19ರ ಹರೆಯದ ಬಿಯಾಂಕಾಗೆ 'ಕೆನಡಾದ ವರ್ಷದ ಕ್ರೀಡಾಪಟು' ಗೌರವ

ಒಟ್ಟಾವಾ, ಡಿಸೆಂಬರ್ 11: ಟೆನಿಸ್ ಆಟಗಾರ್ತಿ, 19ರ ಹರೆಯದ ಬಿಯಾಂಕಾ ಆಂಡ್ರೀಸ್ಕುಗೆ ಕೆನಡಾದ ವರ್ಷದ ಆಟಗಾರ್ತಿ ಪ್ರಶಸ್ತಿ ಲಭಿಸಿದೆ. ಇದು ಬಿಯಾಂಕಾಗೆ ಇದೇ ವರ್ಷ ದೊರೆಯುತ್ತಿರುವ 2ನೇ ಅತ್ಯುನ್ನತ ಗೌರವ. ಇದಕ್ಕೂ ಮುನ್ನ ಆಂಡ್ರೀಸ್ಕುಗೆ ಲೌ ಮಾರ್ಷ್ ಟ್ರೋಫಿ ಲಭಿಸಿತ್ತು.
ಸುಮಾರು 50 ವರ್ಷಗಳಲ್ಲಿ ರೋಜರ್ಸ್ ಕಪ್ ಗೆದ್ದ ಮೊದಲ ಕೆನಡಿಯನ್ ಟೆನಿಸ್ ಆಟಗಾರ್ತಿ ಎಂಬ ಹಿರಿಮೆಯೂ ಬಿಯಾಂಕಾ ಆಂಡ್ರೀಸ್ಕು ಅವರದ್ದು. ಅಷ್ಟೇ ಅಲ್ಲ; ರೋಜರ್ಸ್ ಕಪ್ ಫೈನಲ್‌ನಲ್ಲಿ ಅಮೆರಿಕಾ ಬಲಿಷ್ಠೆ ಸೆರೆನಾ ವಿಲಿಯಮ್ಸ್ ಮಣಿಸಿದ ಮೊದಲ ಕೆನಡಾ ಆಟಗಾರ್ತಿ, ಅದರಲ್ಲೂ ಹದಿಹರೆಯದ ಆಟಗಾರ್ತಿಯೆಂಬ ಹೆಗ್ಗಳಿಕೆಗೂ ಬಿಯಾಂಕಾ ಪಾತ್ರರಾಗಿದ್ದರು.
'ಈ ಪ್ರಶಸ್ತಿಗೆ ನಾನು ಆಭಾರಿಯಾಗಿದ್ದೇನೆ. ನಾನಿದನ್ನು ನಿರೀಕ್ಷಿಸಿರಲಿಲ್ಲ. ಅದರಲ್ಲೂ ಈ ಪ್ರಶಸ್ತಿ ಗೆದ್ದ ಮೊದಲ ಟೆನಿಸ್ ಆಟಗಾರ್ತಿ ನಾನಾಗಿರುವುದಕ್ಕೆ ಅತೀವ ಖುಷಿಯಾಗಿದೆ. 2020 ನನಗೇನು ನೀಡಲಿದೆಯೆಂದು ಕಾಯುತ್ತಾ ಕುಳಿತುಕೊಳ್ಳಲಾರೆ. ಕೆನಡಾವನ್ನು ಅತ್ಯುನ್ನತ ಮಟ್ಟದಲ್ಲಿ ಪ್ರತಿನಿಧಿಸಲು ನನಗೆ ಹೆಮ್ಮೆಯೆನಿಸಿದೆ,' ಎಂದು ಬಿಯಾಂಕಾ ಹರ್ಷ ವ್ಯಕ್ತಪಡಿಸಿದ್ದಾರೆ.
ಕೆನಡಾದ ವರ್ಷದ ಆಟಗಾರ್ತಿ ಪ್ರಶಸ್ತಿಗೆ ಬಿಯಾಂಕಾ ಅವರನ್ನು 30 ಜನ ಕ್ರೀಡಾಪತ್ರಕರ್ತರಿದ್ದ ಸಮೂಹ ಸರ್ವಾನುಮತದಿಂದ ಆರಿಸಿದೆ. ಈ ಪ್ರಶಸ್ತಿಗಾಗಿ ನೋಂದಾಯಿಸಿಕೊಂಡಿದ್ದ ಇನ್ನಿತರ ಕ್ರೀಡಾಪಟುಗಳೆಂದರೆ ಬ್ರೂಕ್ ಹೆಂಡರ್ಸನ್ (ಗಾಲ್ಫ್), ಜೋರ್ಡಾನ್ ಬಿನ್ನಿಂಗ್ಟನ್ (ಐಸ್ ಹಾಕಿ), ಆಂಡ್ರೆ ಡಿ ಗ್ರಾಸ್ (ಅಥ್ಲೆಟಿಕ್ಸ್), ಮೈಕ್ ಸೊರೊಕಾ (ಬೇಸ್ ಬಾಲ್).
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications