Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಆಸ್ಟ್ರೇಲಿಯನ್ ಓಪನ್: ಕ್ವಾರ್ಟರ್‌ಫೈನಲ್; ಸೆಮಿಫೈನಲ್‌ಗೆ ಕಾಲಿಟ್ಟ ಬೆರೆಟ್ಟಿನಿ, ನಡಾಲ್

Australian Open 2022: Berrettini, Nadal, Barty enter Semifinal, day 9 Highlights

ಆಸ್ಟ್ರೇಲಿಯನ್ ಓಪನ್ ಕುತೂಹಲಕಾರಿ ಘಟ್ಟವನ್ನು ತಲುಪಿದೆ. ಇಂದು ನಡೆದ ಕ್ವಾರ್ಟರ್ ಫೈನಲ್ ಸೆಣೆಸಾಟದಲ್ಲಿ ಪ್ರಮುಖ ಪಂದ್ಯಗಳು ನಡೆದಿದ್ದು ನಡಾಲ್ ಬೆರೆಟ್ಟಿನಿ ಸಹಿತ ಪ್ರಮುಖ ಆಟಗಾರರು ಸೆಮಿಫೈನಲ್‌ಗೆ ಪ್ರವೇಶ್ ಪಡೆದುಕೊಂಡಿದ್ದಾರೆ.

ಸೆಮಿಫೈನಲ್‌ನಲ್ಲಿ ಮುಖಾಮುಖಿಯಾಗಲಿದ್ದಾರೆ ಬೆರೆಟ್ಟಿನಿ, ನಡಾಲ್: 20 ಬಾರಿಯ ಗ್ರ್ಯಾಂಡ್ ಸ್ಲಾಮ್ ಚಾಂಪಿಯನ್ ರಾಫೆಲ್ ನಡಾಲ್ ಹಾಗೂ ವಿಶ್ವ ನಂ.1 ಆಶ್ ಬಾರ್ಟಿ ಕ್ವಾರ್ಟರ್ ಫೈನಲ್ ಹೋರಾಟದಲ್ಲಿ ಗೆಲುವು ಸಾಧಿಸಿ ಸೆಮಿಫೈನಲ್‌ಗೆ ಪ್ರವೇಶ್ ಪಡೆದುಕೊಂಡಿದ್ದಾರೆ. ಸೆಮಿಫೈನಲ್‌ನಲ್ಲಿ ರಾಫೆಲ್ ನಡಾಲ್ ಅವರೊಂದಿಗೆ ಮ್ಯಾಟಿಯೊ ಬೆರೆಟ್ಟಿನಿ ಕಣಕ್ಕಿಳಿಯಲು ಅರ್ಹತೆ ಸಂಪಾದಿಸಿದ್ದಾರೆ. ಈ ಮಧ್ಯೆ 2021 ರ ಫ್ರೆಂಚ್ ಓಪನ್ ಚಾಂಪಿಯನ್ ಬಾರ್ಬೊರಾ ಕ್ರೆಜ್ಸಿಕೋವಾ ಸೋತು ನಿರ್ಗಮಿಸಿದ್ದಾರೆ.

ಸೆಮಿಫೈನಲ್‌ಗೆ ಪ್ರವೇಶಿಸಿದ ಆಶ್ ಬಾರ್ಟಿ: ವಿಶ್ವದ ನಂ. 1 ಟೆನಿಸ್ ಆಟಗಾರ್ತಿ ಆಶ್ಲೀಗ್ ಬಾರ್ಟಿ ಆಸ್ಟ್ರೇಲಿಯನ್ ಓಪನ್‌ನಲ್ಲಿ ತನ್ನ ಗೆಲುವಿನ ಓಟವನ್ನು ಮುಂದುವರೆಸಿದ್ದಾರೆ. 21ನೇ ಶ್ರೇಯಾಂಕದ ಜೆಸ್ಸಿಕಾ ಪೆಗುಲಾ ವಿರುದ್ಧ ನಡೆದ ಕ್ವಾರ್ಟರ್‌ಫೈನಲ್ ಪಂದ್ಯದಲ್ಲಿ ಸಂಪೂರ್ಣ ಮೇಲುಗೈ ಸಾಧಿಸಿದ ಬಾರ್ಟಿ ಸುಲಭ ಗೆಲುವು ಸಾಧಿಸಿದರು. ಅವರು ಆರಂಭಿಕ ಸೆಟ್ ಅನ್ನು 6-2 ರಿಂದ ಗೆದ್ದುಕೊಂಡಾ ಆಸ್ಟ್ರೇಲಿಯನ್ ಸ್ಟಾರ್ ಆಟಗಾರ್ತಿ ಎರಡನೇ ಸೆಟ್‌ನಲ್ಲಿ 6-0 ಸ್ಕೋರ್‌ಲೈನ್‌ನೊಂದಿಗೆ ತನ್ನ ಮೊದಲ ಹೋಮ್ ಸ್ಲಾಮ್ ಪ್ರಶಸ್ತಿಯ ಸನಿಹಕ್ಕೆ ತಲುಪಿದ್ದಾರೆ.

ಮ್ಯಾಜಿಕ್ ಮುಂದುವರಿಸಿದ ರಾಫೆಲ್ ನಡಾಲ್: 20 ಬಾರಿಯ ಗ್ರ್ಯಾಂಡ್ ಸ್ಲ್ಯಾಮ್ ಚಾಂಪಿಯನ್ ರಾಫೆಲ್ ನಡಾಲ್‌ಗೆ ಕ್ವಾರ್ಟರ್‌ಫೈನಲ್‌ನಲ್ಲಿ ಡೆನಿಸ್ ಶಪೋವಲೋವ್ ಮುಖಾಮುಖಿಯಾಗಿದ್ದರು. 4 ಗಂಟೆ ಮತ್ತು 8 ನಿಮಿಷಗಳ ಕಾಲ ನಡೆದ ಈ ಪೈಪೋಟಿಯ ಪಂದ್ಯದಲ್ಲಿ ಪಂದ್ಯದಲ್ಲಿ ಕೆನಡಾದ ಆಟಗಾರನನ್ನು ಮಣಿಸುವಲ್ಲಿ ನಡಾಲ್ ಯಶಸ್ವಿಯಾದರು. ಐದು ಸೆಟ್‌ಗಳ ರೋಚಕ ಹೋರಾಟದಲ್ಲಿ ನಡಾಲ್ ಗೆಲುವಿನ ನಗೆ ಬೀರಿದರು. ಮೊದಲ ಎರಡು ಸೆಟ್‌ಗಳನ್ನು ಗೆದ್ದ ನಡಾಲ್‌ಗೆ ಶಪೋವಲೋವ್ ನಂತರದ ಎರಡು ಸೆಟ್‌ಗಳಲ್ಲಿ ತಿರುಗೇಟು ನೀಡಿದರು. ಅಂತಿಮ ಸೆಟ್‌ನಲ್ಲಿ ನಡಾಲ್ ಗೆದ್ದು ಬೀಗುವ ಮೂಲಕ 21ನೇ ಗ್ರ್ಯಾಂಡ್‌ಸ್ಲ್ಯಾಮ್ ಗೆಲುವಿನ ಸನಿಹಕ್ಕೆ ತಲುಪಿದ್ದಾರೆ.

ಈ ಗ್ರ್ಯಾಂಡ್‌ಸ್ಲ್ಯಾಮ್ ಗೆದ್ದರೆ ರೋಜರ್ ಫೆಡರರ್ ಮತ್ತು ನೊವಾಕ್ ಜೊಕೊವಿಕ್ ಅವರನ್ನು ಹಿಂದಿಕ್ಕಿ ದಾಖಲೆಯ 21 ನೇ ಗ್ರ್ಯಾಂಡ್ ಸ್ಲಾಮ್‌ ಗೆದ್ದ ದಾಖಲೆ ಬರೆಯಲಿದ್ದಾರೆ ನಡಾಲ್. ಫೆಡರರ್ ಗಾಯದ ಕಾರಣದಿಂದ ಆಸ್ಟ್ರೇಲಿಯನ್ ಟೂರ್ನಿಯಿಮದ ಹೊರಗುಳಿದಿದ್ದರೆ ಜೊಕೊವಿಕ್ ಕೊರೊನಾವೈರಸ್ ಲಸಿಕೆ ವಿವಾದದಿಂದ ವಿಸಾ ರದ್ದಾಗಿ ಅಂತಿಮ ಟೂರ್ನಿಯಲ್ಲಿ ಭಾಗವಹಿಸದೆ ವಾಪಾಸಾಗುವ ಅನಿವಾರ್ಯತೆಗೆ ಸಿಲುಕಿದರು.

ಇನ್ನು ಆಸ್ಟ್ರೇಲಿಯನ್ ಓಪನ್ ನಲ್ಲಿ ಭಾರತದ ಸ್ಟಾರ್ ಟೆನಿಸ್ ಆಟಗಾರ್ತಿ ಸಾನಿಯಾ ಮಿರ್ಜಾ ಹೋರಾಟ ಅಂತ್ಯಗೊಂಡಿದೆ. ಅಮೆರಿಕದ ಟೆನಿಸ್ ಆಟಗಾರ ರಾಜೀವ್ ರಾಮ್ ಜತೆ ಮಿಶ್ರ ಡಬಲ್ಸ್ ನಲ್ಲಿ ಕಣಕ್ಕೆ ಇಳಿದಿದ್ದ ಸಾನಿಯಾ ಮಿರ್ಜಾ ಕ್ವಾರ್ಟರ್ ಫೈನಲ್‌ನಲ್ಲಿ ಸೋತು ನಿರ್ಗಮಿಸಿದ್ದಾರೆ. ಮಂಗಳವಾರ ನಡೆದ ಮಿಶ್ರ ಡಬಲ್ಸ್ ಕ್ವಾರ್ಟರ್‌ಫೈನಲ್‌ನಲ್ಲಿ ಶ್ರೇಯಾಂಕ ರಹಿತ ಸಾನಿಯಾ-ರಾಮ್ 4-6, 6-7 ರಲ್ಲಿ ಆಸ್ಟ್ರೇಲಿಯಾದ ಮಿಶ್ರ ಡಬಲ್ಸ್‌ನ ಜೇಸನ್ ಕುಬ್ಲರ್ ಮತ್ತು ಜೇಮಿ ಫೋರ್ಲಿಸ್ ವಿರುದ್ಧ ಸೋಲು ಅನುಭವಿಸಿದ್ದಾರೆ.

Story first published: Tuesday, January 25, 2022, 21:01 [IST]
Other articles published on Jan 25, 2022
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+