ಆಸ್ಟ್ರೇಲಿಯನ್ ಓಪನ್: 2ನೇ ಸುತ್ತಿನಲ್ಲಿ ಆಘಾತಕಾರಿ ಸೋಲು; ಹಾಲಿ ಚಾಂಪಿಯನ್ ರಾಫೆಲ್ ನಡಾಲ್ ನಿರ್ಗಮನ

ಆಸ್ಟ್ರೇಲಿಯನ್ ಓಪನ್‌ನ ಮೂರನೇ ದಿನ ಎರಡನೇ ಸುತ್ತಿನ ಆಟದಲ್ಲಿ ಹಾಲಿ ಚಾಂಪಿಯನ್ ರಾಫೆಲ್ ನಡಾಲ್ ಆಘಾತಕಾರಿ ಸೋಲು ಅನುಭವಿಸಿದ್ದಾರೆ. ಈ ಮೂಲಕ ಎರಡನೇ ಸುತ್ತಿನಲ್ಲಿಯೇ ನಿರ್ಗಮಿಸಿ ಅಭಿಮಾನಿಗಳಿಗೆ ಆಘಾತ ನೀಡಿದ್ದಾರೆ ನಡಾಲ್. ಮೆಕೆಂಜಿ ಮೆಕ್ಡೊನಾಲ್ಡ್ ವಿರುದ್ಧದ ಪಂದ್ಯದಲ್ಲಿ ನೇರ ಸೆಟ್‌ಗಳ ಅಂತರದಲ್ಲಿ ಸೋಲು ಕಂಡಿದ್ದಾರೆ.
23ನೇ ಗ್ರ್ಯಾನ್ ಸ್ಲಾಮ್ ಸಿಂಗಲ್ಸ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಳ್ಳುವ ಗುರಿ ಹೊಂದಿದ್ದ ನಡಾಲ್ ರಾಡ್ ಲೇವರ್ ಅರೆನಾದಲ್ಲಿ ನಡೆದ ಪಂದ್ಯದಲ್ಲಿ ಹಿನ್ನಡೆ ಅನುಭವಿಸಿದ್ದಾರೆ. ಅಮೆರಿಕದ 63ನೇ ಶ್ರೇಯಾಂಕದ ಮೆಕೆಂಜಿ ಮೆಕ್‌ಡೊನಾಲ್ಡ್ ವಿರುದ್ಧ ನಡೆದ ಪಂದ್ಯದಲ್ಲಿ 4-6, 4-6, 5-7 ನೇರ ಸೆಟ್‌ಗಳಿಂದ ನಡಾಲ್ ಶರಣಾಗಿದ್ದಾರೆ. 2 ಗಂಟೆ 32 ನಿಮಿಷಗಳ ಕಾಲ ನಡೆದ ಪಂದ್ಯದಲ್ಲಿ ನಡಾಲ್ ಸಂಪೂರ್ಣವಾಗಿ ಹಿನ್ನಡೆ ಅನುಭವಿಸಿದ್ದಾರೆ.
ಈ ಸೋಲಿನೊಂದಿಗೆ ಸ್ಪೇನ್‌ನ ದಿಗ್ಗಜ ಆಟಗಾರ ನಡಾಲ್ ಅವರು ಸತತ ನಾಲ್ಕನೇ ಬಾರಿಗೆ ಅಮೆರಿಕಾದ ಆಟಗಾರರಿಗೆ ಶರಣಾದಂತಾಗಿದೆ. ಈ ಹಿಂದೆ ಯುಎಸ್ ಓಪನ್ 2022 ರ 16ನೇ ಸುತ್ತಿನ ಮುಖಾಮುಖಿಯಲ್ಲಿ ಫ್ರಾನ್ಸಿಸ್ ಟಿಯಾಫೊ ವಿರುದ್ಧ ಸೋಲು ಕಂಡಿದ್ದ ನಡಾಲ್ ಬಳಿಕ ಪ್ಯಾರಿಸ್ ಮಾಸ್ಟರ್ಸ್ 2022ರಲ್ಲಿ ಟಾಮಿ ಪಾಲ್‌ಗೆ ಶರಣಾಗಿದ್ದರು. ಟೇಲರ್ ಫ್ರಿಟ್ಜ್ ವಿರುದ್ಧ ಎಟಿಪಿ ವರ್ಲ್ಡ್ ಟೂರ್ ಫೈನಲ್ಸ್ ಗುಂಪು ಹಂತದಲ್ಲಿ ಸೋಲು ಕಂಡಿದ್ದರು.
ಇನ್ನು ಇಂದಿನ ಪಂದ್ಯದಲ್ಲಿ ರಾಫೆಲ್ ನಡಾಲ್‌ಗೆ ಗಾಯದ ಸಮಸ್ಯೆ ಬಹುವಾಗಿ ಕಾಡಿತ್ತು. ಪಂದ್ಯದ ಅವಧಿಯಲ್ಲಿಯೇ ವೈದ್ಯಕೀಯ ನೆರವನ್ನು ಕೂಡ ಪಡೆದುಕೊಂಡು ಆಟವನ್ನು ಮುಂದುವರಿದಸಿದ್ದರು. ಆದರೆ ಎದುರಾಳಿಯ ತೀಕ್ಷ್ಣ ಹೊಡೆತಗಳಿಗೆ ಸವಾಲೊಡ್ಡಲು ನಡಾಲ್ ವಿಫಲವಾಗಿದ್ದಾರೆ.
ಇದು ಗ್ರ್ಯಾಂಡ್ ಸ್ಲಾಮ್‌ನಲ್ಲಿ ನಡಾಲ್ ಮತ್ತು ಮೆಕೆಂಜಿ ನಡುವಿನ ಎರಡನೇ ಮುಖಾಮುಖಿಯಾಗಿದೆ. ಇದಕ್ಕೂ ಮುನ್ನ 2020ರ ಫ್ರೆಂಚ್ ಓಪನ್‌ನಲ್ಲಿ ಮೆಕೆಂಜಿ ಹಾಗೂ ನಡಾಲ್ ಮುಖಾಮುಖಿಯಾಗಿದ್ದಾಗ ನಡಾಲ್ 6-1, 6-0, 6-3 ಅಂತರದ ಜಯ ಸಾಧಿಸಿದ್ದರು. ಆ ಸೋಲಿಗೆ ಮೆಕೆಂಜಿ ಈಗ ಸೇಡು ತೀರಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ಇನ್ನು ಈ ಸೋಲಿನ ಬಳಿಕ ಮಾತನಾಡಿದ ನಡಾಲ್ ಗಾಯದ ಸಮಸ್ಯೆಯ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. "ಎರಡು ದಿನಗಳಿಂದ ಈ ಸಮಸ್ಯೆ ಕಾಡುತ್ತಿದೆ. ನನಗೆ ಸೊಂಟದ ನೋವಿನ ಇತಿಹಾಸ ಇದೆ. ಇದಕ್ಕಾಗಿ ನಾನು ಈ ಹಿಂದೆ ಚಿಕಿತ್ಸೆಗಳನ್ನು ಮಾಡಬೇಕಾಗಿತ್ತು. ಆದರೆ ಇದುಇಷ್ಟು ಪ್ರಮಾಣದ ಸಮಸ್ಯೆಯಾಗಿ ಕಾಡಿರಲಿಲ್ಲ" ಎಂದು ನಡಾಲ್ ತಿಳಿಸಿದ್ದಾರೆ.
"ಮುಂದುವರಿದು ಮಾತನಾಡಿರುವ ನಾಲ್ "ಇದೊಂದು ಕಠಿಣ ಕ್ಷಣ. ಬಹಳ ಕಠಿಣ ದಿನವಿದು. ನಾನು ಈ ಕ್ಷಣದಲ್ಲಿ ಮಾನಸಿಕವಾಗಿ ಜರ್ಝರಿತವಾಗಿಲ್ಲ ಎಂದು ಹೇಳಿದರೆ ನಾನು ಸುಳ್ಳು ಹೇಳಿದಂತಾಗುತ್ತದೆ" ಎಂದು ಪಂದ್ಯದ ಮುಕ್ತಾಯದ ಬಳಿಕ ಟೆನಿಸ್‌ನ ದಿಗ್ಗಜ ರಾಫೆಲ್ ನಡಾಲ್ ಪ್ರತಿಕ್ರಿಯೆ ನೀಡಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications