ಆಸ್ಟ್ರೇಲಿಯನ್ ಓಪನ್, ಸೆಮಿಫೈನಲ್: ಫೈನಲ್ ಪ್ರವೇಶಿಸಿದ ಆಶ್ಲೆ ಬಾರ್ಟಿ, ಡೇನಿಯಲ್ ಕಾಲಿನ್ಸ್

ಆಸ್ಟ್ರೇಲಿಯನ್ ಓಪನ್ 2022ರ ಋತುವಿನ ಅಂತಿಮ ಘಟ್ಟಕ್ಕೆ ತಲುಪುತ್ತಿದೆ. ಇಂದು ಮಹಿಳೆಯರ ವಿಭಾಗದ ಸೆಮಿ ಫೈನಲ್ ಕಾದಾಟ ಅಂತ್ಯವಾಗಿದ್ದು ಕುತೂಹಲಕಾರಿ ಕಾದಾಟದಲ್ಲಿ ಡೇನಿಯಲ್ ಕಾಲಿನ್ಸ್ ಹಾಗೂ ಆಶ್ಲೇ ಬಾರ್ಟಿ ಮಹಿಳಾ ವಿಭಾಗ್ ಫೈನಲ್ ಹಂತಕ್ಕೇ ಏರುವಲ್ಲಿ ಯಶಸ್ವಿಯಾಗಿದ್ದಾರೆ. ಸೆಮಿಫೈನಲ್‌ನಲ್ಲಿ ಅಮೋಘ ಪ್ರದರ್ಶನ ನೀಡಿದ ನಂತರ ಡೇನಿಯಲ್ ಕಾಲಿನ್ಸ್ ವಿಶ್ವ ನಂ 1 ಆಶ್ಲೇ ಬಾರ್ಟಿ ಅವರೊಂದಿಗೆ ಅಂತಿಮ ಕದನದಲ್ಲಿ ಹೋರಾಡಲು ಅರ್ಹತೆ ಸಂಪಾದಿಸಿದ್ದಾರೆ.
ಆಸ್ಟ್ರೇಲಿಯನ್ ಓಪನ್ 2022ರ ಫೈನಲ್ ಹಂತಕ್ಕೇರಲು ಡೇನಿಯಲ್ ಕಾಲಿನ್ಸ್ ಇಗಾ ಸ್ವಿಯಾಟೆಕ್ ಅವರನ್ನು 6-4, 6-1 ಸೆಟ್‌ಗಳಿಂದ ಸೋಲಿಸಿದರು. ಇದಕ್ಕೂ ಮುನ್ನ ನಡೆದ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಆಶ್ ಬಾರ್ಟಿ ಮ್ಯಾಡಿಸನ್ ಕೀಸ್‌ರನ್ನು 6-1, 6-3 ಅಂತರದಿಂದ ಸುಲಭವಾಗಿ ಮಣಿಸಿ ಫೈನಲ್ ಹಂತಕ್ಕೇರುವಲ್ಲಿ ಯಶಸ್ವಿಯಾದರು.
ಚೊಚ್ಚಲ ಆಸ್ಟ್ರೇಲಿಯನ್ ಓಪನ್ ಟ್ರೋಫಿಯ ಸನಿಹ ಬಾರ್ಟಿ: ಆಸ್ಟ್ರೇಲಿಯಾ ಮೂಲದ ಟೆನಿಸ್ ಆಟಗಾರ್ತಿ ಆಶ್ ಬಾರ್ಟಿ ಆಸ್ಟ್ರೇಲಿಯನ್ ಓಪನ್ ಫೈನಲ್‌ಗೆ ಅರ್ಹತೆಯನ್ನು ಗಿಟ್ಟಿಸಿಕೊಂಡಿದ್ದಾರೆ. ಅವರು ಯುಎಸ್‌ಎಯ ಮ್ಯಾಡಿಸನ್ ಕೀಸ್ ವಿರುದ್ಧ ನಡೆದ ಸೆಮಿ ಫೈನಲ್ ಪಂದ್ಯದಲ್ಲಿ ಕೇವಲ ಒಂದು ಗಂಟೆಯಲ್ಲಿ ನೇರ ಸೆಟ್‌ಗಳಲ್ಲಿ ಸೋಲಿಸಿದರು. ಈ ಗೆಲುವಿನೊಂದಿಗೆ ಆಶ್ ಬಾರ್ಟಿ ತಮ್ಮ ಚೊಚ್ಚಲ ಆಸ್ಟ್ರೇಲಿಯನ್ ಓಪನ್ ಪ್ರಶಸ್ತಿಗೆ ಮತ್ತಷ್ಟು ಹತ್ತಿರವಾಗಿಸಿದೆ. 1978ರ ನಂತರ ಆಸ್ಟ್ರೇಲಿಯ್ ಓಪನ್ ಪ್ರಶಸ್ತಿ ಗೆದ್ದ ಮೊದಲ ಆಸ್ಟ್ರೇಲಿಯಾದ ಆಟಗಾರ್ತಿ ಎಂಬ ಹೆಗ್ಗಳಿಕೆಯನ್ನು ಪಡೆಯುವ ಅವಕಾಶ ಕೂಡ ಆಶ್ಲೆಗೆ ಇದೆ. ಈ ಮೂಲಕ ಆಸ್ಟ್ರೇಲಿಯಾದ ನಾಲ್ಕು ದಶಕಗಳ ಟ್ರೋಫಿಯ ಬಲ ನೀಗುವ ನಿರೀಕ್ಷೆಯಿದೆ. ರಾಡ್ ಲೇವರ್ ಅರೆನಾದಲ್ಲಿ ನಡೆದ ಪಂದ್ಯದಲ್ಲಿ ಒಂದು ಗಂಟೆ ಮತ್ತು 2 ನಿಮಿಷಗಳಲ್ಲಿ 6-1, 6-3 ಅಂತರದಲ್ಲಿ ಆಶ್ಲೆ ಬಾರ್ಟಿ ಗೆಲುವು ಸಾಧಿಸಿದ್ದಾರೆ.
ಬಾರ್ಟಿ ಆರಂಭಿಕ ಸೆಟ್ ಅನ್ನು ಏಕಪಕ್ಷೀಯವಾಗಿ ಗೆದ್ದರು. ಆದರೆ ಎರಡನೇ ಸೆಟ್‌ನಲ್ಲಿ ಮ್ಯಾಡಿಸನ್ ಕೀಸ್ ತನ್ನ ಅತ್ಯುತ್ತಮ ಪ್ರದರ್ಶನ ನೀಡಲು ಪ್ರಯತ್ನಿಸಿದರು ಆದರೆ ವಿಶ್ವ ನಂ.1 ಆಟಗಾರ್ತಿಯ ಅದ್ಭುತ ಸರ್ವ್‌ಗಳನ್ನು ಮುಂದೆ ಕೀಸ್ ಆಟ ನಡೆಯಲಿಲ್ಲ. ಹೀಗಾಗಿ ಸುಲಭ ಗೆಲುವು ಸಾಧಿಸಿ ಫೈನಲ್ ಹಂತಕ್ಕೇರಿದ್ದಾರೆ.
ಈಗಾ ಸ್ವಿಯಾಟೆಕ್ ವಿರುದ್ಧ ಭರ್ಜರಿ ಗೆಲುವು ಸಾಧಿಸಿದ ಕಾಲಿನ್ಸ್: ವಿಶ್ವ 27ನೇ ಶ್ರೇಯಾಂಕಿತೆ ಡೇನಿಯಲ್ ಕಾಲಿನ್ಸ್ ಪ್ರಸ್ತುತ ನಡೆಯುತ್ತಿರುವ ಆಸ್ಟ್ರೇಲಿಯನ್ ಓಪನ್ 2022ರಲ್ಲಿ ಫೈನಲ್ ಹಂತಕ್ಕೆ ಪ್ರವೇಶ ಪಡೆಯುವ ಮೂಲಕ ಮೊದಲ ಬಾರಿಗೆ ಗ್ರ್ಯಾಂಡ್ ಸ್ಲಾಮ್ ಫೈನಲ್ಸ್ ಕಾಣಿಸಿಕೊಳ್ಳಲು ಅರ್ಹತೆ ಸಂಪಾದಿಸಿದ್ದಾರೆ. ಕಾಲಿನ್ಸ್‌ಗೆ ಸೆಮಿಫೈನಲ್‌ನಲ್ಲಿ 2020ರ ಫ್ರೆಂಚ್ ಓಪನ್ ಚಾಂಪಿಯನ್ ಇಗಾ ಸ್ವಿಯಾಟೆಕ್ ಎದುರಾಳಿಯಾಗಿದ್ದರು. ಆದರೆ 6-4, 6-1 ಅಂತರದಿಂದ ಕಾಲಿನ್ಸ್ ನೇರ ಟೆಸ್ಟ್‌ಗಳ ಗೆಲುವು ಸಂಪಾದಿಸಿದರು. ಈ ಮೂಲಕ ಕಾಲಿನ್ಸ್ ಈಗ ವಿಶ್ವ ನಂ.1 ಆಶ್ಲೀ ಬಾರ್ಟಿ ವಿರುದ್ಧ ಶನಿವಾರ ನಡೆಯಲಿರುವ ಫೈನಲ್ ಪಂದ್ಯದಲ್ಲಿ ಮುಖಾಮುಖಿಯಾಗಲಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications