Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

'ಪ್ಯಾರೀಸ್ ಮಾಸ್ಟರ್ಸ್' ಸೋತರೂ Rankingನಲ್ಲಿ ಜೊಕೊವಿಕ್ ವಿಶ್ವ ನಂ.1

ATP Rankings: Despite Paris heartbreak, Djokovic reclaims top spot

ನವದೆಹಲಿ, ನವೆಂಬರ್ 6: ಎರಡು ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ ನೊವಾಕ್ ಜೊಕೊವಿಕ್, ಟೆನಿಸ್ ರ್ಯಾಂಕಿಂಗ್ ನಲ್ಲಿ ಅಗ್ರಸ್ಥಾನಕ್ಕೇರಿದ್ದಾರೆ. ಸೋಮವಾರ (ನವೆಂಬರ್ 5) ಪ್ರಕಟಿಸಲಾಗಿರುವ ಅಸೋಸಿಯೇಷನ್ ಆಫ್ ಟೆನಿಸ್ ಪ್ರೊಫೆಶನಲ್ಸ್ (ಎಟಿಪಿ) ರ್ಯಾಂಕಿಂಗ್ ನಲ್ಲಿ ಜೊಕೊವಿಕ್ ನಂ.1 ಸ್ಥಾನ ಅಲಂಕರಿಸಿದ್ದಾರೆ.

ಇತ್ತೀಚೆಗೆ ನಡೆದ ಪ್ಯಾರೀಸ್ ಮಾಸ್ಟರ್ಸ್ ಟೆನಿಸ್ ಟೂರ್ನಿಯ ಫೈನಲ್ ನಲ್ಲಿ ಸರ್ಬಿಯಾ ಬಲಾಡ್ಯ ಜೊಕೊವಿಕ್, ರಷ್ಯಾ ಆಟಗಾರ ಕರೆನ್ ಖಚನೊವ್ ವಿರುದ್ಧ ಸೋಲನುಭವಿಸಿದ್ದರು. ಆದರೂ ನೊವಾಕ್ ನಂ.1 ಸ್ಥಾನಕ್ಕೇರಿದ್ದಾರೆ. 2016 ಅಕ್ಟೋಬರ್ 31ರ ಬಳಿಕ ಜೊಕೊವಿಕ್ ಅಗ್ರ ಸ್ಥಾನಕ್ಕೇರುತ್ತಿರುವುದು ಇದೇ ಮೊದಲು.

ಟೆನಿಸ್ ಸಿಂಗಲ್ಸ್ ಪುರುಷರ ರ್ಯಾಂಕಿಂಗ್ ನಲ್ಲಿ ಸ್ಪೇನ್ ಆಟಗಾರ ರಾಫೆಲ್ ನಡಾಲ್, ಸ್ವಿಸ್ ಬಲಿಷ್ಟ ರೋಜರ್ ಫೆಡರರ್, ಅರ್ಜೆಂಟೀನಾ ಸ್ಟಾರ್ ಡೆಲ್ ಪೊಟ್ರೊ, ಜರ್ಮನ್ ಆಟಗಾರ ಅಲೆಕ್ಸಾಂಡರ್ ಝೆರೆವ್ ಕ್ರಮವಾಗಿ ಎರಡರಿಂದ ಐದರೊಳಗೆ ಸ್ಥಾನ ಪಡೆದಿದ್ದಾರೆ. ನಂ.1 ಸ್ಥಾನದಲ್ಲಿದ್ದ ರಾಫೆಲ್ ನಡಾಲ್ ಅವರನ್ನು ಜೊಕೊವಿಕ್ ಕೆಳಗಿಳಿಸಿದ್ದಾರೆ.

Story first published: Tuesday, November 6, 2018, 15:45 [IST]
Other articles published on Nov 6, 2018
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+