ನವೋಮಿ ಒಸಾಕಾ ಮುಡಿಗೆ ಎರಡನೇ ಆಸ್ಟ್ರೇಲಿಯಾ ಓಪನ್ ಕಿರೀಟ

ಮೆಲ್ಬರ್ನ್: ಜಪಾನ್‌ನ ಬಲಿಷ್ಠ ಟೆನಿಸ್ ಆಟಗಾರ್ತಿ ನವೋಮಿ ಒಸಾಕಾ ಎರಡನೇ ಬಾರಿಗೆ ಆಸ್ಟ್ರೇಲಿಯಾ ಓಪನ್ ಪ್ರಶಸ್ತಿ ಜಯಿಸಿದ್ದಾರೆ. ಶನಿವಾರ (ಫೆಬ್ರವರಿ 20) ನಡೆದ ಮಹಿಳಾ ಸಿಂಗಲ್ಸ್ ವಿಭಾಗದ ಫೈನಲ್ ಪಂದ್ಯದಲ್ಲಿ ಅಮೆರಿಕಾದ ಜೆನಿಫರ್ ಬ್ರಾಡಿ ಅವರನ್ನು ಸೋಲಿಸಿ ಒಸಾಕಾ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ.
ಫೈನಲ್ ಪಂದ್ಯದಲ್ಲಿ ನವೋಮಿ ಒಸಾಕಾ, ಜೆನಿಫರ್ ಬ್ರಾಡಿ ಅವರನ್ನು 6-4, 6-3ರ ನೇರ ಸೆಟ್‌ನಿಂದ ಮಣಿಸಿದ್ದಾರೆ. 22ರ ಶ್ರೇಯಾಂಕಿತೆ ಬ್ರಾಡಿ ಅವರ ವಿರುದ್ಧ ಸುಲಭವಾಗಿ ಮೇಲುಗೈ ಸಾಧಿಸಿದ್ದು ಪಂದ್ಯದಲ್ಲಿ ಕಂಡುಬಂತು. ಮೆಲ್ಬರ್ನ್‌ನ ರೋಡ್ ಲ್ಯಾವರ್ ಅರೇನಾ ಸ್ಟೇಡಿಯಂನಲ್ಲಿ ಫೈನಲ್ ಪಂದ್ಯ ನಡೆದಿತ್ತು.
'ಈ ಗೆಲುವು ನನಗೆ ನಿಜಕ್ಕೂ ಅದ್ಭುತ ಖುಷಿ ನೀಡುತ್ತಿದೆ. ಹಿಂದಿನ ಗ್ರ್ಯಾಂಡ್‌ಸ್ಲ್ಯಾಮ್ ಪಂದ್ಯದಲ್ಲಿ ನನಗೆ ಅಭಿಮಾನಿಗಳ ಎದುರು ಆಡಲಾಗಿರಲಿಲ್ಲ. ಈ ಬಾರಿ ಫ್ಯಾನ್ಸ್ ಮುಂದೆ ಆಡಿದ್ದು ನನಗೆ ಇನ್ನಷ್ಟು ಶಕ್ತಿ ನೀಡಿತ್ತು,' ಎಂದು ಪಂದ್ಯದ ಬಳಿಕ ಒಸಾಕಾ ಹೇಳಿದ್ದಾರೆ.
ವಿಶ್ವ ನಂ.3ನೇ ಶ್ರೇಯಾಂಕಿತೆ ಒಸಾಕಾ 2019ರಲ್ಲೂ ಆಸ್ಟ್ರೇಲಿಯಾ ಓಪನ್ ಪ್ರಶಸ್ತಿ ಗೆದ್ದಿದ್ದರು. ಆದರೆ 2020ರಲ್ಲಿ ಒಸಾಕಾ ಆಸ್ಟ್ರೇಲಿಯಾ ಓಪನ್‌ನಲ್ಲಿ ಆಡಿರಲಿಲ್ಲ. 23ರ ಹರೆಯದ ಒಸಾಕಾ ಇಲ್ಲಿಗೆ ಒಟ್ಟಿಗೆ 4 ಗ್ರ್ಯಾಂಡ್‌ಸ್ಲ್ಯಾಮ್ ಪ್ರಶಸ್ತಿಗಳನ್ನು ಗೆದ್ದಂತಾಗಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications