Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ವಿಂಬಲ್ಡನ್ : ಆಹಾ ಎಂಥಾ ಆ ಕ್ಷಣ ನೆನೆದರೆ ತಲ್ಲಣ

ಲಂಡನ್, ಜು.7: ಆಲ್ ಇಂಗ್ಲೆಂಡ್ ಕ್ಲಬ್‌ನ ಸೆಂಟರ್ ಕೋರ್ಟ್‌ನಲ್ಲಿ ಭಾನುವಾರ ನಡೆದ ಪುರುಷರ ಸಿಂಗಲ್ಸ್ ಫೈನಲ್ ಪಂದ್ಯ ಟೆನಿಸ್ ಪ್ರಿಯರಿಗೆ ಸಕತ್ ಕಿಕ್ ಕೊಟ್ಟಿತು. ಆಹಾ.. ಎಂಥಾ ಆ ಕ್ಷಣ ನೆನೆದರೆ ತಲ್ಲಣ ಎಂದು ಕನ್ನಡದ ಹಾಡೊಂದನ್ನು ಗುನುಗುವಂತೆ ಮಾಡಿದ ಫೆಡರರ್ -ಜೋಕೊವಿಕ್ ಹಣಾಹಣಿ ಐತಿಹಾಸಿಕ ಪಂದ್ಯ ಎನಿಸಿಕೊಂಡಿತು.

ಸೆರ್ಬಿಯಾದ ನೊವಾಕ್ ಜೊಕೊವಿಚ್ ಪ್ರತಿಷ್ಠಿತ ವಿಂಬಲ್ಡನ್ ಗ್ರ್ಯಾನ್ ಸ್ಲಾಮ್ ಟೆನಿಸ್ ಟೂರ್ನಿಯಲ್ಲಿ ಪ್ರಶಸ್ತಿ ಕಪ್ ಎತ್ತಿ ಮುದ್ದಾಡಿದರೆ, ರೋಜರ್ ಫೆಡರರ್ ತನ್ನ ಎಂಟನೇ ಗ್ರ್ಯಾನ್ ಸ್ಲಾಮ್ ಪ್ರಶಸ್ತಿ ಗೆಲ್ಲುವ ಕನಸು ನುಚ್ಚುನೂರಾಗಿಸಿಕೊಂಡರು. ನಾಲ್ಕನೇ ಸೆಟ್ ನ ಗೇಮ್ ಗಳು, 25ಕ್ಕೂ ಹೆಚ್ಚು ಏಸ್ ಬಾರಿಸಿದ ಫೆಡರರ್ ಪಂದ್ಯದಲ್ಲಿ ಮತ್ತೊಮ್ಮೆ ಮುನ್ನಡೆ ಸಾಧಿಸಿದ್ದು, ಮತ್ತೆ ಮತ್ತೆ ಮ್ಯಾಚ್ ಪಾಯಿಂಟ್ ಗೆ ಬಂದು ಸರ್ವೀಸ್ ಬ್ರೇಕ್ ಮಾಡದೆ ಕೆಲ ಕಾಲ ನೋವಾಕ್ ನೋವು ಅನುಭವಿಸಿದ್ದು ಎಲ್ಲವೂ ಟಿನಿಸ್ ಪ್ರಿಯರ ಮನದಲ್ಲಿ ಅಚ್ಚಳಿಯದೆ ಉಳಿಯಲಿದೆ.

ಆಲ್ ಇಂಗ್ಲೆಂಡ್ ಕ್ಲಬ್‌ನ ಸೆಂಟರ್ ಕೋರ್ಟ್‌ನಲ್ಲಿ ಭಾನುವಾರ ನಡೆದ ಪುರುಷರ ಸಿಂಗಲ್ಸ್ ಫೈನಲ್ ಪಂದ್ಯದಲ್ಲಿ ಅಗ್ರ ಶ್ರೇಯಾಂಕಿತ ಜೊಕೊವಿಚ್ 6-7 (7-9), 6-4, 7-6 (7-4), 5-7, 6-4 ಸೆಟ್‌ಗಳಿಂದ ಸ್ವಿಜರ್ಲೆಂಡ್‌ನ ರೋಜರ್ ಫೆಡರರ್ ಅವರನ್ನು ಸೋಲಿಸಿದರು. ಇದು ಜೊಕೊವಿಚ್‌ಗೆ 2ನೇ ವಿಂಬಲ್ಡನ್ ಹಾಗೂ ಒಟ್ಟಾರೆ 7ನೇ ಗ್ರಾನ್ ಸ್ಲಾಮ್ ಪ್ರಶಸ್ತಿಯಾಗಿದೆ.

Djokovic wins second Wimbledon title after beating Federer in epic final

ವಿಂಬಲ್ಡನ್‌ನಲ್ಲಿ ಹೊಸ ಇತಿಹಾಸ ಬರೆಯುವ ಕನಸು ಕಂಡಿದ್ದ 4ನೇ ಶ್ರೇಯಾಂಕಿತ ಫೆಡರರ್‌ ಗೆ ಭಾರೀ ನಿರಾಸೆಯಾಗಿದೆ. ಒಂದು ವೇಳೆ ಫೆಡರರ್ ಪ್ರಶಸ್ತಿ ಗೆದ್ದುಕೊಂಡಿದ್ದರೆ, ಅತಿ ಹೆಚ್ಚು ವಿಂಬಲ್ಡನ್ ಪ್ರಶಸ್ತಿ ಗೆದ್ದ (8 ಬಾರಿ) ವಿಶ್ವದ ಮೊದಲ ಟೆನಿಸ್ ಪಟು ಎಂಬ ದಾಖಲೆ ಬರೆಯುತ್ತಿದ್ದರು. ಆದರೆ, ಫೆಡರರ್ ಸೋಲುವುದರೊಂದಿಗೆ ಪೀಟ್ ಸಾಂಪ್ರಾಸ್ (ತಲಾ 7 ಬಾರಿ) ಅವರೊಂದಿಗೆ ಜಂಟಿ ಅಗ್ರಸ್ಥಾನದಲ್ಲೇ ಉಳಿಯುವಂತಾಯಿತು.

ವಿಂಬಲ್ಡನ್‌ ನಲ್ಲಿ ಈ ಹಿಂದೆ 8 ಬಾರಿ ಫೈನಲ್ ಪ್ರವೇಶಿಸಿದ್ದ ರೋಜರ್ ಫೆಡರರ್ 7 ಬಾರಿ ಪ್ರಶಸ್ತಿ ಗೆದ್ದುಕೊಂಡಿದ್ದರು. ಒಮ್ಮೆ ಮಾತ್ರ ಅಂದರೆ, 2008ರಲ್ಲಿ ಸ್ಪೇನ್‌ನ ರಾಫೆಲ್ ನಡಾಲ್ ವಿರುದ್ಧ 5 ಐದು ಸೆಟ್‌ ಗಳ ಸುದೀರ್ಘ ಹೋರಾಟದಲ್ಲಿ ಸೋತು ಪ್ರಶಸ್ತಿ ಕೈಚೆಲ್ಲಿದ್ದರು.

Story first published: Wednesday, January 3, 2018, 10:14 [IST]
Other articles published on Jan 3, 2018
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+