4 ಪಂದ್ಯಗಳ ನಿಷೇಧ ಶಿಕ್ಷೆಯಿಂದ ತಪ್ಪಿಸಿಕೊಂಡ ಇಶಾನ್ ಕಿಶನ್: ಖಡಕ್ ವಾರ್ನಿಂಗ್ ಕೊಟ್ಟ ರೆಫರಿ

ಭಾರತದ ವಿಕೆಟ್ ಕೀಪರ್ ಬ್ಯಾಟರ್ ಇಶಾನ್ ಕಿಶನ್ ಮೇಲೆ ಗಂಭೀರ ಆರೋಪ ಕೇಳಿಬಂದಿದ್ದು, ಅದೃಷ್ಟವಶಾತ್ 4 ಏಕದಿನ ಪಂದ್ಯಗಳ ನಿಷೇಧ ಶಿಕ್ಷೆಯಿಂದ ತಪ್ಪಿಸಿಕೊಂಡಿದ್ದಾರೆ. ಯಾವುದೇ ಶಿಸ್ತು ಕ್ರಮ ತೆಗೆದುಕೊಳ್ಳದಿದ್ದರೂ, ಐಸಿಸಿ ಮ್ಯಾಚ್ ರೆಫರಿ ಜಾವಗಲ್ ಶ್ರೀನಾಥ್ ಇಶಾನ್‌ ಕಿಶನ್‌ಗೆ ಎಚ್ಚರಿಕೆ ನೀಡಿದ್ದಾರೆ.

ಅಂಪೈರ್‌ಗಳನ್ನು ಉದ್ದೇಶಪೂರ್ವಕವಾಗಿ ವಂಚಿಸುವ ಯತ್ನ ಮಾಡಿದ್ದಾರೆ ಎನ್ನುವ ಆರೋಪ ಇಶಾನ್ ಕಿಶನ್ ಮೇಲಿದೆ. ಭಾರತ ನ್ಯೂಜಿಲೆಂಡ್ ನಡುವಿನ ಏಕದಿನ ಸರಣಿಯ ಮೊದಲನೇ ಪಂದ್ಯದಲ್ಲಿ ಇಶಾನ್ ಕಿಶನ್ ಈ ಪ್ರಮಾದ ಎಸಗಿದ್ದಾರೆ.

ILT20: 38 ಎಸೆತಗಳಲ್ಲಿ ಸ್ಫೋಟಕ 86 ರನ್ ಗಳಿಸಿ ಮಿಂಚಿದ ಕೀರನ್ ಪೊಲಾರ್ಡ್ILT20: 38 ಎಸೆತಗಳಲ್ಲಿ ಸ್ಫೋಟಕ 86 ರನ್ ಗಳಿಸಿ ಮಿಂಚಿದ ಕೀರನ್ ಪೊಲಾರ್ಡ್

ಹೈದರಾಬಾದ್‌ನಲ್ಲಿ ನಡೆದ ಮೊದಲನೇ ಏಕದಿನ ಪಂದ್ಯದಲ್ಲಿ ಕೀಪಿಂಗ್ ಮಾಡುವ ವೇಳೆ ಇಶಾನ್ ಕಿಶನ್ ತಪ್ಪು ಮಾಡಿದ್ದಾರೆ. ನ್ಯೂಜಿಲೆಂಡ್ ಬ್ಯಾಟರ್ ಟಾಮ್ ಲಾಥಮ್ ಕ್ರೀಸ್‌ನಲ್ಲಿದ್ದ ವೇಳೆ ವಿಕೆಟ್ ಕೀಪರ್ ಇಶಾನ್ ಕಿಶನ್ ತಮ್ಮ ಗ್ಲೌಸ್‌ಗಳಿಂದ ಬೇಲ್ಸ್ ಕೆಳಗೆ ಬೀಳಿಸಿ ಅಂಪೈರ್ ಗೆ ಔಟ್‌ಗಾಗಿ ಮನವಿ ಮಾಡಿದರು.

ನಾಯಕ ಟಾಮ್ ಲ್ಯಾಥಮ್ ಅವರ ವಿಕೆಟ್‌ಗೆ ಮನವಿ ಮಾಡುವಾಗ ಭಾರತೀಯ ವಿಕೆಟ್-ಕೀಪರ್ ಬ್ಯಾಟರ್ ಸ್ಪಷ್ಟವಾಗಿ ಅಂಪೈರ್ ಅನ್ನು ವಂಚಿಸಲು ಪ್ರಯತ್ನಿಸಿದರು ಎಂದು ವರದಿ ಹೇಳಿದೆ.

IND vs AUS Test: ಭಾರತದ ವಿರುದ್ಧದ ಟೆಸ್ಟ್ ಸರಣಿಗೆ ಆಸ್ಟ್ರೇಲಿಯಾ ಹೊಸ ವೇಗದ ಅಸ್ತ್ರ!IND vs AUS Test: ಭಾರತದ ವಿರುದ್ಧದ ಟೆಸ್ಟ್ ಸರಣಿಗೆ ಆಸ್ಟ್ರೇಲಿಯಾ ಹೊಸ ವೇಗದ ಅಸ್ತ್ರ!

 ಅಂಪೈರ್ ಗೆ ಇಶಾನ್ ಕಿಶನ್ ಮನವಿ

ಅಂಪೈರ್ ಗೆ ಇಶಾನ್ ಕಿಶನ್ ಮನವಿ

ಟಾಮ್ ಲಾಥಮ್ ಬ್ಯಾಟಿಂಗ್ ಮಾಡುವ ವೇಳೆ ಬಾಲ್ ಬೀಟ್ ಮಾಡಿ ಕ್ರೀಸ್‌ನಲ್ಲಿ ನಿಂತಿದ್ದಾಗ ಬೇಲ್ಸ್ ಕೆಳಗೆ ಬೀಳಿಸಿದ ಇಶಾನ್ ಕಿಶನ್, ಲಾಥಮ್ ಹಿಟ್ ವಿಕೆಟ್ ಆಗಿದ್ದಾರೆ ಎಂದು ಸ್ಕ್ವೇರ್ ಲೆಗ್ ಅಂಪೈರ್‌ಗೆ ಮನವಿ ಮಾಡಿದ್ದರು.

ಮರುಪ್ರಸಾರದಲ್ಲಿ ಇದನ್ನು ವೀಕ್ಷಿಸಿದಾಗ ವಿಕೆಟ್ ಕೀಪರ್ ಇಶಾನ್ ಕಿಶನ್ ಉದ್ದೇಶಪೂರ್ವಕವಾಗಿ ತನ್ನ ಖಾಲಿ ಕೈಗವಸುನೊಂದಿಗೆ ಬೆಲ್ಸ್ ಎಗರಿಸಿದ್ದು ಗೊತ್ತಾಗಿದೆ. ಲಾಥಮ್ ಬಾಲ್‌ ಹೊಡೆದ ಕೆಲವು ಕ್ಷಣಗಳ ನಂತರ ಇಶಾನ್ ಕಿಶನ್ ಈ ರೀತಿ ಮಾಡಿದರು.

ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಕೂಡ ಈ ಘಟನೆಯಿಂದ ಒಂದು ಕ್ಷಣ ತಬ್ಬಿಬ್ಬುಗೊಂಡರು. ಅವರು ಮನವಿ ಮಾಡುವ ಮುನ್ನ ಮತ್ತೆ ಇಶಾನ್‌ ಕಿಶನ್‌ಗೆ ಪ್ರಶ್ನೆ ಮಾಡಿದರು. ಆದರೆ, ಇಶಾನ್ ಕಿಶನ್ ತಮಾಷೆಗೆ ಮಾಡಿದ್ದಾಗಿ ನಂತರ ಗೊತ್ತಾಯಿತು. ಟಾಮ್ ಲಾಥಮ್ ವಿಕೆಟ್ ಕೀಪಿಂಗ್ ಮಾಡುವ ವೇಳೆ ಬಾಲ್ ಬರುವ ಮುನ್ನವೇ ಗ್ಲೌಸ್ ವಿಕೆಟ್‌ ತಾಗಿದ ಪರಿಣಾಮ ಹಾರ್ದಿಕ್ ಪಾಂಡ್ಯ ವಿವಾದಾತ್ಮಕ ತೀರ್ಪಿಗೆ ಬಲಿಯಾಗಿದ್ದರು. ಅದಕ್ಕೆ ಪ್ರತಿಯಾಗಿ ಇಶಾನ್ ಕಿಶನ್ ಆ ರೀತಿ ಮಾಡಿದ್ದರು.

 ಐಸಿಸಿ ನಿಯಮಗಳ ಪ್ರಕಾರ ಅಪರಾಧ

ಐಸಿಸಿ ನಿಯಮಗಳ ಪ್ರಕಾರ ಅಪರಾಧ

ಐಸಿಸಿ ನೀತಿಸಂಹಿತೆಯ ಪ್ರಕಾರ ಇದನ್ನು 3ನೇ ಹಂತದ ಅಪರಾಧ ಎಂದು ವರದಿಯಲ್ಲಿ ಹೇಳಲಾಗಿದೆ. ಈ ಸಂಹಿತೆಯ ಪ್ರಕಾರ ತಪ್ಪು ಮಾಡಿದ ಆಟಗಾರನಿಗೆ 4 ರಿಂದ 12 ಏಕದಿನ ಪಂದ್ಯ ಅಥವಾ ಟಿ20 ಪಂದ್ಯಗಳಿಂದ ಅಮಾನತು ಮಾಡುವ ಅವಕಾಶವಿದೆ.

ಐಸಿಸಿ ನೀತಿ ಸಂಹಿತೆಯ ಆರ್ಟಿಕಲ್ 2.15ರ ಪ್ರಕಾರ, ಅಂತಾರಾಷ್ಟ್ರೀಯ ಪಂದ್ಯವನ್ನಾಡುವ ವೇಳೆಯಲ್ಲಿ ಅನ್ಯಾಯದ ಲಾಭ ಪಡೆಯಲು ಯತ್ನಿಸುವುದು, ಅಂಪೈರ್ ಅನ್ನು ಮೋಸಗೊಳಿಸುವ ಉದ್ದೇಶಪೂರ್ವಕ ಪ್ರಯತ್ನಗಳ ಬಗ್ಗೆ ಈ ಬಗ್ಗೆ ನಿಯಮ ರೂಪಿಸಲಾಗಿದೆ.

ಉಲ್ಲಂಘನೆಯ ಗಂಭೀರತೆಯನ್ನು ನಿರ್ಣಯಿಸುವಾಗ ಆಟಗಾರನ ನಡವಳಿಕೆ ಉದ್ದೇಶ ಪೂರ್ವಕವಾಗಿದೆಯೇ, ಅಜಾಗರೂಕತೆಯಿಂದ ಅಥವಾ ನಿರ್ಲಕ್ಷ್ಯದಿಂದ ಮನವಿ ಮಾಡಲಾಗಿದೆಯೇ ಎನ್ನುವದನ್ನು ಪರಿಗಣಿಸಲಾಗುತ್ತದೆ.

 ಅದೃಷ್ಟವಶಾತ್ ಪಾರಾದ ಇಶಾನ್ ಕಿಶನ್

ಅದೃಷ್ಟವಶಾತ್ ಪಾರಾದ ಇಶಾನ್ ಕಿಶನ್

ಇಶಾನ್ ಕಿಶನ್ ವರ್ತನೆ ಬಗ್ಗೆ ಆನ್‌ಫೀಲ್ಡ್ ಅಂಪೈರ್ ಗಳಾದ ಅನಿಲ್ ಚೌಧರಿ ಅಥವಾ ನಿತಿನ್ ಮೆನನ್ ಅಧಿಕೃತವಾಗಿ ದೂರು ನೀಡದ ಕಾರಣ ಇಶಾನ್ ಕಿಶನ್ ಕನಿಷ್ಠ 4 ಪಂದ್ಯಗಳ ನಿಷೇಧದಿಂದ ಪಾರಾಗಿದ್ದಾರೆ.

ಆದರೆ, ಮ್ಯಾಷ್ ರೆಫರಿ ಜಾವಗಲ್ ಶ್ರೀನಾಥ್ ಇದನ್ನು ಗಂಭೀರವಾಗಿ ಪರಿಗಣಿಸಿ ಇಶಾನ್ ಕಿಶನ್‌ಗೆ ಎಚ್ಚರಿಕೆ ನೀಡಿದ್ದಾರೆ. ಮಾತ್ರವಲ್ಲದೆ ನಾಯಕ ರೋಹಿತ್ ಶರ್ಮಾ ಮತ್ತು ಕೋಚ್ ರಾಹುಲ್ ದ್ರಾವಿಡ್‌ ಜೊತೆ ಕೂಡ ಈ ಬಗ್ಗೆ ಪ್ರತ್ಯೇಕವಾಗಿ ಚರ್ಚೆ ಮಾಡಿದ್ದಾರೆ.

For Quick Alerts
ALLOW NOTIFICATIONS
For Daily Alerts
Story first published: Monday, January 23, 2023, 11:39 [IST]
Other articles published on Jan 23, 2023
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X