Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಆಸ್ಟ್ರೇಲಿಯನ್ ಓಪನ್ 6ನೇ ದಿನ: 4ನೇ ಸುತ್ತಿಗೆ ಮುನ್ನಡೆದ ಜೊಕೊವಿಕ್, ಸಬಲೆಂಕಾ; ಆಂಡಿ ಮರ್ರೆ ಔಟ್!

Australian Open day 6 Highlights: Djokovic, Sabalenka advance to 4th round, Andy Murray knocked out

ಆಸ್ಟ್ರೇಲಿಯನ್ ಓಪನ್‌ನ 6ನೇ ದಿನದಾಟದ ಮುಕ್ತಾಯವಾಗಿದೆ. 6ನೇ ದಿನ ಸ್ಟಾರ್ ಟೆನಿಸ್ ಆಟಗಾರ ನೊವಾಕ್ ಜೊಕೊವಿಕ್, ಅರೀನಾ ಸಬಲೆಂಕಾ, ಹೊಲ್ಗರ್ ರೂನ್ ಮತ್ತು ಆಂಡ್ರೆ ರುಬ್ಲೆವ್ ಅವರು ಆಸ್ಟ್ರೇಲಿಯನ್ ಓಪನ್ 2023ರಲ್ಲಿ ಅಂತಿಮ 16ರ ಘಟ್ಟಕ್ಕೆ ಪ್ರವೇಶಿಸುವಲ್ಲಿ ಯಶಸ್ವಿಯಾಗಿದ್ದಾರೆ.

ರಾಡ್ ಲೇವರ್ ಅರೆನಾದಲ್ಲಿ ನಡೆದ 3ನೇ ಸುತ್ತಿನ ಪಂದ್ಯದಲ್ಲಿ ನೊವಾಕ್ ಜೊಕೊವಿಕ್ 7-6 (9-7), 6-3, 6-4 ಸೆಟ್‌ಗಳಿಂದ ಬಲ್ಗೇರಿಯಾದ ಗ್ರಿಗೊರ್ ಡಿಮಿಟ್ರೋವ್ ಅವರನ್ನು ಮಣಿಸಿದ್ದಾರೆ. ಇದು ಮೆಲ್ಬೋರ್ನ್ ಪಾರ್ಕ್‌ನಲ್ಲಿ ಅವರ 24 ನೇ ನೇರ ಗೆಲುವಾಗಿದೆ. ಈಗ ಆಸ್ಟ್ರೇಲಿಯನ್ ಓಪನ್‌ನಲ್ಲಿ ಸತತ 25 ಗೆಲುವುಗಳನ್ನು ಸಾಧಿಸಿರುವ ಆಂಡ್ರೆ ಅಗಾಸ್ಸಿಯ ದಾಖಲೆಯ ಮೇಲೆ ಜೊಕೊವಿಕ್ ಕಣ್ಣಿಟ್ಟಿದ್ದು ಇನ್ನು ಒಂದತ ಗೆಲವು ಸಾಧಿಸಿದರೆ ಈ ಸಾಧನೆಯನ್ನು ಸರಿಗಟ್ಟಲಿದ್ದಾರೆ.

35ರ ಹರೆಯದ ಜೊಕೊವಿಕ್ ಈ ವರ್ಷದ ಆರಂಭದಲ್ಲಿ ಯುನೈಟೆಡ್ ಓಪನ್‌ನಲ್ಲಿ ರಾಫೆಲ್ ನಡಾಲ್ ಅವರನ್ನು ಸೋಲಿಸಿದ ಆಸ್ಟ್ರೇಲಿಯಾದ ಅಲೆಕ್ಸ್ ಡಿ ಮಿನೌರ್ ವಿರುದ್ಧ ಸೆಣಸಲಿದ್ದಾರೆ. ರಾಡ್ ಲೇವರ್ ಅರೆನಾದಲ್ಲಿ ಡಿ ಮಿನೌರ್ ಬೆಂಜಮಿನ್ ಬೊಂಜಿ ಅವರನ್ನು 7-6 (7-0), 6-2, 6-1 ಸೆಟ್‌ಗಳಿಂದ ಸೋಲಿಸಿ ನಾಲ್ಕನೇ ಸುತ್ತಿಗೆ ಪ್ರವೇಶ ಪಡೆದಿದ್ದಾರೆ.

ಇನ್ನು ಮತ್ತೊಂದೆಡೆ ಟೆನಿಸ್‌ನ ಸ್ಟಾರ್ ಆಟಗಾರ ಆಂಡಿ ಮರ್ರೆ ಸೋಲು ಅನುಭವಿಸುವ ಮೂಲಕ ತಮ್ಮ ನಿರಾಸೆ ಕಂಡಿದ್ದಾರೆ. ಮಾರ್ಗರೇಟ್ ಕೋರ್ಟ್ ಅರೆನಾದಲ್ಲಿ ನಡೆದ ಐದು-ಸೆಟರ್‌ಗಳ ಪೈಪೋಟಿಯ ಸೆಣೆಸಾಟದಲ್ಲಿ ಸ್ಪೇನ್‌ನ ರಾಬರ್ಟೊ ಬಟಿಸ್ಟಾ ಅಗುಟ್ ವಿರುದ್ಧ ಸೋಲಿನ ರುಚಿ ಅನುಭವಿಸಿದ್ದಾರೆ. ಈ ಪಂದ್ಯವನ್ನು ಮರ್ರೆ 1-6, 7-9 (9-7), 3-6, 4-6ರ ಅಂತರದಲ್ಲಿ ಕಳೆದುಕೊಂಡಿದ್ದಾರೆ.

ಮಹಿಳೆಯರ ಸಿಂಗಲ್ಸ್‌ನಲ್ಲಿ ವಿಶ್ವದ ನಂ.4 ಆಟಗಾರ್ತಿ ಕ್ಯಾರೋಲಿನ್ ಗಾರ್ಸಿಯಾ ಅವರು ಜರ್ಮನಿಯ ಲಾರಾ ಸೀಗೆಮಂಡ್ ಅವರನ್ನು ಸೋಲಿಸಿದ್ದಾರೆ. 28 ವರ್ಷದ ಗಾರ್ಸಿಯಾ ಮೊದಲ ಸೆಟ್ ಅನ್ನು ಕಳೆದುಕೊಂಡರಾದರೂ ಬಳಿಕ ಅದ್ಭುತ ರೀತಿಯಲ್ಲಿ ತಿರುಗಿಬಿದ್ದಿದ್ದು ಪಂದ್ಯವನ್ನು ಗೆದ್ದುಕೊಂಡಿದ್ದಾರೆ. ಕಿಯಾ ಅರೆನಾದಲ್ಲಿ ನಡೆದ ಪಂದ್ಯಲ್ಲಿ ಗಾರ್ಸಿಯಾ 1-6, 6-3, 6-3 ಅಂತರದಿಂದ ಗೆಲುವು ಕಂಡಿದ್ದಾರೆ.

ವಿಶ್ವ ನಂ.5 ಆಟಗಾರ್ತಿ ಅರೀನಾ ಸಬಲೆಂಕಾ ಮಾರ್ಗರೆಟ್ ಕೋರ್ಟ್ ಅರೆನಾದಲ್ಲಿ 26 ನೇ ಶ್ರೇಯಾಂಕದ ಎಲಿಸ್ ಮೆರ್ಟೆನ್ಸ್ ಅವರನ್ನು 6-2, 6-3 ಅಂತರದಿಂದ ಸೋಲಿಸಿದ್ದಾರೆ. ಮತ್ತೊಂದೆಡೆ 17 ವರ್ಷದ ಲಿಂಡಾ ಫ್ರುಹ್ವಿರ್ಟೋವಾ ಕೂಡ ಮೂರನೇ ಸುತ್ತಿನಲ್ಲಿ ಮಾರ್ಕೆಟಾ ವೊಂಡ್ರೊಸೊವಾ ಅವರನ್ನು 7-5, 2-6, 6-3 ಸೆಟ್‌ಗಳಿಂದ ಸೋಲಿಸಿ ಅಂತಿಮ 16ರ ಸುತ್ತಿಗೆ ಪ್ರವೇಶಿಸಿದ್ದಾರೆ.

Story first published: Saturday, January 21, 2023, 23:01 [IST]
Other articles published on Jan 21, 2023
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+