US Open 2024: ಎರಡನೇ ಸುತ್ತಿನಲ್ಲೇ ಹೊರ ಬಿದ್ದ 3 ಬಾರಿ ಗ್ರ್ಯಾಂಡ್ ಸ್ಲಾಮ್ ಚಾಂಪಿಯನ್ ಅಲ್ಕಾರಾಜ್
ಯುಎಸ್ ಓಪನ್ 2024ರಲ್ಲಿ ಟೆನಿಸ್ ತಾರೆ ಕಾರ್ಲೋಸ್ ಅಲ್ಕರಾಜ್ ಆಘಾತಕಾರಿ ಸೋಲು ಅನುಭವಿಸಿದ್ದಾರೆ. ಪುರುಷರ ಸಿಂಗಲ್ಸ್ ಎರಡನೇ ಸುತ್ತಿನಲ್ಲಿ ನೆದರ್ಲೆಂಡ್ಸ್‌ನ ಬೊಟಿಕ್ ವ್ಯಾನ್ ಡಿ ಜಾನ್‌ಸ್ಚುಲ್ಪ್ ವಿರುದ್ಧ ಅಲ್ಕರಾಜ್ 6-1, 7-5, 6-4ರ ಅಂತರದಲ್ಲಿ ಸೋಲು ಕಂಡಿದ್ದಾರೆ.
ವಿಶ್ವದ 3ನೇ ಶ್ರೇಯಾಂಕದ ಅಲ್ಕರಾಜ್ ಅವರನ್ನು ಸೋಲಿಸುವ ಮೂಲಕ 74ನೇ ಶ್ರೇಯಾಂಕದ ಜಾನ್‌ಸ್ಚುಲ್ಪ್ ತಮ್ಮ ವೃತ್ತಿಜೀವನದ ಅತಿದೊಡ್ಡ ಗೆಲುವು ಸಾಧಿಸಿದ್ದಾರೆ. ಜಾನ್‌ಸ್ಚುಲ್ಪ್ ಮತ್ತು ಅಲ್ಕರಾಜ್ ನಡುವೆ ಗೆಲುವಿಗಾಗಿ 1 ಗಂಟೆ 19 ನಿಮಿಷಗಳ ಕಾಲ ಪ್ರಬಲ ಪೈಪೋಟಿ ನಡೆಯಿತು.

ಪೈಪೋಟಿಯಲ್ಲಿ ಪ್ರಾಬಲ್ಯ ಕಳೆದುಕೊಂಡ ಅಲ್ಕರಾಜ್ ಸೋಲನೊಂದಿಗೆ ಯುಎಸ್ ಓಪನ್‌ನಿಂದ ಹೊರ ಬಿದ್ದಿದ್ದಾರೆ. ಇದರೊಂದಿಗೆ ಪ್ರಸ್ತಕ ಸಾಲಿನ ಮೂರನೇ ಹಾಗು ವೃತ್ತಿಜೀವನ ಐದನೇ ಗ್ರ್ಯಾಂಡ್ ಸ್ಲಾಮ್ ಪ್ರಶಸ್ತಿ ಗೆಲ್ಲುವ ಅಲ್ಕರಾಜ್ ಕನಸು ಭಗ್ನವಾಗಿದೆ.
ಆಧುನಿಕ ಯುಗದಲ್ಲಿ ಫ್ರೆಂಚ್ ಓಪನ್, ವಿಂಬಲ್ಡನ್ ಮತ್ತು ಯುಎಸ್ ಓಪನ್ ಗೆದ್ದ ಮೂರನೇ ಆಟಗಾರನಾಗುವ ಅವಕಾಶವಿತ್ತು. ಇದಕ್ಕೂ ಮೊದಲು ರಾಡ್ ಲೇವರ್ ಮತ್ತು ರಫೆಲ್ ನಡಾಲ್ ಈ ಸಾಧನೆ ಮಾಡಿದ್ದಾರೆ.
ಬೋಟಿಕ್ ಹೇಳಿದ್ದೇನು?
ಅಲ್ಕರಾಜ್ ವಿರುದ್ಧ ಐತಿಹಾಸಿಕ ಗೆಲುವು ಸಾಧಿಸಿದ ನಂತರ ಮಾತನಾಡಿರುವ ಬೋಟಿಕ್, " ನನಗೆ ಮಾತನಾಡಲು ಪದಗಳೇ ಸಿಗುತ್ತಿಲ್ಲ. ಅರ್ಥರ್ ಸ್ಟೇಡಿಯಂನಲ್ಲಿ ಇಂದು ರಾತ್ರಿ ಕೆಲವೊಂದು ನಂಬಲಾಗದ ರೀತಿಯಲ್ಲಿ ಅಂಕಗಳನ್ನು ಗಳಿಸುವಲ್ಲಿ ಯಶಸ್ವಿಯಾಗಿದ್ದೇನೆ. ತಾಳ್ಮೆಯಿಂದ ಇರಲು ಪ್ರಯತ್ನಿಸಿದ್ದೇನೆ ಎಂದಿದ್ದಾರೆ.
ಸತತ ಓಟಕ್ಕೆ ಬ್ರೇಕ್
ಈ ಋತುವಿನಲ್ಲಿ ಅದ್ಭುತ ಆರಂಭ ಕಂಡಿದ್ದ ಅಲ್ಕರಾಜ್ ಅವರು ಫ್ರೆಂಚ್ ಓಪನ್ ಮತ್ತು ವಿಂಬಲ್ಡನ್ ಗ್ರ್ಯಾಂಡ್ ಸ್ಲಾಮ್ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದ್ದರು. ಇದಲ್ಲದೆ, ಇತ್ತೀಚೆಗೆ ತೆರ ಕಂಡ ಪ್ಯಾರಿಸ್ ಒಲಿಂಪಿಕ್ಸ್ ಟೆನಿಸ್ ಪುರುಷರ ಸಿಂಗಲ್ಸ್ ಫೈನಲ್‌ನಲ್ಲಿ ಸರ್ಬಿಯಾದ ಟೆನಿಸ್ ದಿಗ್ಗಜ ನೊವಾಕ್ ಜೊಕೊವಿಲ್ ವಿರುದ್ಧ ಸೋತಿದ್ದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications