ಆಸ್ಟ್ರೇಲಿಯಾ ಓಪನ್ 2019: ಸ್ಟೊಸರ್-ಶುಯಿಗೆ ಮಹಿಳಾ ಡಬಲ್ಸ್ ಕಿರೀಟ

ಮೆಲ್ಬರ್ನ್, ಜನವರಿ 25: ಮೆಲ್ಬರ್ನ್ ಪಾರ್ಕ್‌ನಲ್ಲಿ ಶುಕ್ರವಾರ (ಜನವರಿ 25) ನಡೆದ ಆಸ್ಟ್ರೇಲಿಯಾ ಓಪನ್ ಮಹಿಳಾ ಡಬಲ್ಸ್ ಫೈನಲ್ ಪಂದ್ಯದಲ್ಲಿ ಸಮಂತಾ ಸ್ಟೊಸರ್-ಜಾಂಗ್ ಶುಯಿ ಜೋಡಿ ಚೊಚ್ಚಲ ಬಾರಿಗೆ ಚಾಂಪಿಯನ್ ಎನಿಸಿಕೊಂಡಿತು. ಇದರೊಂದಿಗೆ ಈ ಜೋಡಿ ಮೊದಲ ಡಬಲ್ಸ್ ಗ್ರ್ಯಾಂಡ್‌ಸ್ಲ್ಯಾಮ್ ಕಿರೀಟವನ್ನೂ ಮುಡಿಗೇರಿಸಿಕೊಂಡಿದೆ.
ಶ್ರೇಯಾಂಕದಲ್ಲಿಲ್ಲದ ಆಸ್ಟ್ರೇಲಿಯಾ (ಸ್ಟೊಸರ್)- ಚೀನಾ (ಶುಯಿ) ಜೋಡಿ ಎರಡನೇ ಶ್ರೇಯಾಂಕಿತ ಹಂಗೇರಿಯನ್-ಫ್ರೆಂಚ್ ಜೋಡಿಯಾದ ಟಿಮಿಯಾ ಬಬೊಸ್-ಕ್ರಿಸ್ಟಿನಾ ಮ್ಲೆಡೊವಿಕ್ ಜೋಡಿಯನ್ನು ಮಣಿಸಿ ಪ್ರಶಸ್ತಿ ತನ್ನದಾಗಿಸಿಕೊಂಡಿತು.
ಬಬೊಸ್-ಕ್ರಿಸ್ಟಿನಾ ಕಳೆದ ಬಾರಿಯ ಚಾಂಪಿಯನ್ ಜೋಡಿ. ಆದರೆ ಈ ಬಾರಿ ಸ್ಟೊಸರ್-ಶುಯಿ ದಿಟ್ಟ ಹೋರಾಟಕ್ಕೆ 6-3, 6-4 ಅಂತರದಿಂದ ಶರಣಾಯಿತು. ಪ್ರಶಸ್ತಿ ಸ್ವೀಕರಿಸುತ್ತ ಜಾಂಗ್, 'ಇವತ್ತು ನನ್ನ ಕನಸು ನನಸಾಗಿದೆ' ಎಂದು ಚೊಚ್ಚಲ ಡಬಲ್ಸ್ ಗ್ರ್ಯಾಂಡ್‌ಸ್ಲ್ಯಾಮ್ ಜಯಿಸಿದ ಖುಷಿಯನ್ನು ಹಂಚಿಕೊಂಡರು.
Story first published: Friday, January 25, 2019, 16:08 [IST]
Other articles published on Jan 25, 2019
Log in for Better Reading Experience!
By signing in, you agree to our Terms and Privacy Policy
Gender
Select your Gender
- Male
- Female
- Others
Age
Select your Age Range
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications