Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಆಸ್ಟ್ರೇಲಿಯನ್ ಓಪನ್: 4ನೇ ದಿನ, ಟೂರ್ನಿಯಿಂದ ಹೊರಬಿದ್ದ ಮರ್ರೆ, ರಾಡುಕೇನು

Australian Open 2022: Murray, Raducanu & Muguruza ousted, day 4 Highlights

ಆಸ್ಟ್ರೇಲಿಯನ್ ಓಪನ್‌ನ 4ನೇ ದಿನ ಕೂಡ ಕೆಲ ಪ್ರಮುಖ ಆಟಗಾರರು ಸೋಲುಕಂಡಿದ್ದಾರೆ. ಮಾಜಿ ವಿಶ್ವದ ನಂ.1 ಟೆನಿಸ್ ಆಟಗಾರ ಆ್ಯಂಡಿ ಮರ್ರೆ ಮತ್ತು ಯುಎಸ್ ಓಪನ್ ಚಾಂಪಿಯನ್ ಎಮ್ಮಾ ರಾಡುಕೇನು ಸೋಲನ್ನು ಅನುಭವಿಸಿ ಹೊರಬಿದ್ದಿದ್ದಾರೆ. ಇನ್ನು ಫ್ರಾನ್ಸ್‌ನ ಆಟಗಾರ್ತಿ ಅಲೈಜ್ ಕಾರ್ನೆಟ್ ಸ್ಪಾನಿಶ್ ಟೆನಿಸ್ ಪಟು ಗಾರ್ಬೈನ್ ಮುಗುರುಜಾ ಅವರಿಗೆ ಆಘಾತ ನೀಡಿದರು. ಮತ್ತೊಂದೆಡೆ ವಿಶ್ವದ ನಂ.2 ಆಟಗಾರ ಡೇನಿಯಲ್ ಮೆಡ್ವೆಡೆವ್ ಮತ್ತು ನಾಲ್ಕನೇ ಶ್ರೇಯಾಂಕದ ಸ್ಟೆಫಾನೋಸ್ ಸಿಟ್ಸಿಪಾಸ್ 4 ನೇ ಸುತ್ತಿಗೆ ಪ್ರವೇಶ ಪಡೆದುಕೊಂಡಿದ್ದಾರೆ.

ಸೋಲು ಅನುಭವಿಸಿದ ಎಮ್ಮಾ ರಾಡುಕೇನು: ವಿಶ್ವದ 18ನೇ ಶ್ರೇಯಾಂಕಿತ ಆಟಗಾರ್ತಿ ಮತ್ತು ಯುಎಸ್ ಓಪನ್ ಚಾಂಪಿಯನ್ ಎಮ್ಮಾ ರಾಡುಕೇನು ಆಸ್ಟ್ರೇಲಿಯನ್ ಓಪನ್‌ನಿಂದ ಹೊರಬಿದ್ದಿದ್ದಾರೆ. ಗುರುವಾರ ನಡೆದ ಎರಡನೇ ಸುತ್ತಿನಲ್ಲಿ ರಾಡುಕೇನು 98ನೇ ಶ್ರೇಯಾಂಕದ ಮಾಂಟೆನೆಗ್ರೊದ ಡಂಕಾ ಕೊವಿನಿಕ್ ವಿರುದ್ಧ ಸೋಲು ಕಂಡಿದ್ದಾರೆ. 19 ವರ್ಷದ ರಾಡುಕೇನು ಎರಡನೇ ಸೆಟ್‌ನಲ್ಲಿ ತಿರುಗೇಟು ನೀಡಿದ ಹೊರತಾಗಿಯೂ ಪಂದ್ಯದಲ್ಲಿ ಎದುರಾಳಿಯನ್ನು ಮೀರಿಸಲು ಸಾಧ್ಯವಾಗಲಿಲ್ಲ. ಅಂತಿಮವಾಗಿ 6-4, 4-6 ಮತ್ತು 6-3 ಅಂತರದಿಂದ ಕೋವಿನಿಕ್ ಗೆಲುವು ಸಾಧಿಸಿರು.

ನಿರಾಸೆ ಅನುಭವಿಸಿದ ಆ್ಯಂಡಿ: ವಿಶ್ವದ ಮಾಜಿ ನಂ.1 ಟೆನಿಸಿಗ ಆ್ಯಂಡಿ ಆಸ್ಟ್ರೇಲಿಯನ್ ಓಪನ್ ಗೆಲ್ಲುವ ಕನಸು ಗುರುವಾರ ಅಂತ್ಯವಾಗಿದೆ. ಎರಡನೇ ಸುತ್ತಿನಲ್ಲಿ ಕ್ವಾಲಿಫೈಯರ್ ತಾರೊ ಡೇನಿಯಲ್ ವಿರುದ್ಧ ಭಾರೀ ಅಂತರದ ಸೋಲು ಅನುಭವಿಸಿದ್ದಾರೆ. ಈ ಪಂದ್ಯದಲ್ಲಿ ಆಂಡಿ ಮರ್ರೆ 6-4, 6-4 ಮತ್ತು 6-4 ನೇರ ಸೆಟ್‌ಗಳಿಂದ ಸೋಲು ಅನುಭವಿಸಿದರು. ಈ ಸೆಣೆಸಾಟ ಜಾನ್ ಕೇನ್ ಅರೆನಾದಲ್ಲಿ 2 ಗಂಟೆ 48 ನಿಮಿಷಗಳ ಕಾಲ ನಡೆಯಿತು. ಮೊದಲ ಸುತ್ತಿನಲ್ಲಿ ಮರ್ರೆ ನಿಕೊಲೊಜ್ ಬಸಿಲಾಶ್ವಿಲಿ ಅವರನ್ನು 6-1, 3-6, 6-4, 6-7 (5), 6-4 ಸೆಟ್‌ಗಳಿಂದ ಸೋಲಿಸಿ ಎರಡನೇ ಸುತ್ತಿಗೆ ತಲುಪಿದ್ದರು.

ಮತ್ತೊಂದು ಪಂದ್ಯದಲ್ಲಿ ಸ್ಟೆಫಾನೊಸ್ ಸಿಟ್ಸಿಪಾಸ್ ಅರ್ಜೆಂಟೀನಾದ ಸೆಬಾಸ್ಟಿಯನ್ ಬೇಜ್ ಅವರನ್ನು ಕಠಿಣ ಹೋರಾಟದಲ್ಲಿ ಮಣಿಸುವಲ್ಲಿ ಯಶಸ್ವಿಯಾಗಿದ್ದಾರೆ. ಟೈಬ್ರೇಕರ್ ಕಂಡ ಈ ಪಂದ್ಯ ಸವಾಲಿನಿಂದ ಕೂಡಿತ್ತು. ಅಂತಿಮವಾಗಿ 7-6, 6-7, 6-3 ಮತ್ತು 6-4 ಅಂತರದಿಂದ ಸ್ಟೆಫಾನೊಸ್ ಸಿಟ್ಸಿಪಾಸ್ ಗೆಲುವು ಸಾಧಿಸಿದ್ದಾರೆ. ಮಾರ್ಗರೇಟ್ ಕೋರ್ಟ್ ಅರೆನಾದಲ್ಲಿ ನಡೆದ ಈ ಪಂದ್ಯ 3 ಗಂಟೆ 22 ನಿಮಿಷಗಳ ಕಾಲ ಈ ಕದನ ನಡೆಯಿತು. ಸಿಟ್ಸಿಪಾಸ್ ಮೊದಲ ಸುತ್ತಿನಲ್ಲಿ ಮಿಕಾಲೆ ಯೆಮರ್ ವಿರುದ್ಧ 6-2, 6-4, 6-3 ನೇರ ಸೆಟ್‌ಗಳಲ್ಲಿ ನೇರ ಗೆಲುವು ದಾಖಲಿಸಿದ್ದರು.

ಗಾರ್ಬೈನ್ ಮುಗುರುಜಾ ಹೋರಾಟ ಅಂತ್ಯ: ಇನ್ನು ಇಂದು ನಡೆದ ಮತ್ತೊಂದು ಸೆಣೆಸಾಟದಲ್ಲಿ ಅಲೈಜ್ ಕಾರ್ನೆಟ್ ಮೂರನೇ ಶ್ರೇಯಾಂಕದ ಮುಗುರುಜಾ ವಿರುದ್ಧ ಗೆಲುವು ಸಾಧಿಸಿದ್ದಾರೆ. ಈ ಪಂದ್ಯ ಒಂದು ಗಂಟೆ 27 ನಿಮಿಷಗಳಲ್ಲಿ ನಡೆದಿದ್ದು 6-3, 6-3 ಅಂತರದಲ್ಲಿ ಅಲೈಜ್ ಕಾರ್ನೆಟ್ ಜಯ ಸಾಧಿಸಿದ್ದಾರೆ.

Story first published: Friday, January 21, 2022, 9:42 [IST]
Other articles published on Jan 21, 2022
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+