For Quick Alerts
ALLOW NOTIFICATIONS  
For Daily Alerts

Australian Open 2023: ಕೋವಿಡ್ ಪಾಸಿಟಿವ್ ಇದ್ದರೂ ಆಟಗಾರರಿಗೆ ಆಡುವ ಅವಕಾಶ ಸಾಧ್ಯತೆ

Australian Open: Players with Covid-19 could be allowed to play said tournament director Craig Tiley

2023ರ ಆವೃತ್ತಿಯ ಆಸ್ಟ್ರೇಲಿಯನ್ ಓಪನ್ ಟೂರ್ನಿಯ ಆರಂಭಕ್ಕೆ ದಿನಗಣನೆ ಆರಂಭವಾಗಿದೆ. ಜನವರಿ 16ರಿಂದ ಈ ಟೂರ್ನಿ ಆರಂಭವಾಗಲಿದ್ದು ಟೆನಿಸ್ ಪ್ರಮಿಗಳು ಈ ಪ್ರತಿಷ್ಠಿತ ಟೂರ್ನಮೆಂಟ್‌ನ ಮೇಲೆ ಸಾಕಷ್ಟು ನಿರೀಕ್ಷೆ ಹೊಂದಿದ್ದಾರೆ. ಈ ಸಂದರ್ಭದಲ್ಲಿ ಆಸ್ಟ್ರೇಲಿಯನ್ ಓಪನ್ ಆಯೋಜಕರಿಂದ ಮಹತ್ವದ ಪ್ರತಿಕ್ರಿಯೆ ಹೊರಬಿದ್ದಿದ್ದು ಈ ಆವೃತ್ತಿಯಲ್ಲಿ ಆಟಗಾರರು ಕೋವಿಡ್‌ಗೆ ಒಳಗಾಗಿದ್ದರು ಕೂಡ ಆಡುವ ಅವಕಾಶ ನೀಡುವ ಸಾಧ್ಯತೆಯಿದೆ ಎಂದಿದ್ದಾರೆ.

ಸೋಮವಾರ ಆಸ್ಟ್ರೇಲಿಯನ್ ಓಪನ್‌ನ ನಿರ್ದೇಶಕ ಕ್ರೇಗ್ ಟೈಲೆ ಹೇಳಿಕೆ ನೀಡಿದ್ದು ಈ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ಆಟಗಾರರು ಕೋವಿಡ್ -19 ಪರೀಕ್ಷೆಗಳನ್ನು ತೆಗೆದುಕೊಳ್ಳುವ ಅಗತ್ಯವಿಲ್ಲ ಮತ್ತು ಅವರು ವೈರಸ್ ಹೊಂದಿದ್ದರೂ ಸಹ ಆಡಬಹುದು ಎಂದು ಟೈಲೆ ಹೇಳಿದ್ದಾರೆ.

ಟೈಲಿ ಸೋಮವಾರ ಘೋಷಿಸಿದ ಟೂರ್ನಿಯ ಆರೋಗ್ಯ ನೀತಿಯಲ್ಲಿ ಕಳೆದ ಎರಡು ವರ್ಷಗಳಲ್ಲಿ ಪ್ರಮುಖವಾಗಿ ಜಾರಿಯಲ್ಲಿದ್ದ ಕಟ್ಟುನಿಟ್ಟಾದ ಪ್ರೋಟೋಕಾಲ್‌ಗಳಿಂದ ಗಮನಾರ್ಹ ಬದಲಾವಣೆಯಾಗಿದೆ. 2021 ರಲ್ಲಿ ಆಸ್ಟ್ರೇಲಿಯನ್ ಓಪನ್ ಅನ್ನು ಬಯೋಬಬಲ್‌ನಲ್ಲಿ ನಡೆಸಲಾಗಿದ್ದು ಪ್ರೇಕ್ಷಕರಿಲ್ಲದೆ ಆಡಲಾಗಿದೆ.

ಇನ್ನು ಕಳೆದ ವರ್ಷ ಕೋವಡ್ ವ್ಯಾಕ್ಸಿನ್ ಬಗ್ಗೆ ಆಸ್ಟ್ರೇಲಿಯಾ ಸರ್ಕಾರ ಕಠಿಣ ನಿಲುವು ತೆಗೆದುಕೊಂಡಿದ್ದ ಕಾರಣ ಸರ್ಬಿಯಾದ ಸ್ಟಾರ್ ಆಟಗಾರ ನೊವಾಕ್ ಜೊಕೊವಿಕ್ ಟೂರ್ನಿಯಲ್ಲಿ ಆಡುವ ಅವಕಾಶವನ್ನು ಕಳೆದುಕೊಂಡಿದ್ದರು. ವ್ಯಾಕ್ಸಿನ್ ಪಡೆದುಕೊಳ್ಳದೆ ಆಸ್ಟ್ರೇಲಿಯಾಗೆ ತೆರಳಿದ್ದ ಹಾಲಿ ಚಾಂಪಿಯನ್ ಆಗಿದ್ದ ಜೊಕೊವಿಕ್ ಟೂರ್ನಿಯಲ್ಲಿ ಭಾಗವಹಿಸದೆಯೇ ಮರಳಬೇಕಾಯಿತು. ಜೊಕೊವಿಕ್ ಇನ್ನು ಕೂಡ ವ್ಯಾಕ್ಸಿನ್ ದಾಖಲೆಹೊಂದಿಲ್ಲ ಎನ್ನಲಾಗಿದೆ. ಆದರೆ ಆಸ್ಟ್ರೇಲಿಯಾ ತನ್ನ ನಿಯಮದಲ್ಲಿ ಬದಲಾವಣೆ ಮಾಡಿಕೊಂಡಿರುವ ಕಾರಣ ಈ ಬಾರಿ ಸರ್ಬಿಯಾದ ಸ್ಟಾರ್ ಆಟಗಾರ ಟೂರ್ನಿಯಲ್ಲಿ ಆಡುವ ಅವಕಾಶ ದೊರೆಯಲಿದೆ.

ಜನವರಿಯಲ್ಲಿ ಆಸ್ಟ್ರೇಲಿಯಾ ಕ್ರಿಕೆಟಿಗ ಮ್ಯಾಟ್ ರೆನ್‌ಶಾ ಅವರು ಕೋವಿಡ್ -19 ಗೆ ತುತ್ತಾಗಿರುವುದು ದೃಢಪಟ್ಟಿದ್ದರೂ ಸಿಡ್ನಿಯಲ್ಲಿ ನಡೆದ ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾ ಪರ ಆಡಿದ್ದರು. ಟೆಸ್ಟ್‌ನ ಮೊದಲ ಮೂರು ದಿನಗಳಲ್ಲಿ ಬ್ಯಾಟರ್ ತನ್ನ ತಂಡದ ಆಟಗಾರರಿಂದ ಪ್ರತ್ಯೇಕವಾಗಿ ಉಳಿದುಕೊಂಡಿದ್ದರು. ಆದರೆ ನೆಗೆಟಿವ್ ಫಲಿತಾಂಶದ ಬಳಿಕ ಅವರು ತಂಡದ ಡ್ರೆಸ್ಸಿಂಗ್ ರೂಮ್‌ಗೆ ವಾಪಾಸಾಗಿದ್ದರು.

Story first published: Monday, January 9, 2023, 14:19 [IST]
Other articles published on Jan 9, 2023
POLLS
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+