ರೋಹನ್ ಬೋಪಣ್ಣ ಅಕಾಡೆಮಿ ಜತೆ ಎಸಿಕ್ಸ್ ಇಂಡಿಯಾ ಸಹಯೋಗ

ಬೆಂಗಳೂರು ಸೆಪ್ಟೆಂಬರ್ 20: ಕ್ರೀಡೆಗೆ ಹಾಗೂ ಕ್ರೀಡಾಪಟುಗಳಿಗೆ ಅನುಕೂಲಕರವಾಗಿರುವ ಪಾದರಕ್ಷೆಗಳ ತಯಾರಿಕೆಯಲ್ಲಿ ಮುಂಚೂಣಿಯಲ್ಲಿರುವ ಸಂಸ್ಥೆಯಾಗಿರುವ ಎಸಿಕ್ಸ್ ಬೆಂಗಳೂರಿನಲ್ಲಿರುವ ಕರ್ನಾಟಕ ಸ್ಟೇಟ್ ಲಾನ್ ಟೆನಿಸ್ ಅಸೋಸಿಯೇಷನ್‍ನಲ್ಲಿ ಶುಕ್ರವಾರ ನಡೆದ ಕಾರ್ಯಕ್ರಮದಲ್ಲಿ ಅರ್ಜುನ ಪ್ರಶಸ್ತಿ ವಿಜೇತ ಟೆನಿಸ್ ಅಟಗಾರ ರೋಹನ್ ಬೋಪಣ್ಣ ಅವರನ್ನು ಎಸಿಕ್ಸ್ ಅಥ್ಲೀಟ್ ಎಂದು ಘೋಷಿಸಿತು.
ಮುಂದಿನ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಪದಕ ಗೆಲ್ಲುವ ವಿಶ್ವಾಸವನ್ನು ಹೊಂದಿರುವ ರೋಹನ್ ಅವರಿಗೆ ಬೆಂಬಲ ನೀಡುತ್ತಿರುವ ಎಸಿಕ್ಸ್, ರೋಹನ್ ಬೋಪಣ್ಣ ಟೆನಿಸ್ ಅಕಾಡೆಮಿಯ ಮೂಲಕ ಟೆನಿಸ್‍ಗೆ ಅಗತ್ಯವಿರುವ ಎಲ್ಲ ಸೌಕರ್ಯಗಳನ್ನು ನೀಡುವ ಜತೆಗೆ ಪ್ರಮಾಣಿಕೃತ ತರಬೇತುದಾರರ ಮೂಲಕ ಯುವ ಪ್ರತಿಭೆಗಳನ್ನು ಪ್ರೋತ್ಸಾಹಿಸುವ ಉದ್ದೇಶವನ್ನೂ ಹೊಂದಿದೆ. ಈ ಅಕ್ಟೋಬರ್‍ನಿಂದ ಆರಂಭವಾಗಲಿರುವ ಈ ಉದ್ದೇಶಿತ ಕಾರ್ಯಕ್ರಮದಲ್ಲಿ ರೋಹನ್ ಅವರ ಅಕಾಡೆಮಿಯಲ್ಲಿ ಪ್ರತಿ ಭಾನುವಾರ ಎಸಿಕ್ಸ್ ಟೆನಿಸ್ ಅವರ್ ನಡೆಯಲಿದ್ದು, ಆರ್‍ಬಿಟಿ ಕೋಚ್‍ಗಳು ವಿಶೇಷ ಮಾಸ್ಟರ್ ಕ್ಲಾಸ್‍ಗಳನ್ನು ಟೆನಿಸ್ ಆಕಾಂಕ್ಷಿಗಳಿಗಾಗಿ ನಡೆಸಲಿದ್ದಾರೆ. ಎಸಿಕ್ಸ್‍ನ ಎಲ್ಲ ಶೋ ರೂಂಗಳಲ್ಲಿ ಈ ತರಬೇತಿಗೆ ಸೇರಲು ನೋಂದಾಯಿಸಿಕೊಳ್ಳುವ ಅವಕಾಶವಿದೆ.
ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಎಸಿಕ್ಸ್ ಅಥ್ಲೀಟ್ ಟೆನಿಸ್ ಆಟಗಾರ್ತಿ ಕರ್ಮನ್ ಥಂಡಿ, ಟೆನಿಸ್ ಸ್ಟಾರ್ ರೋಹನ್ ಬೋಪಣ್ಣ ಅವರನ್ನು ಎಸಿಕ್ಸ್ ಫ್ಯಾಮಿಲಿಗೆ ಬರಮಾಡಿಕೊಂಡರು. ಬಜರಂಗ್ ಪೂನಿಯಾ ಹಾಗೂ ಸಾಕ್ಷಿ ಮಲಿಕ್ ಸೇರಿದಂತೆ ವಿಶ್ವಮಟ್ಟದ ಕುಸ್ತಿಪಟುಗಳ ಜತೆಯೂ ಎಸಿಕ್ಸ್ ಸಹಯೋಗವನ್ನು ಮಾಡಿಕೊಂಡಿದ್ದು, ಜತೆಗೆ ಟಿ ಗೋಪಿ ಹಾಗೂ ಜಿನ್ಸನ್ ಜಾನ್ಸನ್ ಅವರಂಥ ಖ್ಯಾತ ಅಥ್ಲೀಟ್‍ಗಳನ್ನೂ ತಮ್ಮ ಬ್ರಾಂಡ್ ಅಥ್ಲೀಟ್‍ಗಳನ್ನಾಗಿ ಮಾಡಿಕೊಂಡಿದೆ.

ಎಸಿಕ್ಸ್ ಬ್ರಾಂಡ್‍ನ ಜಾಗತಿಕ ತತ್ವ
ರೋಹನ್ ಬೋಪಣ್ಣ ಅವರು ಅತ್ಯಧಿಕ ಶ್ರೇಯಾಂಕ ಹೊಂದಿರುವ ಭಾರತದ ಡಬಲ್ಸ್ ಟೆನಿಸ್ ಆಟಗಾರರಾಗಿದ್ದು, 2017ರ ಫ್ರೆಂಚ್ ಓಪನ್‍ನ ಮಿಶ್ರ ಡಬಲ್ಸ್ ವಿಭಾಗದಲ್ಲಿ ಪ್ರಶಸ್ತಿ ಗೆಲ್ಲುವ ಮೂಲಕ ಮೊಟ್ಟ ಮೊದಲ ಗ್ರ್ಯಾನ್ ಸ್ಲಾಮ್ ಪ್ರಶಸ್ತಿ ತನ್ನದಾಗಿಸಿಕೊಂಡಿದ್ದರು. ಅದೇ ರೀತಿ ಅವರು 2018ರ ಏಷ್ಯನ್ ಗೇಮ್ಸ್‍ನ ಪುರುಷರ ಡಬಲ್ಸ್ ವಿಭಾಗದಲ್ಲಿ ಚಿನ್ನದ ಪದಕವನ್ನು ತಮ್ಮದಾಗಿಸಿಕೊಂಡಿದ್ದರು.
ರೋಹನ್ ಅವರ ಕ್ರೀಡಾ ವ್ಯಕ್ತಿತ್ವ ಹಾಗೂ ಸ್ಫೂರ್ತಿ ಎಸಿಕ್ಸ್ ಬ್ರಾಂಡ್‍ನ ಜಾಗತಿಕ ತತ್ವವಾಗಿರುವ "ಐ ಮೂವ್ ಮಿ'ಗೆ ಪೂರಕವಾಗಿದ್ದು, ಇದು ಗೆಲುವಿನ ಹಾದಿಯಲ್ಲಿ ಬೇಕಾಗಿರುವ ಮಾನಸಿಕ ಹಾಗೂ ದೈಹಿಕ ಫಿಟ್ನೆಸ್ ಅನ್ನು ಕೇಂದ್ರೀಕರಿಸುತ್ತದೆ.

ರೋಹನ್ ಬೋಪಣ್ಣ ಮಾತನಾಡಿ
ಎಸಿಕ್ಸ್ ಬ್ರಾಂಡ್ ಕುರಿತ ತನ್ನ ಅಭಿಮಾನವನ್ನು ವ್ಯಕ್ತಪಡಿಸುತ್ತಾ ಮಾತನಾಡಿದ ರೋಹನ್ ಬೋಪಣ್ಣ "ಅಥ್ಲೀಟ್‍ಗಳಿಗೆ ಅನುಕೂಲಕರವಾಗಿರುವ ತಂತ್ರಜ್ಞಾನ ಹಾಗೂ ಆವಿಷ್ಕಾರಗಳಿಗೆ ಮನ್ನಣೆ ನೀಡುವ ಕಾರಣ ನಾನು ಎಂದಿಗೂ ಎಸಿಕ್ಸ್ ಗೆ ಮೆಚ್ಚುಗೆ ವ್ಯಕ್ತಪಡಿಸುತ್ತೇನೆ. ಒಂದು ಕ್ರೀಡೆಯಾಗಿ ಟೆನಿಸ್‍ನಲ್ಲಿ ಪಾದದ ಚಲನೆಗೆ ಹೆಚ್ಚಿನ ಮಹತ್ವವಿದ್ದು, ಪಾದರಕ್ಷೆಗಳು ಇಲ್ಲಿ ಪ್ರಧಾನ ಪಾತ್ರ ವಹಿಸುವ ಜತೆಗೆ ನಮಗೆ ಅತ್ಯುತ್ತಮ ಪ್ರದರ್ಶನ ನೀಡುವಂತೆ ಪ್ರೇರೇಪಿಸುತ್ತವೆ. ಎಸಿಕ್ಸ್ ಜತೆಗಿನ ನನ್ನ ಸಹಯೋಗವನ್ನು ನಾನು ಎದುರು ನೋಡುತ್ತಿದ್ದು, ನನ್ನಲ್ಲಿರುವ ಸಂಭಾವ್ಯ ಸಾಮರ್ಥ್ಯವನ್ನು ಪ್ರದರ್ಶಿಸಲು ಅವಕಾಶ ದೊರೆಯಲಿದೆ" ಎಂದು ಹೇಳಿದರು.

ಎಸಿಕ್ಸ್ ಇಂಡಿಯಾ ನಿರ್ದೇಶಕ ರಜತ್
"ಹೆಚ್ಚೆಚ್ಚು ಕ್ರೀಡಾಪಟುಗಳಿಗೆ ಬೆಂಬಲ ನೀಡುವ ಮೂಲಕ ಅವರ ಒಲಿಂಪಿಕ್ ಪದಕ ಗೆಲ್ಲುವ ಕನಸನ್ನು ನನಸಾಗಿಸುವ ಗುರಿಯನ್ನು ನಾವು ಹೊಂದಿದ್ದೇವೆ. ಆ ನಿಟ್ಟಿನಲ್ಲಿ ಇದು ಮತ್ತೊಂದು ಮೆಟ್ಟಿಲಾಗಿದೆ. ಈಗಾಗಲೇ ನಮ್ಮ ಜಾಗತಿಕ ಬ್ರಾಂಡ್ ಅಂಬಾಸಿಡರ್ ಆಗಿ ಟೆನಿಸ್ ಲೋಕದ ತಾರೆ ನೊವಾಕ್ ಜೊಕೊವಿಕ್ ಅವರು ನಮ್ಮೊಂದಿಗೆ ಇದ್ದು, ಈ ಸಾಲಿನಲ್ಲಿ ಇದೀಗ ರೋಹನ್ ಬೋಪಣ್ಣ ಅವರೂ ಸೇರ್ಪಡೆಯಾಗಿದ್ದಾರೆ. ಹೀಗಾಗಿ 2020ರಲ್ಲಿ ನಡೆಯಲಿರುವ ಟೋಕಿಯೊ ಒಲಿಂಪಿಕ್ ಕ್ರೀಡಾಕೂಟದಲ್ಲಿ ನಮ್ಮ ಬ್ರಾಂಡ್‍ನ ಧ್ವಜವನ್ನು ಹಾರಿಸಲು ಸಿದ್ಧತೆ ನಡೆಸಿಕೊಂಡಿದ್ದೇವೆ,'' ಎಂದು ಎಸಿಕ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್‍ನ ವ್ಯವಸ್ಥಾಪಕ ನಿರ್ದೇಶಕ ರಜತ್ ಖುರಾನ ಅವರು ಹೇಳಿದರು.

ಎನಿಮಾ ಸಾನಾ ಇನ್ ಕಾರ್ಪೋರೋ ಸಾನೋ ಬಗ್ಗೆ
ಎನಿಮಾ ಸಾನಾ ಇನ್ ಕಾರ್ಪೋರೋ ಸಾನೋ, ಅಂದರೆ "ಆರೋಗ್ಯವಂತ ಶರೀರದಲ್ಲಿ ಆರೋಗ್ಯವಂತ ಮನಸ್ಸು ಇರುತ್ತದೆ" ಎಂಬ ಪುರಾತನ ಲ್ಯಾಟಿನ್ ಪದದ ಸಂಕ್ಷಿಪ್ತ ರೂಪವೇ ಎಸಿಕ್ಸ್. ಇದೇ ಮೂಲಭೂತ ಧ್ಯೇಯದೊಂದಿಗೆ ಈ ಬ್ರಾಂಡ್ ಈಗಲೂ ನಿಂತಿದೆ. 1949ರಲ್ಲಿ ಅಂದರೆ 70 ವರ್ಷಗಳಿಗಿಂತಲೂ ಹಿಂದೆ ಕಿಹಾಚಿರೋ ಒನಿಟ್ಸುಕಾ ಎಂಬವರು ಈ ಕಂಪನಿಯನ್ನು ಸ್ಥಾಪಿಸಿದರು. ಈಗ ಇದು ರನ್ನಿಂಗ್ ಶೂಗಳು ಮತ್ತು ಇತರೆ ಅಥ್ಲಿಟಿಕ್ ಫೂಟ್‍ವೇರ್‍ಗಳು, ಉಡುಗೆಗಳು ಮತ್ತು ಪರಿಕರಗಳ ತಯಾರಿಯಲ್ಲಿ ಮುಂಚೂಣಿಯಲ್ಲಿದೆ.
ಎಸಿಕ್ಸ್ ಇಂಡಿಯಾ ಮೆಟ್ರೋಗಳು, ಟೈರ್ 1 ಮತ್ತು ಟೈರ್ 2 ಪಟ್ಟಣಗಳ 25 ನಗರಗಳಲ್ಲಿ ಒಟ್ಟಾರೆ 37 ಮಳಿಗೆಗಳನ್ನು ಹೊಂದಿದೆ. 2019ರಲ್ಲಿ ಇನ್ನೂ ಕೆಲವು ಮಳಿಗೆಗಳನ್ನು ತೆರೆಯುವ ಉದ್ದೇಶವನ್ನೂ ಎಸಿಕ್ಸ್ ಹೊಂದಿದ್ದು, ನಿರಂತರವಾಗಿ ಈ ಸಂಖ್ಯೆಯನ್ನು ಹೆಚ್ಚಿಸುತ್ತಾ ಬರುತ್ತಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications