ಮಾಜಿ ವಿಶ್ವ ನಂ.4 ಟೆನಿಸ್ ಆಟಗಾರ್ತಿ ಡಚ್ಚಿನ ಕಿಕಿ ಬರ್ಟೆನ್ಸ್ ನಿವೃತ್ತಿ

ಆ್ಯಮ್ಸ್‌ಸ್ಟರ್‌ಡ್ಯಾಮ್: ನೆದರ್ಲ್ಯಾಂಡ್‌ನ ಸ್ಟಾರ್ ಆಟಗಾರ್ತಿ, ಮಾಜಿ ವಿಶ್ವ ನಂ.4 ಶ್ರೇಯಾಂಕಿತೆ ಕಿಕಿ ಬರ್ಟೆನ್ಸ್ ಟೆನಿಸ್ ವೃತ್ತಿ ಬದುಕಿಗೆ ನಿವೃತ್ತಿ ಘೋಷಿಸಿದ್ದಾರೆ. 2021ರ ಸೀಸನ್ ಕೊನೆಯಾಗುತ್ತಲೇ ತನ್ನ ವೃತ್ತಿ ಬದುಕೂ ಕೊನೆಯಾಗಲಿದೆ ಎಂದು ಬರ್ಟೆನ್ಸ್ ತಿಳಿಸಿದ್ದಾರೆ.
ಕಳೆದ ಅಕ್ಟೋಬರ್‌ನಲ್ಲಿ ಕಿಕಿ ಬರ್ಟೆನ್ಸ್ ಅಕಿಲೀಸ್ ಸರ್ಜರಿಗೆ (ಕೆಳ ಹಿಂಗಾಲಿನ ಶಸ್ತ್ರ ಚಿಕಿತ್ಸೆ) ಒಳಗಾಗಿದ್ದರು. ಈ ಸೀಸನ್ ನನ್ನ ಟೆನಿಸ್ ವೃತ್ತಿ ಬದುಕಿನ ಕೊನೆಯ ಸೀಸನ್ ಆಗಲಿದೆ ಎಂದು ನಾನು ನಿಮಗೆಲ್ಲರಿಗೂ ತಿಳಿಸಲು ಬಯಸುತ್ತೇನೆ,' ಎಂದು ಇನ್‌ಸ್ಟಾಗ್ರಾಮ್‌ನಲ್ಲಿ ಬರ್ಟೆನ್ಸ್ ಹೇಳಿದ್ದಾರೆ.
ವರ್ಷದ ಅಂತ್ಯಕ್ಕೆ ನಡೆಯಲಿರುವ ಬೇರಾವುದೇ ಕ್ರೀಡಾಕೂಟಗಳಲ್ಲಿ ಪಾಲ್ಗೊಳ್ಳುವ ಮುನ್ನ ಈಸ್ಟ್‌ಬೋರ್ನ್, ವಿಂಬಲ್ಡನ್ ಮತ್ತು ಟೋಕಿಯೋದಲ್ಲಿ ನಡೆಯುವ ಒಲಿಂಪಿಕ್ಸ್ ನಲ್ಲಿ ತನಗೆ ಆಡಲು ಮನಸಿರುವುದಾಗಿ 29ರ ಹರೆಯದ ಬರ್ಟೆನ್ಸ್ ಹೇಳಿಕೊಂಡಿದ್ದಾರೆ.
ವಿಶ್ವ ಶ್ರೇಯಾಂಕದಲ್ಲಿ ಸದ್ಯ 20ನೇ ಸ್ಥಾನದಲ್ಲಿರುವ ಬರ್ಟೆನ್ಸ್, ಗ್ರ್ಯಾಂಡ್‌ಸ್ಲ್ಯಾಮ್‌ನಲ್ಲಿ ತೋರಿದ ಅತ್ಯುತ್ತಮ ಸಾಧನೆಯೆಂದರೆ 2016ರಲ್ಲಿ ಫ್ರೆಂಚ್ ಓಪನ್‌ನಲ್ಲಿ ಸೆಮಿಫೈನಲ್‌ಗೆ ಪ್ರವೇಶಿಸಿದ್ದು. ಆದರೆ ಆ ಪಂದ್ಯದಲ್ಲಿ ಬರ್ಟೆನ್ಸ್ ಅಮೆರಿಕಾ ಬಲಿಷ್ಠೆ ಸೆರೆನಾ ವಿಲಿಯಮ್ಸ್ ವಿರುದ್ಧ ಸೋತಿದ್ದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications