ಆಸ್ಟ್ರೇಲಿಯನ್ ಓಪನ್: ಕ್ವಾ. ಫೈನಲ್‌ಗೆ ಪ್ರವೇಶಿಸಿದ ರೋಹನ್ ಬೋಪಣ್ಣ- ಸಾನಿಯಾ ಮಿರ್ಜಾ ಜೋಡಿ

ಆಸ್ಟ್ರೇಲಿಯನ್ ಓಪನ್‌ನ ಮಿಕ್ಸೆಡ್ ಡಬಲ್ಸ್ ವಿಭಾಗದಲ್ಲಿ ಭಾರತದ ಜೋಡಿಯಾದ ರೋಹನ್ ಬೋಪಣ್ಣ ಹಾಗೂ ಸಾನಿಯಾ ಮಿರ್ಜಾ ಜೋಡಿ ಮತ್ತೊಂದು ಭರ್ಜರಿ ಗೆಲುವು ಸಾಧಿಸಿದ್ದಾರೆ. ಈ ಮೂಲಕ ಈ ಬಾರಿಯ ಟೂರ್ನಿಯ ಕ್ವಾರ್ಟರ್ ಫೈಲ್‌ಗೆ ಪ್ರವೇಶ ಪಡೆಯುವಲ್ಲಿ ಈ ಜೋಡಿ ಯಶಸ್ವಿಯಾಗಿದೆ.
ಕೋರ್ಟ್7 ನಲ್ಲಿ ನಡೆದ ಪಂದ್ಯದಲ್ಲಿ ಭಾರತದ ಸಾನಿಯಾ ಮಿರ್ಜಾ- ರೋಹನ್ ಬೋಪಣ್ಣ ಜೋಡಿಗೆ ಎದುರಾಳಿಯಾಗಿದ್ದಿದ್ದು ಉರುಗ್ವೆ ಹಾಗೂ ಜಪಾನ್‌ನ ಜೋಡಿಯಾದ ಎರೈಲ್ ಬೆಹರ್ ಹಾಗೂ ಮಾಕಾಟೋ ನಿನೊಮಿಯಾ. ಈ ಪಂದ್ಯದಲ್ಲಿ 6-4, 7-6(11-9) ನೇರ ಸೆಟ್‌ಗಳ ಅಂತರದಿಂದ ಭಾರತೀಯ ಜೋಡಿ ಗೆಲುವು ಸಾಧಿಸಿದೆ ಮುನ್ನುಗ್ಗಿದೆ.
ಮಿರ್ಜಾ ಮತ್ತು ಬೋಪಣ್ಣ ಮೊದಲ ಸೆಟ್‌ನಲ್ಲಿ ಯಶಸ್ಸು ಸಾಧಿಸುವ ಮೂಲಕ ಪಂದ್ಯವನ್ನು ತಮ್ಮ ನಿಯಂತ್ರಣಕ್ಕೆ ತೆಗೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದರು. ಹಾಗಿದ್ದರೂ ಎದುರಾಳಿ ಜೋಡಿ ಮೊದಲ ಸೆಟ್‌ನಲ್ಲಿ ಸಣ್ಣ ಪ್ರಮಾಣದ ಪ್ರತಿರೋಧ ಒಡ್ಡಿತು. ಆದರೆ ಅದು ಹೆಚ್ಚು ಕಾಲ ನಡೆಯಲಿಲ್ಲ. ಅದಾದ ಬಳಿಕ ಸಾನಿಯಾ ಮಿರ್ಜಾ- ರೋಹನ್ ಬೋಪಣ್ಣ ಜೋಡಿ ಹಿಂದಿರುಗಿ ನೋಡಲೇ ಇಲ್ಲ.
ಮಿರ್ಜಾ ಮತ್ತು ಬೋಪಣ್ಣ ಇನ್ನು ಕ್ವಾರ್ಟರ್‌ಫೈನಲ್‌ನಲ್ಲಿ ತಮ್ಮ ಅದೃಷ್ಟ ಪರೀಕ್ಷೆಗೆ ಇಳಿಯಲಿದ್ದಾರೆ. ಈ ಸೆನೆಸಾಟದಲ್ಲಿ ಭಾರತೀಯ ಜೋಡಿಗೆ ಲಟ್ವಿಯನ್ ಮತ್ತು ಸ್ಪ್ಯಾನಿಷ್ ಜೋಡಿಯಾದ ಜೆಲೆನಾ ಒಸ್ಟಾಪೆಂಕೊ ಮತ್ತು ಡೇವಿಡ್ ವೇಗಾ ಹೆರ್ನಾಂಡೆಜ್ ಮುಖಾಮುಖಿಯಾಗಲಿದ್ದಾರೆ.
4 ಪಂದ್ಯಗಳ ನಿಷೇಧ ಶಿಕ್ಷೆಯಿಂದ ತಪ್ಪಿಸಿಕೊಂಡ ಇಶಾನ್ ಕಿಶನ್: ಖಡಕ್ ವಾರ್ನಿಂಗ್ ಕೊಟ್ಟ ರೆಫರಿಆಸ್ಟ್ರೇಲಿಯನ್ ಓಪನ್: ಕ್ವಾ. ಫೈನಲ್‌ಗೆ ಪ್ರವೇಶಿಸಿದ ರೋಹನ್ ಬೋಪಣ್ಣ- ಸಾನಿಯಾ ಮಿರ್ಜಾ ಜೋಡಿ
ಕಳೆದ ವರ್ಷ ಸಾನಿಯಾ ಯುಎಸ್ ಓಪನ್‌ನ ಸೆಮಿಫೈನಲ್ ಹಂತಕ್ಕೆ ಪ್ರವೇಶ ಪಡೆಯುವಲ್ಲಿ ಯಶಸ್ವಿಯಾಗಿದ್ದರು. ಕ್ರೊಯೇಷಿಯಾದ ಮೇಟ್ ಪಾವಿಕ್ ಅವರೊಂದಿಗೆ ಜೋಡಿಯಾಗಿ ಅವರು ಕಣಕ್ಕಿಳಿದಿದ್ದರು. ಇನ್ನು ಪ್ರಸ್ತುತ ನಡೆಯುತ್ತಿರುವ ಆಸ್ಟ್ರೇಲಿಯನ್ ಓಪನ್‌ನ ಮಹಿಳೆಯರ ಡಬಲ್ಸ್‌ನಲ್ಲಿ ಎರಡನೇ ಸುತ್ತಿಗೆ ಸಾನಿಯಾ ಹೋರಾಟವನ್ನು ಅಂತ್ಯಗೊಳಿಸಿದ್ದಾರೆ. ಇನ್ನು ಈ ಟೂರ್ನಿ ಸಾನಿಯಾ ಮಿರ್ಜಾ ಅವರ ವೃತ್ತಿ ಜೀವನದ ಕೊನೆಯ ಗ್ರ್ಯಾನ್‌ಸ್ಲ್ಯಾಮ್ ಆಗಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications