French Open 2024: ಚೊಚ್ಚಲ ಪ್ರಶಸ್ತಿ ಗೆದ್ದು ವಿಶ್ವದಾಖಲೆ ನಿರ್ಮಿಸಿದ ಕಾರ್ಲೋಸ್ ಅಲ್ಕರಾಜ್!
ಜೂನ್ 10 ಸೋಮವಾರ, ಪ್ಯಾರಿಸ್‌ನ ಕೋರ್ಟ್ ಫಿಲಿಪ್ ಚಾಟ್ರಿಯರ್‌ನಲ್ಲಿ ಭಾನುವಾರ ನಡೆದ ಫ್ರೆಂಚ್ ಓಪನ್ 2024 ಪುರುಷರ ಸಿಂಗಲ್ಸ್ ಫೈನಲ್ನಲ್ಲಿ ಟೆನ್ನಿಸ್ ಆಟಗಾರ ಕಾರ್ಲೋಸ್ ಅಲ್ಕರಾಜ್ ತಮ್ಮ ಚೊಚ್ಚಲ ಪ್ರಶಸ್ತಿಯನ್ನು ಗೆಲ್ಲುವ ಮೂಲಕ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ.
ವಿಶ್ವದ ಮೂರನೇ ಶ್ರೇಯಾಕದ ಆಟಗಾರ ಅಲೆಕ್ಸಾಂಡರ್ ಜ್ವೆರೆವ್ ವಿರುದ್ಧ 6-3, 2-6, 5-7, 6-1, 6-2 ಐದು ಸೆಟ್‌ಗಳಲ್ಲಿ 21ರ ಹರೆಯದ ಸ್ಪೇನ್‌ನ ಕಾರ್ಲೋಸ್ ಅಲ್ಕರಾಜ್ ಭರ್ಜರಿ ಪ್ರದರ್ಶನ ನೀಡಿ ಪ್ರಶಸ್ತಿಯನ್ನು ಗೆದ್ದಿದ್ದಾರೆ. 4 ಗಂಟೆ 19 ನಿಮಿಷಗಳ ಕಾಲ ಫೈನಲ್ ಪಂದ್ಯ ನಡೆಯಿತು.

ಇದರೊಂದಿಗೆ ಮೂರು ಪ್ರತ್ಯೇಕ ಅಂಕಣಗಳಲ್ಲಿ ಗ್ರ್ಯಾಂಡ್ ಸ್ಲಾಮ್ ಪ್ರಶಸ್ತಿಗಳನ್ನು ಗೆದ್ದ ಅತ್ಯಂತ ಕಿರಿಯ ಆಟಗಾರ ಎಂಬ ವಿಶ್ವದಾಖಲೆಯನ್ನು ಅಲ್ಕರಾಜ್ ನಿರ್ಮಿಸಿದ್ದಾರೆ. 2022 ಯುಎಸ್ ಓಪನ್ ಅನ್ನು ಹಾರ್ಡ್ ಕೋರ್ಟ್‌ಗಳಲ್ಲಿ ಮತ್ತು 2023ರ ವಿಂಬಲ್ಡನ್ ಅನ್ನು ಗ್ರಾಸ್ ಕೋರ್ಟ್‌ಗಳಲ್ಲಿ ಗೆದಿದ್ದಾರೆ.
ಕಳೆದ 15 ಪಂದ್ಯಗಳಲ್ಲಿ 12 ಪಂದ್ಯಗಳನ್ನು ಗೆಲ್ಲುವ ಮೂಲಕ ಅಲ್ಕರಾಜ್ ತಮ್ಮ ಸಾಮರ್ಥ್ಯವನ್ನು ಪ್ರದರ್ಶಿಸಿದ್ದಾರೆ. ಇದರೊಂದಿಗೆ ಅಗ್ರಮಾನ್ಯ ಆಟಗಾರರ ಸಾಲಿನಲ್ಲಿ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಂಡಿದ್ದಾರೆ.
ಪುರುಷರ ಡಬಲ್ಸ್‌ನಲ್ಲಿ ಅರೆವಾಲೊ-ಪಾವಿಕ್ ಜೋಡಿ ಚಾಂಪಿಯನ್
ಭಾನುವಾರ ಫ್ರೆಂಚ್ ಓಪನ್ 2024ರ ಪುರುಷರ ಡಬಲ್ಸ್‌ನಲ್ಲಿ ಎಲ್ ಸಾಲ್ವಡಾರ್‌ನ ಮಾರ್ಸೆಲೊ ಅರೆವಾಲೊ ಮತ್ತು ಕ್ರೊಯೇಷಿಯಾದ ಮೇಟ್ ಪಾವಿಕ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದರು.
ಇಟಾಲಿಯ ಸಿಮೋನ್ ಬೊಲೆಲ್ಲಿ ಮತ್ತು ಆಂಡ್ರಿಯಾ ವವಾಸ್ಸೊರಿ ವಿರುದ್ಧ 7-5, 6-3 ಅಂಕಗಳ ಅಂತರದಿಂದ ಗೆಲುವು ಸಾಧಿಸಿದ್ದ ಅರೆವಾಲೊ ಮತ್ತು ಪಾವಿಕ್ ಜೋಡಿ ಪ್ರಶಸ್ತಿ ವಶಪಡಿಸಿಕೊಂಡಿದ್ದರು. ಈ ಮೂಲಕ ಪಾವಿಕ್ ಪುರುಷರ ಡಬಲ್ಸ್‌ನಲ್ಲಿ ಆಡಿದ ನಾಲ್ಕು ಗ್ರ್ಯಾಂಡ್ ಸ್ಲಾಮ್ ಪ್ರಶಸ್ತಿಗಳನ್ನು ಗೆದ್ದ ಸಾಧನೆ ಮಾಡಿದ್ದರು.
ಇನ್ನೊಂದೆಡೆ ಎಲ್ ಸಾಲ್ವಡಾರ್‌ನ ಅರೆವಾಲೊಗೆ ಎರಡನೇ ಡಬಲ್ಸ್ ಗೆಲ್ಲುವಲ್ಲಿ ಯಶಸ್ವಿಯಾಗಿದ್ದರು. ಪ್ರಶಸ್ತಿ ಗೆಲ್ಲುತ್ತಿದ್ದಂತೆ ಮೈದಾನದಲ್ಲಿ ತಮ್ಮ ತಂಡದೊಂದಿಗೆ ಇಬ್ಬರು ಆಟಗಾರರು ಕುಣಿದು ಸಂಭ್ರಮಿಸಿದ್ದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications