Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಆಸ್ಟ್ರೇಲಿಯನ್ ಓಪನ್: ಸಾನಿಯಾ-ಬೋಪಣ್ಣ, ಜೊಕೊವಿಕ್, ರುಬ್ಲೆವ್ ಕ್ವಾ. ಫೈನಲ್‌ಗೆ ಲಗ್ಗೆ

Australian Open day 8 Highlights: Djokovic, Rublev, Mirza-Bopanna advance to quarters

ಆಸ್ಟ್ರೇಲಿಯನ್ ಓಪನ್ 2023ರಲ್ಲಿ ಪುರುಷರ ಮತ್ತು ಮಹಿಳೆಯರ ಸಿಂಗಲ್ಸ್ ವಿಭಾಗದ ಕ್ವಾರ್ಟರ್-ಫೈನಲ್‌ಗೆ ವೇದಿಕೆ ಸಿದ್ಧವಾಗಿದೆ. 8ನೇ ದಿನದಾಟದಲ್ಲಿ ಸ್ಟಾರ್ ಆಟಗಾರರಾದ ನೊವಾಕ್ ಜೊಕೊವಿಕ್, ಆಂಡ್ರೆ ರುಬ್ಲೆವ್ ಮತ್ತು ಅರೀನಾ ಸಬಲೆಂಕಾ ಅಂತಮ ಎಂಟರ ಹಂತಕ್ಕೆ ಪ್ರವೇಶ ಪಡೆದುಕೊಂಡಿದ್ದಾರೆ. ಇನ್ನು ಮಿಕ್ಸೆಡ್ ಡಬಲ್ಸ್ ವಿಭಾಗದಲ್ಲಿ ಭಾರತೀಯ ಟೆನಿಸ್ ಅಭಿಮಾನಿಗಳಿಗೂ ಸಂತಸದ ಸುದ್ದಿಯಿದ್ದು ಸಾನಿಯಾ ಮಿರ್ಜಾ- ರೋಹನ್ ಬೋಪಣ್ಣ ಜೋಡಿ ಪ್ರಿ ಕ್ವಾರ್ಟರ್ ಫೈನಲ್ ಸೆಣೆಸಾಟದಲ್ಲಿ ಭರ್ಜರಿಯಾಗಿ ಗೆದ್ದು ಕ್ವಾರ್ಟರ್‌ಫೈನಲ್‌ಗೆ ಪ್ರವೇಶ ಪಡೆದಿದ್ದಾರೆ.

ಸೋಮವಾರ ರಾಡ್ ಲೇವರ್ ಅರೆನಾದಲ್ಲಿ 21 ಬಾರಿಯ ಗ್ರ್ಯಾಂಡ್ ಸ್ಲಾಮ್ ಸಿಂಗಲ್ಸ್ ಚಾಂಪಿಯನ್ ಜೊಕೊವಿಕ್ ಸುಲಭ ಗೆಲುವು ಸಾಧಿಸಿದ್ದಾರೆ. 22ನೇ ಶ್ರೇಯಾಂಕದ ಅಲೆಕ್ಸ್ ಡಿ ಮಿನೌರ್ ವಿರುದ್ಧ ನಡೆದ ಪಂದ್ಯದಲ್ಲಿ ಜೊಕೊವಿಕ್ 6-2, 6-1 ನೇರ ಸೆಟ್‌ಗಳಿಂದ ಸೋಲಿಸಿ ಕ್ವಾರ್ಟರ್ ಫೈನಲ್‌ಗೆ ಪ್ರವೇಶ ಪಡೆದಿದ್ದಾರೆ. ಸರ್ಬಿಯಾದ ದಿಗ್ಗಜ ಆಟಗಾರ ಕ್ವಾರ್ಟರ್ ಫೈನಲ್‌ಗೆ ಪ್ರವೇಶಿಸುವ ಮೂಲಕ ಪುರುಷರ ಸಿಂಗಲ್ಸ್ ಕ್ವಾರ್ಟರ್-ಫೈನಲಿಸ್ಟ್‌ಗಳು ದೃಢಪಟ್ಟಿದ್ದಾರೆ. ಜೊಕೊವಿಕ್ ಅಂತಿಮ 8ರ ಘಟ್ಟದ ಪಂದ್ಯದಲ್ಲಿ ನಂ.5ನೇ ಶ್ರೇಯಾಂಕದ ಆಂಡ್ರೆ ರುಬ್ಲೆವ್ ಅವರನ್ನು ಎದುರಿಸಲಿದ್ದಾರೆ.

ಮತ್ತೊಂದೆಡೆ ರುಬ್ಲೆವ್ ಪ್ರಯಾಸದ ಗೆಲುವು ಸಾಧಿಸಿ ಕ್ವಾರ್ಟರ್-ಫೈನಲ್ ಸ್ಥಾನವನ್ನು ಭದ್ರಪಡಿಸಿಕೊಂಡರು. ನಂ.9 ಶ್ರೇಯಾಂಕದ ಹೊಲ್ಗರ್ ರೂನ್ ವಿರುದ್ಧದ ಪಂದ್ಯದಲಿ ರುಬ್ಲೆವ್ ಮ್ಯಾರಥಾನ್ ಸುದೀರ್ಘ ಐದು-ಸೆಟ್‌ಗಳ ಕಾದಾಟ ನಡೆಸಿ ಫಲಿತಾಂಶ ತಮ್ಮ ಪರವಾಗುವಂತೆ ಮಾಡಿದರು 6-3, 3-6, 6-3, 4-6, 7-6(11-9) ಅಂತರದಿಂದ ರುಬ್ಲೆವ್ ಗೆಲುವು ಸಾಧಿಸಿದ್ದಾರೆ.

ಇನ್ನು ಮಹಿಳೆಯರ ಸಿಂಗಲ್ಸ್‌ನಲ್ಲಿ ನಂ.5 ಶ್ರೇಯಾಂಕದ ಅರೀನಾ ಸಬಲೆಂಕಾ ಅವರು ಟೋಕಿಯೊ 2020ರ ಚಿನ್ನದ ಪದಕ ವಿಜೇತೆ ಬೆಲಿಂಡಾ ಬೆನ್ಸಿಕ್ ಅವರನ್ನು 7-5, 6-2 ಸೆಟ್‌ಗಳಿಂದ ಸೋಲಿಸಿ ಮೊದಲ ಬಾರಿಗೆ ಆಸ್ಟ್ರೇಲಿಯನ್ ಓಪನ್‌ನ ಕ್ವಾರ್ಟರ್‌ಫೈನಲ್ ಪ್ರವೇಶ ಪಡೆದುಕೊಂಡಿದ್ದಾರೆ.

ಮಿಕ್ಸೆಡ್ ಡಬಲ್ಸ್ ವಿಭಾಗದಲ್ಲಿ ಭಾರತದ ಜೋಡಿಯಾದ ರೋಹನ್ ಬೋಪಣ್ಣ ಹಾಗೂ ಸಾನಿಯಾ ಮಿರ್ಜಾ ಜೋಡಿ ಮತ್ತೊಂದು ಭರ್ಜರಿ ಗೆಲುವು ಸಾಧಿಸಿದ್ದಾರೆ. ಈ ಮೂಲಕ ಈ ಬಾರಿಯ ಟೂರ್ನಿಯ ಕ್ವಾರ್ಟರ್ ಫೈಲ್‌ಗೆ ಪ್ರವೇಶ ಪಡೆಯುವಲ್ಲಿ ಈ ಜೋಡಿ ಯಶಸ್ವಿಯಾಗಿದೆ.

ಕೋರ್ಟ್7 ನಲ್ಲಿ ನಡೆದ ಪಂದ್ಯದಲ್ಲಿ ಭಾರತದ ಸಾನಿಯಾ ಮಿರ್ಜಾ- ರೋಹನ್ ಬೋಪಣ್ಣ ಜೋಡಿಗೆ ಎದುರಾಳಿಯಾಗಿದ್ದಿದ್ದು ಉರುಗ್ವೆ ಹಾಗೂ ಜಪಾನ್‌ನ ಜೋಡಿಯಾದ ಎರೈಲ್ ಬೆಹರ್ ಹಾಗೂ ಮಾಕಾಟೋ ನಿನೊಮಿಯಾ. ಈ ಪಂದ್ಯದಲ್ಲಿ 6-4, 7-6(11-9) ನೇರ ಸೆಟ್‌ಗಳ ಅಂತರದಿಂದ ಭಾರತೀಯ ಜೋಡಿ ಗೆಲುವು ಸಾಧಿಸಿದೆ ಮುನ್ನುಗ್ಗಿದೆ.

Story first published: Monday, January 23, 2023, 23:49 [IST]
Other articles published on Jan 23, 2023
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+