ವಿಶ್ವದ ನಂ.1 ಡಬಲ್ಸ್ ಆಟಗಾರ ರೋಹನ್ ಬೋಪಣ್ಣ ಸುಂದರ ಪ್ರೇಮ ಕಹಾನಿ ನಿಮಗೆಷ್ಟು ಗೊತ್ತು?
ಭಾರತದ ಖ್ಯಾತ ಟೆನ್ನಿಸ್ ತಾರೆ ಕನ್ನಡಿಗ ರೋಹನ್ ಬೋಪಣ್ಣ ಅವರು ಅತ್ಯಂತ ಹಿರಿಯ ನಂ.1 ಆಟಗಾರನಾಗುವ ಮೂಲಕ ಇತಿಹಾಸವನ್ನು ಸೃಷ್ಟಿಸಿದ್ದಾರೆ.
ಸದ್ಯ 2024ರ ಆಸ್ಟ್ರೇಲಿಯನ್ ಓಪನ್‌ನ ಫೈನಲ್ ತಲುಪಿರುವ 43 ವರ್ಷದ ರೋಹನ್ ಬೋಪಣ್ಣ ಟೆನ್ನಿಸ್ ಆಟದ ಶಿಖರವನ್ನು ತಲುಪಿದ್ದಾರೆ. ಇದು ಅವರ ಸ್ಪೂರ್ತಿದಾಯಕ ಸಂಗತಿಯಾಗಿದೆ. ಆದರೆ ರೋಹನ್ ಬೋಪಣ್ಣ ಅವರ ಯಶಸ್ಸಿನ ಹಿಂದೆ ಒಬ್ಬ ಮಹಿಳೆಯ ಅದೃಷ್ಟವಿದೆ ಎಂದರೆ ತಪ್ಪಾಗಲಾರದು.
ಆ ಅದೃಷ್ಟದ ಮಹಿಳೆ ಬೇರೆ ಯಾರೂ ಅಲ್ಲ, ಕೊಡಗು ಮೂಲದ ಟೆನ್ನಿಸ್ ಮಾಂತ್ರಿಕನ ಹಿಂದೆ ಗಟ್ಟಿಯಾಗಿ ನಿಂತಿರುವ ರೋಹನ್ ಬೋಪಣ್ಣ ಅವರ ಪತ್ನಿ ಸುಪ್ರಿಯಾ ಅಣ್ಣಯ್ಯ. ಸುಪ್ರಿಯಾ ಅಣ್ಣಯ್ಯ ಬಗ್ಗೆ ನೀವು ತಿಳಿದುಕೊಳ್ಳಬೇಕಾದ ಮಾಹಿತಿ ಇಲ್ಲಿದೆ.

ಸುಪ್ರಿಯಾ ಅಣ್ಣಯ್ಯ ಯಾರು?
ಸುಪ್ರಿಯಾ ಅಣ್ಣಯ್ಯ ರೋಹನ್ ಬೋಪಣ್ಣ ಅವರ ಪತ್ನಿ. ಅವರು 1988ರ ಏಪ್ರಿಲ್ 23ರಂದು ಜನಿಸಿದರು ಮತ್ತು ಭಾರತೀಯ ಟೆನ್ನಿಸ್ ತಾರೆಗೆ ನಿರಂತರ ಬೆಂಬಲವಾಗಿ ನಿಂತಿದ್ದಾರೆ.
ಸುಪ್ರಿಯಾ ಅಣ್ಣಯ್ಯ ವೃತ್ತಿಯಲ್ಲಿ ಮನಶಾಸ್ತ್ರಜ್ಞರಾಗಿದ್ದಾರೆ ಮತ್ತು ಮಾಧ್ಯಮ ಅನುಭವವನ್ನು ಹೊಂದಿದ್ದಾರೆ. ಸುಪ್ರಿಯಾ ಅವರು ತಮ್ಮ ಪತಿ ರೋಹನ್ ಬೋಪಣ್ಣ ಅವರ ಟೆನ್ನಿಸ್ ಡೆವಲಪ್‌ಮೆಂಟ್ ಫೌಂಡೇಶನ್‌ನ ನಿರ್ದೇಶಕಿಯೂ ಆಗಿದ್ದಾರೆ.
ರೋಹನ್ ಬೋಪಣ್ಣ ಮತ್ತು ಸುಪ್ರಿಯಾ ಅಣ್ಣಯ್ಯ ಪ್ರೇಮಕಥೆ
ಟೆನ್ನಿಸ್ ತಾರೆ ರೋಹನ್ ಬೋಪಣ್ಣ ಮತ್ತು ಸುಪ್ರಿಯಾ ಅಣ್ಣಯ್ಯ ಮೊದಲ ಬಾರಿಗೆ ಒಂದು ರೆಸ್ಟೋರೆಂಟ್‌ನಲ್ಲಿ ಭೇಟಿಯಾಯಿತು. ಆಗ ಸಂಕ್ಷಿಪ್ತವಾಗಿ ಡೇಟಿಂಗ್ ಮಾಡಿದರು ಮತ್ತು ನಂತರ, ಪ್ರೀತಿಯ ಬಂಧನದಲ್ಲಿ ಸಿಲುಕಿದರು. ಅಂತಿಮವಾಗಿ 2012ರಲ್ಲಿ ಎರಡೂ ಕುಟುಂಬದ ಒಪ್ಪಿಗೆಯೊಂದಿಗೆ ವಿವಾಹವಾದರು.

ರೋಹನ್ ಬೋಪಣ್ಣ ಮತ್ತು ಸುಪ್ರಿಯಾ ಅಣ್ಣಯ್ಯ ಅವರ ಮದುವೆ ಖಾಸಗಿ ಸಮಾರಂಭದಲ್ಲಿ ನೆರವೇರಿತು. ವಿವಾಹಿತ ದಂಪತಿ ಪ್ರಸ್ತುತ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಇವರಿಗೆ ತ್ರಿಧಾ ಬೋಪಣ್ಣ ಎಂಬ ಮಗಳೂ ಇದ್ದಾಳೆ.
ರೋಹನ್ ಬೋಪಣ್ಣ ಅವರಿ ಅರ್ಜುನ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಸುಪ್ರಿಯಾ ಅಣ್ಣಯ್ಯ ಸಹ ಉಪಸ್ಥಿತರಿದ್ದರು. ಆ ಸಮಾರಂಭದಲ್ಲಿ ಆಕೆಯ ಸಾಂಪ್ರದಾಯಿಕ ಕೊಡವ ಸೀರೆ ಕೂಡ ಆ ಸಮಯದಲ್ಲಿ ಗಮನ ಸೆಳೆಯಿತು.
ರೋಹನ್ ಬೋಪಣ್ಣಗೆ ಬೆಂಬಲವಾಗಿ ನಿಂತಿರು ಸುಪ್ರಿಯಾ
ಮನಶಾಸ್ತ್ರಜ್ಞೆಯಾಗಿರುವ ಸುಪ್ರಿಯಾ ಅಣ್ಣಯ್ಯ ಯಾವಾಗಲೂ ರೋಹನ್ ಬೋಪಣ್ಣ ಅವರ ವೈಯಕ್ತಿಕ ಮತ್ತು ವೃತ್ತಿ ಜೀವನದಲ್ಲಿ ಸಕಾರಾತ್ಮಕ ಶಕ್ತಿಯಾಗಿ ಹೊರಹೊಮ್ಮಿದ್ದಾರೆ.
ಟೆನ್ನಿಸ್ ಸ್ಟಾರ್ ತಮ್ಮ 43ನೇ ವಯಸ್ಸಿನಲ್ಲಿಯೂ ಅತ್ಯುತ್ತಮ ಮಟ್ಟದಲ್ಲಿ ಆಡುತ್ತಿದ್ದಾರೆ ಮತ್ತು ಅವರ ವೃತ್ತಿಜೀವನದ ಸುಧೀರ್ಘ ಪಯಣದಲ್ಲಿ ಅವರ ಪತ್ನಿ ಪ್ರಮುಖ ಪಾತ್ರವನ್ನು ಹೊಂದಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications