Australian Open 2024: ಸೆಮಿಸ್‌ನಲ್ಲಿ ಎಡವಿದ ನೊವಾಕ್ ಜೊಕೊವಿಕ್, ಫೈನಲ್ ತಲುಪಿದ ಜನ್ನಿಕ್ ಸಿನ್ನರ್
ಶುಕ್ರವಾರ, ಜನವರಿ 26ರಂದು ರಾಡ್ ಲೇವರ್ ಟೆನ್ನಿಸ್ ಕೋರ್ಟ್‌ನಲ್ಲಿ ನಡೆದ 2024ರ ಆಸ್ಟ್ರೇಲಿಯನ್ ಓಪನ್ ಪಂದ್ಯಾವಳಿಯ ಸೆಮಿಫೈನಲ್‌ನಲ್ಲಿ ಜನ್ನಿಕ್ ಸಿನ್ನರ್ ವಿರುದ್ಧ ಅನಿರೀಕ್ಷಿತ ಸೋಲು ಅನುಭವಿಸಿದ ನೊವಾಕ್ ಜೊಕೊವಿಕ್ ಟೂರ್ನಿಯಿಂದ ಹೊರಬಿದ್ದರು.
ಮೆಲ್ಬೋರ್ನ್ ಪಾರ್ಕ್‌ನಲ್ಲಿ ಸರ್ಬಿಯಾದ ನೊವಾಕ್ ಜೊಕೊವಿಕ್ ಅವರ ದಾಖಲೆಯ 33 ಪಂದ್ಯಗಳ ಗೆಲುವಿನ ಓಟ ಮತ್ತು 25ನೇ ಗ್ರ್ಯಾಂಡ್ ಸ್ಲಾಮ್ ಪ್ರಶಸ್ತಿಯ ಕನಸನ್ನು ಜನ್ನಿಕ್ ಸಿನ್ನರ್ ಕೊನೆಗೊಳಿಸಿದರು.

ನಾಲ್ಕನೇ ಶ್ರೇಯಾಂಕದ ಇಟಲಿಯ ಆಟಗಾರ ಟೆನ್ನಿಸ್ ಸ್ಟಾರ್ ವಿರುದ್ಧ ಪಂದ್ಯದ ಮೊದಲ ಸೆಟ್ ಅನ್ನು ಕೈಬಿಟ್ಟು 6-1, 6-2, 6-7 (6/8), 6-3 ಅಂತರದಲ್ಲಿ ಗೆದ್ದು ಮೊದಲ ಗ್ರ್ಯಾಂಡ್ ಸ್ಲಾಮ್ ಫೈನಲ್ ತಲುಪಿದರು.
ಭಾನುವಾರ ನಡೆಯುವ ಪ್ರಶಸ್ತಿ ಕಾಳಗದ ಪಂದ್ಯದಲ್ಲಿ ಜನ್ನಿಕ್ ಸಿನ್ನರ್ ಮೂರನೇ ಶ್ರೇಯಾಂಕದ ಡೇನಿಯಲ್ ಮೆಡ್ವೆಡೆವ್ ಅಥವಾ ಆರನೇ ಶ್ರೇಯಾಂಕದ ಅಲೆಕ್ಸಾಂಡರ್ ಜ್ವೆರೆವ್ ಅವರನ್ನು ಎದುರಿಸಲಿದ್ದಾರೆ.
"ಇದು ತುಂಬಾ ಕಠಿಣ ಪಂದ್ಯವಾಗಿತ್ತು, ಪಂದ್ಯವನ್ನು ನಾನು ಚೆನ್ನಾಗಿ ಆರಂಭಿಸಿದೆ. ಜೊಕೊವಿಕ್ ಮೊದಲ ಎರಡು ಸೆಟ್‌ಗಳಲ್ಲಿ ತಪ್ಪಿಸಿಕೊಂಡರು. ಅವರು ಕೋರ್ಟ್‌ನಲ್ಲಿ ಉತ್ತಮ ಭಾವನೆ ಹೊಂದಿಲ್ಲ ಎಂದು ನನಗೆ ಅನಿಸಿತು ಹಾಗಾಗಿ ನಾನು ಒತ್ತಡ ಹೇರಲು ಪ್ರಯತ್ನಿಸಿದೆ," ಎಂದು ಜನ್ನಿಕ್ ಸಿನ್ನರ್ ಹೇಳಿದರು.

2018ರಿಂದ ಆಸ್ಟ್ರೇಲಿಯನ್ ಓಪನ್‌ನಲ್ಲಿ ಸೋಲು ಅನುಭವಿಸದ ಹತ್ತು ಬಾರಿಯ ಚಾಂಪಿಯನ್ ನೊವಾಕ್ ಜೊಕೊವಿಕ್, ದಾಖಲೆಯ 25ನೇ ಗ್ರ್ಯಾಂಡ್ ಸ್ಲ್ಯಾಮ್ ಪ್ರಶಸ್ತಿಗಾಗಿ ಎದುರು ನೋಡುತ್ತಿದ್ದರು. ಆದರೆ, ಜನ್ನಿಕ್ ಸಿನ್ನರ್ ಅದ್ಭುತ ಶೈಲಿಯಲ್ಲಿ ಅವರನ್ನು ಸೋಲಿಸಿ ಹೊರಹಾಕಿದರು.
ಪಂದ್ಯದ ಆರಂಭದಲ್ಲಿ ನೊವಾಕ್ ಜೊಕೊವಿಕ್ ತನ್ನ 22 ವರ್ಷದ ಎದುರಾಳಿಗೆ ಯಾವುದೇ ಉತ್ತರವನ್ನು ಹೊಂದಿರಲಿಲ್ಲ. ತನ್ನದೇ ತಪ್ಪಿನಿಂದ ಪಂದ್ಯದಲ್ಲಿ ಪುನರಾಗಮನ ಮಾಡಲು ಸಾಧ್ಯವಾಗಲಿಲ್ಲ.
ಮೆಲ್ಬೋರ್ನ್ ಪಾರ್ಕ್‌ನ ಸೆಮಿಫೈನಲ್‌ನಲ್ಲಿ ಎಂದಿಗೂ ಸೋಲದ ಟೆನ್ನಿಸ್ ದಿಗ್ಗಜನನ್ನು ಎದುರಿಸಲು ಯೋಚಿಸದ ಸೂಪರ್-ಕೂಲ್ ಜನ್ನಿಕ್ ಸಿನ್ನರ್, 3-0 ಅಂತರದ ಮುನ್ನಡೆ ಸಾಧಿಸಿದ ಕಾರಣ, 36 ವರ್ಷದ ಸರ್ಬಿಯಾದ ಟೆನ್ನಿಸ್ ದೊರೆ ತಮ್ಮ ಎಂದಿನ ಮೆಟ್ರೋನಾಮಿಕ್ ಸ್ಥಿರತೆಯನ್ನು ಹೊಂದಿರಲಿಲ್ಲ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications