ಆಸ್ಟ್ರೇಲಿಯನ್ ಓಪನ್ : ಹಾಲಿ ಚಾಂಪಿಯನ್ ರೋಜರ್ ಫೆಡರರ್ ಗೆ ಆಘಾತ

ಮೆಲ್ಬರ್ನ್, ಜನವರಿ 20 : ಮರಿಯಾ ಶರಪೋವಾ ಅವರು ಈ ಬಾರಿಯ ಆಸ್ಟ್ರೇಲಿಯನ್ ಓಪನ್ ನಿಂದ ಹೊರ ಬಿದ್ದ ಬಳಿಕ ಟೆನಿಸ್ ಪ್ರೇಮಿಗಳಿಗೆ ಮತ್ತೊಂದು ಆಘಾತ ಎದುರಾಗಿದೆ. ಹಾಲಿ ಚಾಂಪಿಯನ್, ಟೆನಿಸ್ ದಿಗ್ಗಜ ಸ್ವಿಟ್ಜರ್ಲೆಂಡಿನ ರೋಜರ್ ಫೆಡರರ್ ಅವರು ಯುವ ಆಟಗಾರನ ಎದುರು ಸೋಲು ಅನುಭವಿಸಿ ಟೂರ್ನಮೆಂಟ್ ನಿಂದ ಔಟ್ ಆಗಿದ್ದಾರೆ.
20 ವರ್ಷ ವಯಸ್ಸಿನ ಸ್ಟೆಫನೊಸ್ ತ್ಸಿತ್ಸಿಪಾಸ್ ಅವರು ಸತತ ಹೋರಾಟದ ಮೂಲಕ 6-7, 7-6, 7-5, 7-6 ರಲ್ಲಿ ಫೆಡರರ್ ರನ್ನು ಸೋಲಿಸಿದರು.
ವಿಶ್ವದ ನಂ. 15 ಆಟಗಾರ ಸ್ಟೆಫನೋಸ್ ಅವರು ಬ್ರೇಕ್ ಪಾಯಿಂಟ್ ಗಳನ್ನು ಉಳಿಸಿಕೊಂಡು 6 ಬಾರಿ ಚಾಂಪಿಯನ್ ಫೆಡರರ್ ಅವರನ್ನು ನಾಲ್ಕು ಸತತ ಸೆಟ್ ಗಳಲ್ಲಿ ಸೋಲಿಸಿದರು. ಗ್ರೀಕ್ ಆಟಗಾರ ಈಗ ಸೆಮಿಫೈನಲ್ ಸೇರಲು ರೊಬಾರ್ಟೊ ಬ್ಯಾಟಿಸ್ಟುಟಾ ಅವರನ್ನು ಎದುರಿಸಲಿದ್ದಾರೆ. ಗ್ರ್ಯಾನ್ ಸ್ಲಾಮ್ ಕ್ವಾರ್ಟರ್ ಫೈನಲ್ ತಲುಪಿ ದಾಖಲೆ ಬರೆದಿದ್ದ ಸ್ಟೆಫನೋಸ್ ಅವರು ಫೆಡೆಕ್ಸ್ ವಿರುದ್ಧ ಗೆಲುವಿಗೆ ಆತ್ಮವಿಶ್ವಾಸವೆ ಕಾರಣ ಎಂದಿದ್ದಾರೆ. ನನ್ನಲ್ಲಿ ನನಗೆ ವಿಶ್ವಾಸವಿತ್ತು. ನನ್ನ ಬಾಲ್ಯದ ಹೀರೋ ವಿರುದ್ಧ ಗೆಲುವು ಸಾಧಿಸಿದ್ದು ಇನ್ನು ನನಗೆ ನಂಬಲಾಗುತ್ತಿಲ್ಲ ಎಂದಿದ್ದಾರೆ.
ಮರಿಯಾ ಕೂಡಾ ಔಟ್ : 2008ರ ಚಾಂಪಿಯನ್ ಮರಿಯಾ ಶರಪೋವಾ ಅವರು ಸ್ಥಳೀಯ ಆಟಗಾರ್ತಿ ಆಶ್ ಬಾರ್ಟಿ ಅವರ ವಿರುದ್ಧ ಭಾನುವಾರ(ಜನವರಿ 20) ದಂದು ಸೋಲು ಕಂಡಿದ್ದಾರೆ.
ಶುಕ್ರವಾರದಂದು ಕರೊಲಿನೆ ವೊಜ್ನಿಯಾಸ್ಕಿ ಪ್ರಶಸ್ತಿ ಉಳಿಸಿಕೊಳ್ಳುವ ಕನಸನ್ನು ಶರಪೋವಾ ಭಗ್ನಗೊಳಿಸಿದ್ದರು. ಆದರೆ, ಐದು ಬಾರಿ ಗ್ರ್ಯಾನ್ ಸ್ಲಾಮ್ ವಿಜೇತೆ, ಮಾಜಿ ವಿಶ್ವದ ನಂ.1 ಮರಿಯಾ ಅವರು 4-6, 6-1, 6-4ರಲ್ಲಿ 15ನೇ ಸೀಡ್ ನ ಬಾರ್ಟಿ ವಿರುದ್ಧ ರಾಡ್ ಲವೇರ್ ಅರೇನಾದಲ್ಲಿ ಸೋಲು ಕಂಡಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications