ಯುಎಸ್ ಓಪನ್ ಫೈನಲ್: ಸೆರೆನಾಗೆ 19ರ ಚೆಲುವೆ ಬಿಯಾಂಕಾ ಎದುರಾಳಿ!

ನ್ಯೂಯಾರ್ಕ್, ಸೆಪ್ಟೆಂಬರ್ 6: ಯುಎಸ್ ಓಪನ್ ಮಹಿಳಾ ಸಿಂಗಲ್ಸ್ ಫೈನಲ್‌ನಲ್ಲಿ ಅಮೆರಿಕಾ ಬಲಿಷ್ಠೆ ಸೆರೆನಾ ವಿಲಿಯಮ್ಸ್ ಎದುರು ಕೆನಡಾದ ಹದಿಹರೆಯದ ಚೆಲುವೆ ಬಿಯಾಂಕಾ ಆ್ಯಂಡ್ರೀಸ್ಕು ಕಣಕ್ಕಿಳಿಯಲಿದ್ದಾರೆ. ಸೆಮಿಫೈನಲ್‌ನಲ್ಲಿ ಬಿಯಾಂಕಾ, ಬೆಲಿಂಡಾ ಬೆನ್ಸಿಕ್ ಹಿಮ್ಮೆಟ್ಟಿಸಿ ಪ್ರತಿಷ್ಠಿತ ಟೂರ್ನಿಯಲ್ಲಿ ಪ್ರಶಸ್ತಿ ಸುತ್ತಿಗೇರಿದ್ದಾರೆ.
19ರ ಹರೆಯದ ಬಿಯಾಂಕಾ, ಗುರುವಾರ (ಸೆಪ್ಟೆಂಬರ್ 5) ನಡೆದ ಸೆಮಿಫೈನಲ್ ಪಂದ್ಯದಲ್ಲಿ ಸ್ವಿಸ್ ಆಟಗಾರ್ತಿ ಬೆನ್ಸಿಕ್ ಅವರನ್ನು 7-6 (7/3), 7-5ರ ಅಂತರದಿಂದ ಸೋಲಿಸಿ ಮುನ್ನಡೆ ಗಿಟ್ಟಿಸಿಕೊಂಡರು. ಇದರೊಂದಿಗೆ ಗ್ರ್ಯಾಂಡ್‌ಸ್ಲ್ಯಾಮ್‌ನಲ್ಲಿ ಫೈನಲ್‌ಗೆ ಪ್ರವೇಶಿಸಿದ 2ನೇ ಮಹಿಳೆ ಎಂಬ ಕೀರ್ತಿಗೆ ಬಿಯಾಂಕಾ ಪಾತ್ರರಾಗಿದ್ದಾರೆ. ಶನಿವಾರ (ಸೆ.7) ಯುಎಸ್ ಓಪನ್ ಫೈನಲ್ ನಡೆಯಲಿದೆ.
23 ಬಾರಿ ಗ್ರ್ಯಾಂಡ್‌ಸ್ಲ್ಯಾಮ್ ಪ್ರಶಸ್ತಿ ಜಯಿಸಿರುವ, 37ರ ಹರೆಯದ ಸೆರೆನಾ, ಗುರುವಾರ ಸೆಮಿಫೈನಲ್‌ನಲ್ಲಿ ಉಕ್ರೇನ್ ಆಟಗಾರ್ತಿ ಎಲಿನಾ ಸ್ವಿಟೋಲಿನಾ ವಿರುದ್ಧ 6-3, 6-1ರ ಗೆಲುವಿನೊಂದಿಗೆ ಫೈನಲ್ ಪ್ರವೇಶಿಸಿದ್ದಾರೆ. ಫೈನಲ್‌ನಲ್ಲಿ ಸೆರೆನಾ ಗೆದ್ದರೆ ಆಸೀಸ್ ಮಾಜಿ ಆಟಗಾರ್ತಿ ಮಾರ್ಗರೆಟ್ ಕೋರ್ಟ್ ಜೊತೆ 24 ಗ್ರ್ಯಾಂಡ್‌ಸ್ಲ್ಯಾಮ್ ಪ್ರಶಸ್ತಿಗಳ ವಿಶ್ವದಾಖಲೆ ಸರಿದೂಗಿಸಿದಂತಾಗುತ್ತದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications