಾಗಿಸಿಕೊಂಡಿದ್ದಾರೆ.

ಇನ್ನು ಇದು ರೋಹನ್ ಬೋಪಣ್ಣ ಏಷ್ಯನ್ ಗೇಮ್ಸ್‌ನಲ್ಲಿ ಗೆದ್ದುಕೊಂಡಿರುವ ಎರಡನೇ ಪದಕವಾಗಿದೆ. ಈ ಹಿಂದೆ ಜಕಾರ್ತಾ 2018 ರಲ್ಲಿ ಪುರುಷರ ಡಬಲ್ಸ್ ವಿಬಾಗದಲ್ಲಿ ಅವರು ಚಿನ್ನದ ಗೆದ್ದಿದ್ದರು. ಮತ್ತೊಂದೆಡೆ, ರುತುಜಾ ಅವರು ಏಷ್ಯನ್ ಗೇಮ್ಸ್‌ನಲ್ಲಿ ಮೊದಲ ಬಾರಿಗೆ ಪದಕವನ್ನು ಗಳಿಸುವ ಮೂಲಕ ಈ ಟೂರ್ನಮೆಂಟನ್ನು ಅತ್ಯಂತ ಸ್ಮರಣೀಯವಾಗಿಸಿಕೊಂಡಿದ್ದಾರೆ.

ಮತ್ತೊಂದೆಡೆ ಶೂಟಿಂಗ್ ವಿಭಾಗದಲ್ಲಿ ಭಾರತದ ಅದ್ಭುತ ಪ್ರದರ್ಶನ ಶನಿವಾರವೂ ಮುಂದುವರಿದಿದೆ. ಶನಿವಾರ ನಡೆದ 10 ಮೀಟರ್ ಏರ್ ಪಿಸ್ತೂಲ್ ಮಿಶ್ರ ತಂಡ ಫೈನಲ್‌ನಲ್ಲಿ ಭಾರತದ ಜೋಡಿಯಾದ ಸರಬ್ಜೋತ್ ಸಿಂಗ್ ಮತ್ತು ದಿವ್ಯಾ ಥಡಿಗೋಲ್ ವೀರಾವೇಶದ ಪ್ರಯತ್ನವನ್ನು ಮಾಡಿದರು. ಆದರೆ ಚಿನ್ನದ ಪದಕಕ್ಕೆ ಮುತ್ತಿಕ್ಕಲು ಸಫಲವಾಗದೆ ನಿರಾಸೆ ಅನುಭವಿಸಿದರು ಕೂಡ ಅರ್ಹವಾಗಿಯೇ ಬೆಳ್ಳಿ ಪದಕವನ್ನು ಕೊರಳಿಗೇರಿಸಿಕೊಂಡಿದ್ದಾರೆ.

ಶುಕ್ರವಾರ ನಡೆದ ಪುರುಷರ 50 ಮೀಟರ್ ರೈಫಲ್ 3 ಪೊಸಿಷನ್‌ನಲ್ಲಿ ಐಶ್ವರಿ ಪ್ರತಾಪ್ ಸಿಂಗ್ ತೋಮರ್ ಬೆಳ್ಳಿ ಗೆದ್ದಿದ್ದಾರೆ. ಇದು 2023 ರ ಏಷ್ಯನ್ ಗೇಮ್ಸ್‌ನಲ್ಲಿ ಶೂಟಿಂಗ್‌ನಲ್ಲಿ 22 ವರ್ಷದ ಶೂಟರ್‌ನ 4 ನೇ ಪದಕವಾಗಿದೆ. ಅವರು 10 ಮೀಟರ್ ಏರ್ ರೈಫಲ್ ಈವೆಂಟ್‌ನಲ್ಲಿ ಕಂಚು ಮತ್ತು ಈವೆಂಟ್‌ನಲ್ಲಿ ತಂಡದೊಂದಿಗೆ ಚಿನ್ನ ಗೆದ್ದಿದ್ದರು.

ಸೆಪ್ಟೆಂಬರ್ 29 ರಂದು ಕೂಡ ಏಷ್ಯನ್ ಗೇಮ್ಸ್‌ನಲ್ಲಿ ಭಾರತದ ಕ್ರೀಡಾಪಟುಗಳಿಂದ ಗಮನಾರ್ಹ ಪ್ರದರ್ಶನ ಬಂದಿದೆ. ಅದರಲ್ಲೂ ಶೂಟರ್‌ಗಳ ಪದಕ ಬೇಟೆ ಮುಂದಿವರಿದಿದ್ದು ಹ್ಯಾಂಗ್‌ಝೌನಲ್ಲಿ ನಡೆದ 10 ಮೀಟರ್ ಏರ್ ಪಿಸ್ತೂಲ್ ಮಹಿಳೆಯರ ವೈಯಕ್ತಿಕ ಈವೆಂಟ್ ಮತ್ತು 50 ಮೀ ರೈಫಲ್ 3 ಪೊಸಿಷನ್ಸ್ ಟೀಮ್ ಮೆನ್ ನಲ್ಲಿ ಚಿನ್ನದ ಪದಕಗಳನ್ನು ಪಡೆದುಕೊಂಡಿತು. ಈ ಮೂಲಕ ಈ ದಿನವೂ ಭಾರತ ಯಶಸ್ಸು ಕಂಡಿದೆ.

24 ವರ್ಷದ ಕಿರಣ್ ಬಲಿಯಾನ್ ಸೆಪ್ಟೆಂಬರ್ 29 ಶುಕ್ರವಾರದಂದು ಹ್ಯಾಂಗ್‌ಝೌನಲ್ಲಿ ಇತಿಹಾಸವನ್ನು ಬರೆದಿದ್ದಾರೆ. ಮಹಿಳೆಯರ ಶಾಟ್‌ಪುಟ್‌ನಲ್ಲಿ ಕಿರಣ್ ಕಂಚಿನ ಪದಕವನ್ನು ಗೆದ್ದುಕೊಂಡಿದ್ದು ಈ ಮೂಲಕ ಏಷ್ಯಾದ ಈ ಪ್ರತಿಷ್ಠಿತ ಕ್ರೀಡಾಕೂಟದಲ್ಲಿ 72 ವರ್ಷಗಳ ಸುದೀರ್ಘ ಅವಧಿಯ ಬಳಿಕ ಈ ವಿಭಾಗದಲ್ಲಿ ಭಾರತ ಪದಕವನ್ನು ಗೆಲ್ಲಲು ಕಾರಣವಾದರು. ಕಿರಣ್ ಬಲಿಯಾನ್ ತನ್ನ ವೃತ್ತಿಜೀವನದ ಮೊದಲ ಪ್ರಮುಖ ಪದಕವನ್ನು ಕೊರಳಿಗೇರಿಸಿಕೊಂಡ ಕಿರಣ್ 17.36 ಮೀ ದೂರಕ್ಕೆ ಎಸೆಯುವ ಮೂಲಕ ತಮ್ಮ ಅತ್ಯುತ್ತಮ ಪ್ರಯತ್ನದೊಂದಿಗೆ ಕಂಚಿನ ಪದಕವನ್ನು ಗೆದ್ದಿದ್ದಾರೆ.

Story first published: Saturday, September 30, 2023, 14:09 [IST]
Other articles published on Sep 30, 2023
POLLS
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+