Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಪ್ರೆಂಚ್ ಓಪನ್ ಹಾಲಿ ಚಾಂಪಿಯನ್‌ ಸ್ವಿಯೆಟೆಕ್‌ ಹೊರಗಟ್ಟಿದ ಮರಿಯಾ

Defending champion Iga Swiatek crashes out of French Open in quarter-finals

ಪ್ಯಾರಿಸ್: ಫ್ರೆಂಚ್ ಓಪನ್ ಹಾಲಿ ಚಾಂಪಿಯನ್, ಪೋಲ್ಯಾಂಡ್‌ನ ಇಗಾ ಸ್ವಿಯೆಟೆಕ್ ಅವರನ್ನು ಗ್ರೀಕಿನ ಮರಿಯಾ ಸಕ್ಕಾರಿ ಸೋಲಿಸಿದ್ದಾರೆ. ಜೂನ್ 9ರ ಬುಧವಾರ ನಡೆದ ಮಹಿಳಾ ಸಿಂಗಲ್ಸ್ ಕ್ವಾರ್ಟರ್ ಫೈನಲ್‌ ಪಂದ್ಯದಲ್ಲಿ ಇಗಾ ವಿರುದ್ಧ ಮರಿಯಾ ಗೆಲುವು ದಾಖಲಿಸಿದ್ದಾರೆ.

ಕ್ವಾರ್ಟರ್ ಫೈನಲ್‌ ಪಂದ್ಯದಲ್ಲಿ ಇಗಾ ಸ್ವಿಯೆಟೆಕ್ ಅವರನ್ನು ಮರಿಯಾ ಸಕ್ಕಾರಿ 6-4, 6-4ರ ಅಂತರದಿಂದ ಸೋಲಿಸಿದ್ದಾರೆ. ಫಿಲಿಪ್ ಚಾಟ್ರಿಯರ್ ಕೋರ್ಟ್‌ನಲ್ಲಿ ನಡೆದ ಪಂದ್ಯದಲ್ಲಿ ಮರಿಯಾ ಪಾರಮ್ಯ ಮೆರೆದಿದ್ದು ಕಂಡುಬಂತು. 25ರ ಹರೆಯದ ಸಕ್ಕಾರಿಗೆ 20ರ ಸ್ವಿಯೆಟೆಕ್ ತಲೆಬಾಗಬೇಕಾಯ್ತು.

ವಿಶ್ವ ಶ್ರೇಯಾಂಕ 9ರಲ್ಲಿರುವ ಸ್ವಿಯೆಟೆಕ್ ಗೆ ಟ್ರೋಫಿ ಉಳಿಸಿಕೊಂಡು ದಾಖಲೆ ನಿರ್ಮಿಸಲು ಅವಕಾಶವಿತ್ತು. ಆದರೆ ಆ ಅವಕಾಶವನ್ನು ಸ್ವಿಯೆಟೆಕ್ ಕಳೆದುಕೊಂಡಿದ್ದಾರೆ. ಬಲ್ಗೇರಿಯಾದ ಜಸ್ಟಿನ್ ಹೆನಿನ್ ಅವರು 2017ರಲ್ಲಿ ಈ ವಿಶೇಷ ದಾಖಲೆ ನಿರ್ಮಿಸಿದ್ದರು.

ವಿಶ್ವ ಶ್ರೇಯಾಂಕ 18ರಲ್ಲಿರುವ ಸಕ್ಕಾರಿ ಶನಿವಾರ ನಡೆಯಲಿರುವ ಸೆಮಿಫೈನಲ್‌ನಲ್ಲಿ ಝೆಕ್ ಆಟಗಾರ್ತಿ ಬಾರ್ಬೊರಾ ಕ್ರೆಜ್ಕಿಕೋವಾ ಸವಾಲು ಸ್ವೀಕರಿಸಲಿದ್ದಾರೆ.

Story first published: Wednesday, June 9, 2021, 20:37 [IST]
Other articles published on Jun 9, 2021
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+