Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

31ನೇ ಹರೆಯದಲ್ಲೇ ಟೆನಿಸ್ ನಿವೃತ್ತಿ ಘೋಷಿಸಿದ ಜೂಲಿಯಾ ಜಾರ್ಜ್ಸ್

Former Wimbledon semifinalist Julia Goerges retires from tennis at 31

ಬರ್ಲಿನ್: ವಿಂಬಲ್ಡನ್‌ ಮಾಜಿ ಸೆಮಿಫೈನಲಿಸ್ಟ್ ಜರ್ಮನಿಯ ಜೂಲಿಯಾ ಜಾರ್ಜ್ಸ್ ಟೆನಿಸ್ ವೃತ್ತಿ ಬದುಕಿಗೆ ಬೈ ಹೇಳಿದ್ದಾರೆ. 31ರ ಹರೆಯದ ಜೂಲಿಯಾ ಬುಧವಾರ (ಅಕ್ಟೋಬರ್ 21) ತನ್ನ ನಿರ್ಧಾರ ಪ್ರಕಟಿಸಿದ್ದಾರೆ. ವಿಶ್ವ ರ್‍ಯಾಂಕಿಂಗ್‌ನಲ್ಲಿ ಜೂಲಿಯಾ 2018ರಲ್ಲಿ 9ನೇ ಸ್ಥಾನ ಪಡೆದುಕೊಂಡಿದ್ದರು. ಇದು ಜೂಲಿಯಾ ವೃತ್ತಿ ಬದುಕಿನ ಒಳ್ಳೆಯ ಸಾಧನೆಯಾಗಿತ್ತು.

ನಿವೃತ್ತಿ ಹೊತ್ತಿನಲ್ಲಿ ಜೂಲಿಯಾ ಜಾರ್ಜ್ಸ್ 45ನೇ ಶ್ರೇಯಾಂಕಕ್ಕೆ ಕುಸಿದಿದ್ದರು. ಇತ್ತೀಚೆಗೆ ಫ್ರೆಂಚ್ ಓಪನ್‌ನಲ್ಲಿ ಪಾಲ್ಗೊಂಡಿದ್ದ ಜೂಲಿಯಾ ದ್ವಿತೀಯ ಸುತ್ತಿನಲ್ಲಿ ಜರ್ಮನ್‌ನವರೇ ಆದ ಲಾರಾ ಸೀಗೆಮಂಡ್ ವಿರುದ್ಧ ಹಿನ್ನಡೆ ಅನುಭವಿಸಿದ್ದರು.

ಪತ್ರದ ಮೂಲಕ ಟೆನಿಸ್ ವೃತ್ತಿ ಬದುಕಿಗೆ ವಿದಾಯ ಹೇಳಿರುವ ಜೂಲಿಯಾ, 'ಗುಡ್ ಬೈ ಹೇಳಲು ತಯಾರಾಗಿದ್ದೇನೆ' ಎಂದು ಬರೆದುಕೊಂಡಿದ್ದರು. ಜೂಲಿಯಾ ಒಟ್ಟಿಗೆ 15 ವರ್ಷಗಳ ವೃತ್ತಿ ಬದುಕು ಕಂಡಿದ್ದಾರೆ.

'ನಿಮಗೆ ಗುಡ್ ಬೈ ಹೇಳುವಾಗ ಯಾವ ರೀತಿಯ ಭಾವನೆ ಉಂಟಾಗುತ್ತದೆ ಅನ್ನೋದು ನನಗೆ ಯಾವಾಗಲೂ ಗೊತ್ತಿದೆ. ನನ್ನ ಟೆನಿಸ್ ಅಧ್ಯಾಯ ಕೊನೆಗೊಳಿಸಲು ನಾನು ತಯಾರಾಗಿದ್ದೇನೆ. ಹೊಸ ಬದುಕಿಗೆ ತೆರೆದುಕೊಳ್ಳುತ್ತಿದ್ದೇನೆ,' ಎಂದು ಜೂಲಿಯಾ ಹೇಳಿದ್ದಾರೆ.

Story first published: Thursday, October 22, 2020, 16:21 [IST]
Other articles published on Oct 22, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+