ಆಸ್ಟ್ರೇಲಿಯಾ ಓಪನ್: ಚೊಚ್ಚಲ ಗ್ರ್ಯಾಂಡ್‌ಸ್ಲ್ಯಾಮ್ ಕೆನ್ನೆಗೆ ಮುತ್ತಿಕ್ಕಿದ ಕೆನಿನ್

ಮೆಲ್ಬರ್ನ್, ಫೆಬ್ರವರಿ 1: ಅಮೆರಿಕಾದ ಟೆನಿಸ್ ಆಟಗಾರ್ತಿ ಸೋಫಿಯಾ ಕೆನಿನ್ ವೃತ್ತಿ ಬದುಕಿನ ಚೊಚ್ಚಲ ಗ್ರ್ಯಾಂಡ್‌ಸ್ಲ್ಯಾಮ್ ಟ್ರೋಫಿಗೆ ಮುತ್ತಿಕ್ಕಿದ್ದಾರೆ. ಶನಿವಾರ (ಫೆಬ್ರವರಿ 1) ನಡೆದ ಆಸ್ಟ್ರೇಲಿಯಾ ಓಪನ್ ಮಹಿಳಾ ಸಿಂಗಲ್ಸ್ ವಿಭಾಗದ ಫೈನಲ್ ಪಂದ್ಯದಲ್ಲಿ ಕೆನಿನ್ ಚಾಂಪಿಯನ್ ಆಗಿ ಮಿನುಗಿದ್ದಾರೆ.
ಮೆಲ್ಬರ್ನ್‌ನ ರಾಡ್ ಲ್ಯಾವರ್ ಅರೇನಾದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಸ್ಪೇನ್ ಆಟಗಾರ್ತಿ ಗಾರ್ಬೈನ್ ಮುಗುರುಜಾ ವಿರುದ್ಧ ಸೋಫಿಯಾ ಕೆನಿನ್ 4-6, 6-2, 6-2ರ ಜಯ ದಾಖಲಿಸಿದರು. ಆರಂಭಿಕ ಸೆಟ್‌ನಲ್ಲಿ ಮೈಲುಗೈ ಸಾಧಿಸಿದ್ದ ಮುಗುರುಜಾ ಪ್ರಶಸ್ತಿ ಬಾಚಿಕೊಳ್ಳುವ ಮುಸ್ಸೂಚನೆ ನೀಡಿದ್ದರಾದರೂ ಕೆನಿನ್ ಫಲಿತಾಂಶವನ್ನು ತನ್ನಡೆಗೆ ಸೆಳೆದುಕೊಂಡರು.
ವಿಶ್ವ ಶ್ರೇಯಾಂಕದಲ್ಲಿ 15ನೇ ಸ್ಥಾನದಲ್ಲಿದ್ದ ಕೆನಿನ್, 32ನೇ ಶ್ರೇಯಾಂಕಿತೆ, 2 ಗ್ರ್ಯಾಂಡ್‌ಸ್ಲ್ಯಾಮ್ ಪ್ರಶಸ್ತಿಗಳನ್ನು ಗೆದ್ದಿರುವ ಮುಗುರುಜಾ ವಿರುದ್ಧ ಗೆದ್ದು ಗ್ರ್ಯಾಂಡ್‌ಸ್ಲ್ಯಾಮ್ ಗೆಲುವಿನ ಖುಷಿಯನ್ನು ಸಂಭ್ರಮಿಸಿದ್ದಾರೆ. ಆಸ್ಟ್ರೇಲಿಯಾ ಓಪನ್ ಪುರುಷರ ಸಿಂಗಲ್ಸ್ ಫೈನಲ್ ಹಣಾಹಣಿ ಭಾನುವಾರ (ಫೆಬ್ರವರಿ 2) 2 pmಗೆ ನೊವಾಕ್ ಜೊಕೋವಿಕ್ ಮತ್ತು ಡೊಮಿನಿಕ್ ಥೀಮ್ ನಡುವೆ ನಡೆಯಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications