ಸ್ವಿಸ್ ಮಾಸ್ಟರ್ ರೋಜರ್ ಫೆಡರರ್ ಮುಡಿಗೆ 10ನೇ ಹ್ಯಾಲೆ ಓಪನ್ ಗರಿ!

ಹ್ಯಾಲೆ ವೆಸ್ಟ್‌ಫಾಲನ್, ಜೂನ್ 23: ಸ್ವಿಸ್ ಮಾಸ್ಟರ್ ರೋಜರ್ ಫೆಡರರ್ ಇಲ್ಲಿ ನಡೆದ ಹ್ಯಾಲೆ ಓಪನ್ ಟೆನಿಸ್ ಟೂರ್ನಿಯಲ್ಲಿ ದಾಖಲೆಯ 10ನೇ ಬಾರಿ ಪ್ರಶಸ್ತಿ ಎತ್ತಿ ಹಿಡಿಯುವ ಮೂಲಕ ಮುಂಬರುವ ವಿಂಬಲ್ಡನ್ ಗ್ರ್ಯಾನ್ ಸ್ಲ್ಯಾಮ್ ಟೂರ್ನಿಗೆ ಭರ್ಜರಿ ಸಿದ್ದತೆ ಕೈಗೊಂಡಿದ್ದಾರೆ.
ವಿಶ್ವಕಪ್ ವೇಳಾಪಟ್ಟಿ / ಮುಖಾಮುಖಿ ದಾಖಲೆಗಳು / ಅಂಕಪಟ್ಟಿ
37 ವರ್ಷದ ಸ್ವಿಜರ್ಲೆಂಡ್‌ನ ಅನುಭವಿ ಆಟಗಾರ ರೋಜರ್, ಭಾನುವಾರ ನಡೆದ ಪ್ರಶಸ್ತಿ ಸುತ್ತಿನ ಪಂದ್ಯದಲ್ಲಿ ಬೆಲ್ಜಿಯಂನ ಆಟಗಾರ ಡೇವಿಡ್ ಗಾಫಿನ್ ಅವರನ್ನು 7-6 (7/2), 6-1 ಅಂತರದ ನೇರ ಸೆಟ್‌ಗಳಿಂದ ಬಗ್ಗುಬಡಿದು ವೃತ್ತಿ ಜೀವನದ 102ನೇ ಸಿಂಗಲ್ಸ್ ಪ್ರಶಸ್ತಿ ಮತ್ತು ಹ್ಯಾಲೆ ಅಂಗಣದಲ್ಲಿ ತಮ್ಮ 10ನೇ ಟ್ರೋಫಿ ಗೆದ್ದರು.
"ನಂಬಲು ಸಾಧ್ಯವಾಗುತ್ತಿಲ್ಲ. ಇಲ್ಲಿ ಮೊದಲ ಬಾರಿ ಆಡಿದಾಗ ನಾನು ಇದೇ ಅಂಗಣದಲ್ಲಿ 10 ಬಾರಿ ಪ್ರಶಸ್ತಿ ಗೆಲ್ಲುತ್ತೇನೆಂಬುದನ್ನು ಅಂದಾಜಿಸಿರಲಿಲ್ಲ. ನನ್ನ ವೃತ್ತಿಬದುಕಿನಲ್ಲಿ ಯಾವುದೇ ಟೂರ್ನಿಗಳಲ್ಲಿ ನಾನು 10 ಬಾರಿ ಪ್ರಶಸ್ತಿ ಗೆದ್ದಿಲ್ಲ. ಹ್ಯಾಲೆ ಅಂಗಣದಲ್ಲಿ ಇಂಥದ್ದೊಂದು ಸಾಧನೆ ಮಾಡಿರುವುದನ್ನು ಸದಾ ನೆನೆಯುತ್ತೇನೆ," ಎಂದು ಪಂದ್ಯದ ಬಳಿಕ ಮಾತನಾಡಿದ ರೋಜರ್ ಫೆಡರರ್ ತಮ್ಮ ಅಭಿಪ್ರಾಯ ಹೊರಹಾಕಿದ್ದಾರೆ.
ಮುಂದಿನ ತಿಂಗಳು ನಡೆಯಲಿರುವ ವಿಂಬಲ್ಡನ್ ಗ್ರ್ಯಾನ್ ಸ್ಲ್ಯಾಮ್ ಟೂರ್ನಿಯಲ್ಲಿ ರೋಜರ್ ತಮ್ಮ 9ನೇ ಪ್ರಶಸ್ತಿ ಗೆಲುವನ್ನು ಎದುರು ನೋಡುತ್ತಿದ್ದಾರೆ. ಈ ಮೂಲಕ ತಮ್ಮ ವೃತ್ತಿ ಬದುಕಿನಲ್ಲಿ ಗೆದ್ದಿರುವ 20 ಗ್ರ್ಯಾನ್ ಸ್ಲ್ಯಾಮ್ ಪ್ರಶಸ್ತಿಗಳನ್ನು ಮತ್ತಷ್ಟು ವಿಸ್ತರಿಸುವ ಆಲೋಚನೆಯಲ್ಲಿದ್ದಾರೆ.
ರೋಜರ್ ಅವರ ದೀರ್ಘಕಾಲದ ಎದುರಾಳಿ ರಾಫೆಲ್ ನಡಾಲ್, ಫ್ರೆಂಚ್ ಓಪನ್ ಗ್ರ್ಯಾನ್‌ಸ್ಲ್ಯಾಮ್ ಟೂರ್ನಿಯಲ್ಲಿ 12ನೇ ಬಾರಿ ಪ್ರಶಸ್ತಿ ಗೆದ್ದು ಒಟ್ಟು ಪ್ರಶಸ್ತಿಗಳ ಗಳಿಕೆಯಲ್ಲಿ ಫೆಡರರ್‌ಗಿಂತಲೂ ಕೇವಲ 2 ಪ್ರಶಸ್ತಿಗಳ ಅಂತರ ಕಾಯ್ದುಕೊಂಡಿದ್ದಾರೆ. ವಿಶ್ವದ ಹಾಲಿ ನಂ.1 ಆಟಗಾರ ನೊವಾಕ್ ಜೊಕೊವಿಕ್ 15 ಗ್ರ್ಯಾನ್ ಸ್ಲ್ಯಾಮ್ ಪ್ರಶಸ್ತಿಗಳನ್ನು ಹೊಂದಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications