ಕ್ವಾರ್ಟಲ್‌ಫೈನಲ್‌ಗೆ ಪ್ರವೇಶಿಸಿ ವಿಂಬಲ್ಡನ್ ಅಂಗಳದಲ್ಲಿ ವಿಶೇಷ ದಾಖಲೆ ಬರೆದ ರೋಜರ್ ಫೆಡರರ್

ಟೆನ್ನಿಸ್‌ನ ದಿಗ್ಗಜ ಆಟಗಾರ ಎಂಟು ಬಾರಿಯ ವಿಂಬಲ್ಡನ್ ಚಾಂಪಿಯನ್ ರೋಜರ್ ಫೆಡರರ್ ವಿಂಬಲ್ಡನ್ ಅಂಗಳದಲ್ಲಿ ವಿಶೇಷ ದಾಖಲೆಯೊಂದನ್ನು ಬರೆದಿದ್ದಾರೆ. ಲೊರೆನ್ಸೋ ಸೊನೆಗೋ ವಿರುದ್ಧದ ಪಂದ್ಯದಲ್ಲಿ 7-5, 6-4, 6-2 ಅಂತರದಿಂದ ಗೆಲುವು ಸಾಧಿಸಿ ಕ್ವಾರ್ಟರ್‌ಫೈನಲ್‌ಗೆ ಪ್ರವೇಶಿಸಿದ್ದಾರೆ. ಈ ಮೂಲಕ 18ನೇ ಬಾರಿಗೆ ವಿಂಬಲ್ಡನ್‌ನ ಕ್ವಾರ್ಟರ್ ಫೈನಲ್ ಪ್ರವೇಶ ಪಡೆದುಕೊಂಡಿದ್ದಾರೆ.
ರೋಜರ್ ಫೆಡರರ್ ಇನ್ನು ಒಂದು ತಿಂಗಳಲ್ಲಿ 40ರ ಹರೆಯಕ್ಕೆ ಕಾಲಿಡಲಿದ್ದಾರೆ. ಈ ಸಂದರ್ಭದಲ್ಲಿ ಅವರು ಎದುರಾಳಿ ಸೊನೆಗೋ ವಿರುದ್ಧ ಪ್ರಿ ಕ್ವಾರ್ಟರ್‌ಫೈನಲ್ ಕಾದಾಟದಲ್ಲಿ 2 ಗಂಟೆ 11ನಿಮಿಷಗಳ ಹೋರಾಡಿ ಗೆಲುವು ಸಾಧಿಸಿದರು. ಈ ಪಂದ್ಯಕ್ಕೆ ಮಳೆ ಕೆಲ ಕಾಲ ಅಡ್ಡಿಯುಂಟು ಮಾಡಿತ್ತು.
ಈ ಗೆಲುವಿನ ಮೂಲಕ ಟೆನ್ನಿಸ್ ಓಪನ್ ಯುಗದಲ್ಲಿ ವಿಂಬಲ್ಡನ್‌ನಲ್ಲಿ ಕ್ವಾರ್ಟರ್‌ಫೈನಲ್ ಹಂತಕ್ಕೇರಿದ ಹಿರಿಯ ಆಟಗಾರ ಎನಿಸಿದ್ದಾರೆ. 1974ರಲ್ಲಿ ಕೆನ್ ರೋಸ್‌ವೆಲ್ ಹೆಸರಿನಲ್ಲಿ ಈ ಹಿಂದೆ ಈ ದಾಖಲೆಯಿತ್ತು. 39 ವರ್ಷ 224 ದಿನಗಳಲ್ಲಿ ಅವರು ಈ ಸಾಧನೆಯನ್ನು ಮಾಡಿದ್ದರು. ರೋಜರ್ ಫೆಡರರ್ ಈ ಸಾಧನೆಯನ್ನು 39 ವರ್ಷ 337 ದಿನಗಳಲ್ಲಿ ಮಾಡಿದ್ದಾರೆ.
ಈ ಗೆಲುವಿನ ನಂತರ ಫೆಡರರ್ ಒ್ರತಿಕ್ರಿಯೆ ನೀಡಿದ್ದು ಸಂತರವನ್ನು ವ್ಯಕ್ತಪಡಿಸಿದ್ದಾರೆ. "ನಾನು ತುಂಬಾ ಸಂತಸಗೊಂಡಿದ್ದೇನೆ. ಲೊರೆನ್ಸೋ ವಿರುದ್ಧ ಒಳಗಿನ ಹಾಗೂ ಹೊರಗಿನ ಸವಾಲಿನ ಪರಿಸ್ಥಿತಿಗಳು ಯಾವಾಗಲೂ ಅಪಾಯಕಾರಿ. ಆದರೆ ಮೊದಲ ಸೆಟ್‌ನ ನಂತರ ನನಗೆ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ಪಡೆಯಬಹುದು ಎನಿಸಿತು. ಇದೊಂದು ಶ್ರೇಷ್ಠವಾದ ಪಂದ್ಯವಾಗಿತ್ತು. ಕ್ವಾರ್ಟರ್‌ಫೈನಲ್‌ನಲ್ಲಿ ಆಡಲು ಮತ್ತಷ್ಟು ಉತ್ಸುಕನಾಗಿದ್ದೇನೆ. ಇದೊಂದು ದೊಡ್ಡ ಕ್ಷಣ ಹಾಗೂ ನಾನು ತುಂಬಾ ತುಂಬಾ ಸಂತಸಗೊಂಡಿದ್ದೇನೆ" ಎಂದು ರೋಜರ್ ಫೆಡರರ್ ಹೇಳಿದ್ದಾರೆ.
ಪ್ರೀಕ್ವಾರ್ಟರ್ ಫೈನಲ್‌ನ ಮತ್ತೊಂದು ಪಂದ್ಯದಲ್ಲಿ ಆಡುವ ಡಾನಿಲ್ ಮಡ್ವೆಡೇವ್ ಹಾಗೂ ಹಬಾರ್ಟ್ ಹರ್ಕಾಜ್ ನಡುವಿನ ಪಂದ್ಯದಲ್ಲಿ ವಿಜೇತ ಆಟಗಾರನನ್ನು ಕ್ವಾರ್ಟರ್ ಫೈನಲ್‌ನಲ್ಲಿ ಫೆಡರರ್ ಎದುರಿಸಲಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications