Australian Open 2024: ಚೊಚ್ಚಲ ಬಾರಿಗೆ ಆಸ್ಟ್ರೇಲಿಯನ್ ಓಪನ್ ಫೈನಲ್ ಪ್ರವೇಶಿಸಿದ ಬೋಪಣ್ಣ-ಎಬ್ಡೆನ್ ಜೋಡಿ
ಗುರುವಾರ, ಜನವರಿ 25ರಂದು ಎಬ್ಡೆನ್ ರಾಡ್ ಲೇವರ್ ಟೆನ್ನಿಸ್ ಕೋರ್ಟ್‌ನಲ್ಲಿ ನಡೆದ 2024ರ ಆಸ್ಟ್ರೇಲಿಯನ್ ಓಪನ್ ಟೂರ್ನಿಯ ಸೆಮಿಫೈನಲ್‌ನಲ್ಲಿ ಗೆದ್ದು ಭಾರತದ ರೋಹನ್ ಬೋಪಣ್ಣ ಮತ್ತು ಆಸ್ಟ್ರೇಲಿಯಾದ ಮ್ಯಾಥ್ಯೂ ಎಬ್ಡೆನ್ ಜೋಡಿ ಫೈನಲ್‌ಗೆ ಲಗ್ಗೆ ಇಟ್ಟಿದ್ದಾರೆ.
ಇದೇ ಮೊದಲ ಬಾರಿಗೆ ಆಸ್ಟ್ರೇಲಿಯನ್ ಓಪನ್ ಫೈನಲ್‌ಗೆ ಪ್ರವೇಶಿಸಿದ ರೋಹನ್ ಬೋಪಣ್ಣ ಮತ್ತು ಮ್ಯಾಥ್ಯೂ ಎಬ್ಡೆನ್ ಜೋಡಿ ಸೆಮಿಫೈನಲ್‌ನಲ್ಲಿ ZZ ಜಾಂಗ್ ಮತ್ತು ತೋಮಸ್ ಮಚಾಕ್ ಅವರನ್ನು ಸೋಲಿಸಿದರು.

ಇದಕ್ಕೂ ಮೊದಲು ಕ್ವಾರ್ಟರ್-ಫೈನಲ್‌ನಲ್ಲಿ ತಮ್ಮ ಅದ್ಭುತ ಗೆಲುವಿನ ನಂತರ ನಂಬರ್ 1 ಶ್ರೇಯಾಂಕದ ಪುರುಷರ ಡಬಲ್ಸ್ ಜೋಡಿಯಾದ ಬೋಪಣ್ಣ ಮತ್ತು ಎಬ್ಡೆನ್, 2024ರ ಆಸ್ಟ್ರೇಲಿಯನ್ ಓಪನ್‌ನ ಫೈನಲ್‌ಗೆ ಮುನ್ನಡೆಯಲು ಜಾಂಗ್ ಮತ್ತು ಮಚಾಕ್ ಅವರಿಂದ ಕಠಿಣ ಹೋರಾಟವನ್ನು ಎದುರಿಸಿದರು.
ಭಾರತ-ಆಸ್ಟ್ರೇಲಿಯನ್ ಜೋಡಿಯು ಜಾಂಗ್ ಮತ್ತು ಮಚಾಕ್ ಜೋಡಿಯನ್ನು 6-3, 3-6, 7-6 ಸೆಟ್‌ಗಳಿಂದ ಸೋಲಿಸಿ ಚೊಚ್ಚಲ ಬಾರಿಗೆ ಆಸ್ಟ್ರೇಲಿಯನ್ ಓಪನ್ ಫೈನಲ್‌ಗೆ ಲಗ್ಗೆ ಇಟ್ಟಿತು. ಈ ಗೆಲುವಿನೊಂದಿಗೆ, ಸ್ಟಾರ್ ಟೆನ್ನಿಸ್ ಜೋಡಿಯು ಗ್ರ್ಯಾಂಡ್ ಸ್ಲ್ಯಾಮ್‌ಗಳಲ್ಲಿ ಸತತ ಎರಡನೇ ಬಾರಿ ಫೈನಲ್‌ಗೆ ತಲುಪಿತು. ಈ ಹಿಂದೆ 2023ರ ಯುಎಸ್ ಓಪನ್‌ನ ಫೈನಲ್‌ಗೆ ತಲುಪಿತ್ತು.
ರೋಹನ್ ಬೋಪಣ್ಣ ಮತ್ತು ಮ್ಯಾಥ್ಯೂ ಎಬ್ಡೆನ್ ಮೊದಲ ಸೆಟ್ ಅನ್ನು 6-3 ಅಂತರದಲ್ಲಿ ಗೆದ್ದು ಉತ್ತಮ ರೀತಿಯಲ್ಲಿ ಪಂದ್ಯವನ್ನು ಪ್ರಾರಂಭಿಸಿದರು. ಎರಡನೇ ಸೆಟ್‌ನಲ್ಲಿ ಸ್ವಲ್ಪ ಮಳೆ ಬಂದು ಆಟ ವಿಳಂಬವಾಯಿತು. ನಂತರ ಜಾಂಗ್ ಮತ್ತು ಮಚಾಕ್ ಎರಡನೇ ಸೆಟ್‌ನಲ್ಲಿ 6-3 ಗೆಲುವಿನೊಂದಿಗೆ ಪುನರಾಗಮನ ಮಾಡಿದರು.
ZZ ಜಾಂಗ್ ಮತ್ತು ತೋಮಸ್ ಮಚಾಕ್ ಜೋಡಿಯು ಮೂರನೇ ಮತ್ತು ಅಂತಿಮ ಸೆಟ್‌ನಲ್ಲಿ ಅಸಾಧಾರಣವಾಗಿ ಪುಟಿದೆದ್ದರು ಮತ್ತು ಅದನ್ನು ಟೈ-ಬ್ರೇಕರ್‌ಗೆ 1-4 ಹಿನ್ನಡೆಯಲ್ಲಿ ಕೊಂಡೊಯ್ದರು.
ಟೈ-ಬ್ರೇಕರ್‌ನಲ್ಲಿ ಕೊನೆಯ ಘರ್ಷಣೆಯಲ್ಲಿ ರೋಹನ್ ಬೋಪಣ್ಣ ಮತ್ತು ಮ್ಯಾಥ್ಯೂ ಎಬ್ಡೆನ್ ಜೋಡಿಯು ಕೆಲವು ಅದ್ಭುತ ಶಾಟ್-ಮೇಕಿಂಗ್‌ನಿಂದ ಗೆಲುವು ಸಾಧಿಸಿದರು. ಬೋಪಣ್ಣ ಮತ್ತು ಎಬ್ಡೆನ್ ಅವರು ಟೈ ಬ್ರೇಕರ್‌ನಲ್ಲಿ 10-7 ಅಂತರದಿಂದ ಗೆದ್ದು ಫೈನಲ್‌ನಲ್ಲಿ ಸ್ಥಾನ ಖಚಿತಪಡಿಸಿಕೊಂಡರು.
ರೋಹನ್ ಬೋಪಣ್ಣ ಮತ್ತು ಮ್ಯಾಥ್ಯೂ ಎಬ್ಡೆನ್ ಜೋಡಿ ಇದೀಗ ಆಲ್-ಇಟಾಲಿಯನ್ ಜೋಡಿಯಾದ ಆಂಡ್ರಿಯಾ ವವಾಸ್ಸೋರಿ ಮತ್ತು ಸಿಮೋನ್ ಬೊಲೆಲ್ಲಿ ಅಥವಾ ಜರ್ಮನ್ ಜೋಡಿಯಾದ ಡೊಮಿನಿಕ್ ಕೋಪ್ಫರ್ ಮತ್ತು ಯಾನಿಕ್ ಹ್ಯಾನ್ಫ್ಮನ್ ಅವರ ನಡುವಿನ ವಿಜೇತರನ್ನು ಪ್ರಶಸ್ತಿ ಕಾಳಗದಲ್ಲಿ ಎದುರಿಸಲಿದ್ದಾರೆ.
ಝಾಂಗ್ ಮತ್ತು ಮಚಾಕ್ ಜೋಡಿಯು ಟೂರ್ನಿಯಲ್ಲಿ ಹಿಂದಿನ ಯುಎಸ್ ಓಪನ್ ಚಾಂಪಿಯನ್ ರಾಜೀವ್ ರಾಮ್ ಮತ್ತು ಜೋ ಸಾಲಿಸ್ಬರಿ ಅವರನ್ನು ಸೋಲಿಸಿತ್ತು.
ತಮ್ಮ ಗೆಲುವಿನ ನಂತರ ಮಾತನಾಡಿದ ರೋಹನ್ ಬೋಪಣ್ಣ, ಎದುರಾಳಿಗಳಾದ ಜಾಂಗ್ ಮತ್ತು ಮಚಾಕ್ ವಿರುದ್ಧದ ಕಷ್ಟಕರವಾದ ಟೈ-ಬ್ರೇಕರ್‌ನಿಂದ ಹೊರಬರಲು ಮ್ಯಾಥ್ಯೂ ಎಬ್ಡೆನ್ ಅವರೊಂದಿಗೆ ಇಷ್ಟು ದಿನ ಒಟ್ಟಿಗೆ ಆಟವಾಡಿದ್ದು ಸಹಾಯ ಮಾಡಿತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications