Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಆಸ್ಟ್ರೇಲಿಯನ್ ಓಪನ್: ಎರಡನೇ ಸುತ್ತಿಗೆ ಪ್ರವೇಶಿಸಿದ ನವೋಮಿ ಒಸಾಕ, ರಾಪೆಲ್ ನಡಾಲ್

Australian Open: day 1 result, Naomi Osaka and Rafael Nadal enter 2nd round

ಈ ಬಾರಿಯ ಆಸ್ಟ್ರೇಲಿಯನ್ ಓಪನ್ ಆರಂಭಕ್ಕೆ ಮುನ್ನವೇ ನೊವಾಕ್ ಜೊಕೊವಿಕ್ ವಿಸಾ ವಿವಾದ ಜಗತ್ತಿನಾದ್ಯಂತ ಸುದ್ದಿಯಾಯಿತು. ಕಡೆಗೂ ಆಸ್ಟ್ರೇಲಿಯನ್ ಓಪನ್‌ನ ಹಾಲಿ ಚಾಂಪಿಯನ್ ಟೂರ್ನಿಯಲ್ಲಿ ಭಾಗವಹಿಸದೆಯೇ ವಾಪಾಸಾಗಬೇಕಾಯಿತು. ಹೀಗಾಗಿ ಸರ್ಬಿಯಾದ ಆಟಗಾರ ಗ್ರ್ಯಾಂಡ್ ಸ್ಲಾಮ್ ಉಳಿಸಿಕೊಳ್ಳಲು ಸಾಧ್ಯವಾಗುವುಲ್ಲ. ಈ ಮಧ್ಯೆ ಇಂದಿನಿಂದ ಆಸ್ಟ್ರೇಲಿಯನ್ ಓಪನ್ ಆರಂಭವಾಗಿದ್ದು ಮಹಿಳೆಯರ ವಿಭಾಗದ ಹಾಲಿ ಚಾಂಪಿಯನ್ ನವೋಮಿ ಒಸಾಕ ಒಸಾರಿಯೋಗೆ ಸೋಲುಣಿಸಿ ಎರಡನೇ ಸುತ್ತಿಗೆ ಪ್ರವೇಶಿಸಿದ್ದಾರೆ.

ಆಸ್ಟ್ರೇಲಿಯನ್ ಓಪನ್‌ನ ಹಾಲಿ ಚಾಂಪಿಯನ್ ನವೋಮಿ ಒಸಾಕಾ ಆಸ್ಟ್ರೇಲಿಯನ್ ಓಪನ್‌ ಕೋರ್ಟ್‌ಗೆ ಮರಳಿದ್ದಾರೆ. 13ನೇ ಶ್ರೇಯಾಂಕದ ಒಸಾಕಾ ಆರಂಭಿಕ ಸುತ್ತಿನಲ್ಲಿ ವಿಶ್ವ ನಂ.50ನೇ ಶ್ರೇಯಾಂಕದ ಕ್ಯಾಮಿಲಾ ಒಸೊರಿಯೊ ಅವರನ್ನು ಸೋಲಿಸಿದರು. ಈ ಪಂದ್ಯವನ್ನು ಒಸಾಕ 6-3, 6-3 ಅಂತರದಲ್ಲಿ ಗೆದ್ದು ಎರಡನೇ ಸುತ್ತಿಗೆ ಪ್ರವೇಶಿಸಿದ್ದಾರೆ. ಈ ಪಂದ್ಯ ಒಂದು ಗಂಟೆ 8 ನಿಮಿಷಗಳಲ್ಲಿ ಫಲಿತಾಂಶ ಪಡೆದುಕೊಂಡಿತು.

ಪುರುಷರ ಸಿಂಗಲ್ಸ್‌ನಲ್ಲಿ 20 ಬಾರಿಯ ಗ್ರ್ಯಾಂಡ್‌ಸ್ಲಾಮ್ ಚಾಂಪಿಯನ್ ರಾಫೆಲ್ ನಡಾಲ್ ತನ್ನ ಎದುರಾಳಿ ಆಟಗಾರ ಮಾರ್ಕಸ್ ಗಿರಾನ್ ಅವರನ್ನು ಮೂರು ಸೆಟ್‌ಗಳಲ್ಲಿ ಮಣಿಸಿದ್ದಾರೆ. ಇನ್ನು ವಿಶ್ವ ನಂ.1 ಮಹಿಳಾ ಸಿಂಗಲ್ಸ್ ಆಟಗಾರ್ತಿ ಆಶ್ ಬಾರ್ಟಿ ಕೂಡ ಲೆಸಿಯಾ ಟ್ಸುರೆಂಕೊ ಅವರನ್ನು 6-1 ಅಂತರದಿಂದ ಸೋಲಿಸಿದರು.

ಇನ್ನು 20 ಬಾರಿಯ ಗ್ರ್ಯಾಂಡ್ ಸ್ಲಾಮ್ ಚಾಂಪಿಯನ್ ರಾಫೆಲ್ ನಡಾಲ್ ಆರಂಭಿಕ ಸುತ್ತಿನಲ್ಲಿ ಮಾರ್ಕಸ್ ಗಿರಾನ್ ಅವರನ್ನು ಸೋಲಿಸಿದರು. ಒಂದು ಗಂಟೆ 49 ನಿಮಿಷಗಳ ಕಾಲ ನಡೆದ ಈ ಸ್ಪರ್ಧೆಯಲ್ಲಿ ಸ್ಪರ್ಧೆಯಲ್ಲಿ ನೆಆಲ್ ತಮ್ಮ ಎದುರಾಳಿಯನ್ನು 6-1, 6-2, 6-4 ನೇರ ಸೆಟ್‌ಗಳಿಂದ ಸೋಲಿಸಿದ್ದಾರೆ. 6 ತಿಂಗಳಿಗೂ ಹೆಚ್ಚು ಸಮಯದ ನಂತರ ಕೋರ್ಟ್‌ಗೆ ಮರಳಿದ ರಾಫೆಲ್ ನಡಾಲ್ ಅದ್ಭುತ ಬ್ಯಾಕ್‌ಹ್ಯಾಂಡ್ ಪ್ರದರ್ಶನದೊಂದಿಗೆ ಸಂಪೂರ್ಣ ನಿಯಂತ್ರಣವನ್ನು ಸಾದಿಸುವಲ್ಲಿ ಯಶಸ್ವಿಯಾದರು. ಎಲ್ಲಾ ಪ್ರಮುಖ ಆಟಗಾರರ ಪಂದ್ಯಗಳು ರಾಡ್ ಲೇವರ್ ಅರೆನಾದಲ್ಲಿ ನಡೆಯುತ್ತದೆ.

ಮಹಿಳೆಯರ ಸಿಂಗಲ್ಸ್ ವಿಭಾಗದಲ್ಲಿ ಒನ್ಸ್ ಜಬೇರ್ ಬೆನ್ನುನೋವಿನ ಕಾರಣದಿಂದ ಸ್ಪರ್ಧೆಯಿಂದ ಹೊಂದಕ್ಕೆ ಸರಿದಿದ್ದಾರೆ. ಹೀಗಾಗಿ ಆಕೆಯ ಸ್ಥಾನಕ್ಕಾಗಿ ಸೋಲು ಕಂಡಿದ್ದ ಐರಿನಾ ಬಾರಾ ಮುಮದಿನ ಸುತ್ತಿನಲ್ಲಿ ಆಡಲಿದ್ದಾರೆ. ಮತ್ತೋರ್ವ ಆಟಗಾರತಿ ಸೈಸೈ ಝೆಂಗ್ ಮಣಿಕಟ್ಟಿನ ಗಾಯದಿಂದ ಮಹಿಳೆಯರ ಸಿಂಗಲ್ಸ್‌ನಿಂದ ಹಿಂದೆ ಸರಿದಿದ್ದಾರೆ. ಆಕೆಯ ಸ್ಥಾನದಲ್ಲಿ ಲಕ್ಕಿ ಲೂಸರ್ ನವೊ ಹಿಬಿನೊ ಆಡಲಿದ್ದಾರೆ.

Story first published: Monday, January 17, 2022, 16:28 [IST]
Other articles published on Jan 17, 2022
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+