ಪುರುಷರ ಬ್ಯಾಡ್ಮಿಂಟನ್ ತಂಡ, ಟೆನಿಸ್ ಮಿಶ್ರ ಡಬಲ್ಸ್ ತಂಡ ಮುನ್ನಡೆ

ಜಕಾರ್ತಾ, ಆಗಸ್ಟ್ 19: ಭಾರತ ಪುರುಷರ ಬ್ಯಾಡ್ಮಿಂಟನ್ ತಂಡ ಮತ್ತು ಟೆನಿಸ್ ಮಿಶ್ರ ಡಬಲ್ಸ್ ತಂಡ ಇಂಡೋನೇಷ್ಯಾ ಏಷ್ಯನ್ ಗೇಮ್ಸ್ ನಲ್ಲಿ ಮುನ್ನಡೆ ಸಾಧಿಸಿದೆ. ಆದರೆ ಎರಡು ಬಾರಿ ಒಲಿಂಪಿಕ್ಸ್ ಪದಕ ಗೆದ್ದಿದ ರಸ್ಲರ್ ಸುಶೀಲ್ ಕುಮಾರ್ ಕುಮಾರ್ ಆರಂಭಿಕ ಪಂದ್ಯದಲ್ಲಿ ಸೋಲನುಭವಿಸಿದ್ದಾರೆ.
ಅನುಭವಿ ಆಟಗಾರ, ಡಬಲ್ಸ್ ಪರಿಣಿತ ಲಿಯಾಂಡರ್ ಪೇಸ್ ಸ್ಪರ್ಧೆಯಿಂದ ಹೊರಗುಳಿದ ಹೊರತಾಗಿಯೂ ದಿವಿಜ್ ಶರಣ್ ಮತ್ತು ಕರ್ಮಾನ್ ಕೌರ್ ಅವರನ್ನೊಳಗೊಂಡ ಭಾರತದ ಟೆನಿಸ್ ಮಿಶ್ರ ಡಬಲ್ಸ್ ತಂಡ ಫಿಲಿಪೈನ್ಸ್ ನ ಆಲ್ಬರ್ಟೊ ಜೂನಿಯರ್ ಲಿಮ್ ಮತ್ತು ಮರಿಯನ್ ಜೇಡ್ ಕ್ಯಾಪಡೋಸಿಯಾ ಜೋಡಿಯನ್ನು 6-4, 6-4ರಿಂದ ಹಿಮ್ಮೆಟ್ಟಿಸಿ ಅಂತಿಮ 16ರ ಸುತ್ತಿಗೆ ಪ್ರವೇಶಿಸಿದೆ.
ಪುರುಷರ ಬ್ಯಾಡ್ಮಿಂಟನ್ ತಂಡ ಸ್ಪರ್ಧೆಯಲ್ಲಿ ಭಾರತ ತಂಡ ಮಾಲ್ಡೀವ್ಸ್ ತಂಡವನ್ನು ಸೋಲಿಸಿ ಮುಂದಿನ ಹಂತಕ್ಕೆ ಪ್ರವೇಶಿಸಿದೆ. ಕ್ವಾರ್ಟರ್ ಫೈನಲ್ಸ್ ಪಂದ್ಯದಲ್ಲಿ ಭಾರತ ಆತಿಥೇಯ ಇಂಡೋನೇಷ್ಯಾವನ್ನು ಎದುರುಗೊಳ್ಳಲಿದೆ.
ಪುರುಷರ ರಸ್ಲಿಂಗ್ ವಿಭಾಗದ ಮೊದಲ ಸುತ್ತಿನ ಸ್ಪರ್ಧೆಯಲ್ಲಿ ಸುಶೀಲ್ ಕುಮಾರ್ ಅವರು ಬಹ್ರೇನ್ ನ ಆದಮ್ ಬಟಿರೊವ್ ಅವರೆದುರು ಸೋಲನುಭವಿಸಿದ್ದಾರೆ. ಆದರೆ ಇನ್ನೊಬ್ಬ ಸ್ಪರ್ಧಿ ಭಜರಂಗ್ ಪೂನಿಯಾ ಅವರು ಉಜ್ಬೇಕಿಸ್ತಾನ್ ನ ಸಿರೋಜಿದ್ದೀನ್ ಅವರೆದುರು 13-3ರ ಗೆಲುವು ದಾಖಲಿಸಿ ಮುನ್ನಡೆದಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications