Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ವಿಂಬಲ್ಡನ್ ಚಾಂಪಿಯನ್ ಕಾರ್ಲೋಸ್ ಅಲ್ಕರಾಜ್ ಗರ್ಲ್‌ ಫ್ರೆಂಡ್‌ ಯಾರು ಗೊತ್ತೆ?

ಜುಲೈ 15 ಸೋಮವಾರ, ವಿಶ್ವ ಟೆನಿಸ್‌ ಲೋಕದಲ್ಲಿ 21ರ ಹರೆಯದ ಯುವ ಆಟಗಾರ ಕಾರ್ಲೋಸ್ ಅಲ್ಕರಾಜ್ ಇತಿಹಾಸ ಸೃಷ್ಟಿಸಿದ್ದಾರೆ. 23 ಗ್ರ್ಯಾಂಡ್ ಸ್ಲಾಮ್ ವಿಜೇತ ಸರ್ಬಿಯಾದ ದಂತಕಥೆ ನೊವಾಕ್ ಜೊಕೊವಿಕ್ ಅವರ ಕನಸನ್ನು ಕಾರ್ಲೋಸ್ ಅಲ್ಕರಾಜ್ ಭಾನುವಾರ ಮುರಿದಿದ್ದಾರೆ.

ಕಾರ್ಲೋಸ್ ಅಲ್ಕರಾಜ್ 2024ರ ವಿಂಬಲ್ಡನ್ ಪುರುಷರ ಸಿಂಗಲ್ಸ್‌ ಫೈನಲ್‌ನಲ್ಲಿ ನೊವಾಕ್ ಜೊಕೊವಿಕ್ ಅವರನ್ನು ಸೋಲಿಸುವ ಮೂಲಕ ಎರಡನೇ ಬಾರಿಗೆ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ. ಈ ಮೂಲಕ ಕಾರ್ಲೋಸ್ ಅಲ್ಕರಾಜ್ 22 ವರ್ಷಕ್ಕಿಂತ ಮೊದಲು ಎರಡು ವಿಂಬಲ್ಡನ್ ಪ್ರಶಸ್ತಿಗಳನ್ನು ಗೆದ್ದ ಮೂರನೇ ಆಟಗಾರ ಎನಿಸಿಕೊಂಡಿದ್ದಾರೆ.

Do you know who is Wimbledon champion Carlos Alcaraz girlfriend

ಕಾರ್ಲೋಸ್ ಅಲ್ಕರಾಜ್ ಅವರಿಗೂ ಮೊದಲು, ಟೆನಿಸ್ ದಿಗ್ಗಜರಾದ ಬೋರಿಸ್ ಬೆಕರ್ ಮತ್ತು ಜಾರ್ನ್ ಬೋರ್ಗ್ ಈ ಸಾಧನೆ ಮಾಡಿದ್ದರು. ಕಾರ್ಲೋಸ್ ಅಲ್ಕರಾಜ್ 2022 ರಲ್ಲಿ ಯುಎಸ್ ಓಪನ್‌ನಲ್ಲಿ ತಮ್ಮ ವೃತ್ತಿಜೀವನದ ಮೊದಲ ಗ್ರ್ಯಾಂಡ್ ಸ್ಲಾಮ್ ಪ್ರಶಸ್ತಿಯನ್ನು ಗೆದ್ದರು.

ಇದಾದ ನಂತರ, ಅಲ್ಕರಾಜ್ 2023ರಲ್ಲಿ ತಮ್ಮ ಮೊದಲ ವಿಂಬಲ್ಡನ್ ಪ್ರಶಸ್ತಿಯನ್ನು ಗೆದ್ದು ವಿಶ್ವ ದಾಖಲೆ ಬರೆದಿದ್ದರು. ಈ ವರ್ಷ ಫ್ರೆಂಚ್ ಓಪನ್ ಪ್ರಶಸ್ತಿಯನ್ನು ಗೆದ್ದಿದ ಕಾರ್ಲೋಸ್ ಅಲ್ಕರಾಜ್ ಎರಡನೇ ವಿಂಬಲ್ಡನ್ ಪ್ರಶಸ್ತಿಗೆ ಮುತ್ತಿಕ್ಕಿದ್ದಾರೆ.

21ನೇ ವಯಸ್ಸಿನಲ್ಲಿ ಕಾರ್ಲೋಸ್ ಅಲ್ಕರಾಜ್ ಒಟ್ಟು 4 ಗ್ರ್ಯಾಂಡ್ ಸ್ಲಾಮ್‌ಗಳನ್ನು ಗೆದ್ದಿದ್ದು, ಅವರ ವೈಯಕ್ತಿಕ ಜೀವನದ ಬಗ್ಗೆ ಕೂಡ ಮಾಹಿತಿ ಇಲ್ಲಿದೆ.

ಕಾರ್ಲೋಸ್ ಅಲ್ಕರಾಜ್ ಆಟಕ್ಕೆ ಸೋಲದ ಮನಗಳಿಲ್ಲ. ಅದೇ ರೀತಿ ಈ ಯುವ ಸ್ಟಾರ್‌ ಆಟಗಾರರನ್ನು ಪ್ರೀತಿಸುವ ಹೃದಯಗಳು ಅಪಾರ ಸಂಖ್ಯೆಯಲ್ಲಿವೆ. ಆದರೆ ಅಲ್ಕರಾಜ್ ಅವರ ಹೆಸರು ಮಾತ್ರ ಒಂದು ಸುಂದರವಾದ ಚೆಲುವೆಯೊಂದಿಗೆ ಬೆಸದುಕೊಂಡಿದೆ.

ಕಾರ್ಲೋಸ್ ಅಲ್ಕರಾಜ್ ಅವರ ಗೆಳತಿಯ ಹೆಸರು ಮಾರಿಯಾ ಗೊನ್ಜಾಲೆಜ್. ಮಾರಿಯಾ ಗೊನ್ಜಾಲೆಜ್ ಕೂಡ ಟೆನಿಸ್ ಆಟಗಾರ್ತಿ ಆಗಿದ್ದಾರೆ. ಅಲ್ಕರಾಜ್ ಮತ್ತು ಮಾರಿಯಾ ಗೊನ್ಜಾಲೆಜ್ ಬಹಳ ಸಮಯದಿಂದ ಪರಸ್ಪರ ಡೇಟಿಂಗ್ ಮಾಡುತ್ತಿದ್ದಾರೆ.

ಕಾರ್ಲೋಸ್ ಮತ್ತು ಮಾರಿಯಾ ಗೊನ್ಜಾಲೆಜ್ ಸ್ಪೇನ್‌ನ ಒಂದೇ ನಗರದವರಾಗಿದ್ದು, ಈ ಇಬ್ಬರ ಸಂಬಂಧ ಇನ್ನೂ ಬಹಿರಂಗಗೊಂಡಿಲ್ಲ. ಮಾರಿಯಾ ಗೊನ್ಜಾಲೆಜ್ ಅವರು ಅಲ್ಕರಾಜ್ ಗಿಂತ 3 ವರ್ಷ ದೊಡ್ಡವರಾಗಿದ್ದಾರೆ.

ವರದಿಗಳ ಪ್ರಕಾರ, ಕಾರ್ಲೋಸ್ ಮತ್ತು ಮಾರಿಯಾ ಟೆನಿಸ್ ಅಕಾಡೆಮಿಯಲ್ಲಿ ಭೇಟಿಯಾಗಿದ್ದ, ಕಾರ್ಲೋಸ್ ಕೂಡ ಅಲ್ಲಿ ತರಬೇತಿ ಪಡೆಯುತ್ತಿದ್ದರು. ಇಬ್ಬರೂ ಒಂದೇ ಟೆನಿಸ್ ಅಕಾಡೆಮಿಯಲ್ಲಿ ತರಬೇತಿ ಪಡೆಯುತ್ತಿದ್ದಾಗ ಸ್ನೇಹಿತರಾದರು.

ಕಾರ್ಲೋಸ್ ಮತ್ತು ಮಾರಿಯಾ ಅವರ ಸ್ನೇಹ ಪ್ರೀತಿಗೆ ತಿರುಗಿತು. ಟೆನಿಸ್ ಆಡುವುದಲ್ಲದೆ, ಮಾರಿಯಾ ಕಾನೂನು ಶಾಸ್ತ್ರ (ಎಲ್‌ಎಲ್‌ಬಿ) ಓದುತ್ತಿದ್ದಾರೆ.

Story first published: Monday, July 15, 2024, 22:25 [IST]
Other articles published on Jul 15, 2024
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+