Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ರೋಲ್ಯಾಂಡ್ ಗ್ಯಾರೋಸ್: ಜೊಕೊವಿಕ್, ಹ್ಯಾಲೆಪ್ ಮುನ್ನಡೆ

French Open 2018: Novak Djokovic plays down problems

ಪ್ಯಾರಿಸ್‌, ಮೇ 31: ಸತತ ವೈಫಲ್ಯಗಳಿಂದ ಸಾಕಷ್ಟು ನಿರಾಸೆ ಅನುಭವಿಸಿದ್ದ ಮಾಜಿ ವಿಶ್ವ ನಂ.1 ಆಟಗಾರ ಸರ್ಬಿಯಾದ ನೊವಾಕ್ ಜೊಕೊವಿಕ್ ಅವರು ಫ್ರೆಂಚ್ ಓಪನ್ ನಲ್ಲಿ 3ನೇ ಸುತ್ತಿಗೆ ಮುನ್ನಡೆ ಸಾಧಿಸಿದ್ದಾರೆ.

ಬುಧವಾರ ನಡೆದ 2ನೇ ಸುತ್ತಿನ ಪಂದ್ಯದಲ್ಲಿ ಜೊಕೊವಿಕ್ ಅವರು ಸ್ಪೇನ್ ಜಾಮು ಮುನಾರ್ ವಿರುದ್ಧ 7-6(7/1), 6-4, 6-4 ಅಂತರದ ನೇರ ಸೆಟ್‌ ಗೆಲುವು ದಾಖಲಿಸಿದರು. ಈ ಗೆಲುವಿನ ಮೂಲಕ ಮಾಜಿ ಅಗ್ರ ಶ್ರೇಯಾಂಕಿತ ಆಟಗಾರ ಟೆನಿಸ್ ಅಂಗಳದಲ್ಲಿ ಮತ್ತೆ ಮಿಂಚುವ ಮುನ್ಸೂಚನೆ ನೀಡಿದ್ದಾರೆ.

ಸದ್ಯ 22ನೇ ಶ್ರೇಯಾಂಕದಲ್ಲಿರುವ ನೊವಾಕ್ 3ನೇ ಸುತ್ತಿನ ಕಾದಾಟದಲ್ಲಿ ವಿಶ್ವ ನಂ. 13 ಆಟಗಾರ ಸ್ಪೇನ್ ನ ರಾಬರ್ಟ್‌ ಬಟಿಸ್ಟಾ ಅಗುಟ್ ಬಟಿಸ್ಟಾ ಅವರ ಸವಾಲು ಸ್ವೀಕರಿಸಲಿದ್ದಾರೆ.

ವನಿತಾ ವಿಭಾಗದ ಸಿಂಗಲ್ಸ್ ಮೊದಲ ಸುತ್ತಿನ ಸ್ಪರ್ಧೆಯಲ್ಲಿ ವಿಶ್ವ ನಂ. 1 ಆಟಗಾರ್ತಿ ರೋಮ್ ನ ಸಿಮೋನಾ ಹ್ಯಾಲೆಪ್ ಅವರು ಪ್ರಾಯಾಸದ ಗೆಲುವು ಸಾಧಿಸಿದ್ದಾರೆ. ಹಾಲೆಪ್ ಅವರು ಅಮೆರಿಕಾ ಆಟಗಾರ್ತಿ ಅಲಿಸನ್‌ ರಿಸ್ಕೆ ಅವರನ್ನು 2-6, 6-1, 6-1 ಅಂತರದಿಂದ ಹಿಮ್ಮೆಟ್ಟಿಸಿದರು.

2014 ಮತ್ತು 2017ರಲ್ಲಿ ಇದೇ ರೋಲ್ಯಾಂಡ್ ಗ್ಯಾರೋಸ್ ಪಂದ್ಯಾಟದಲ್ಲಿ ರನ್ನರ್ ಪ್ರಶಸ್ತಿ ಗೆದ್ದಿದ್ದ 26ರ ಹರೆಯದ ಸಿಮೋನಾ, ಈ ಬಾರಿಯೂ ಫೈನಲ್ ಹಂತಕ್ಕೇರುವ ನಿರೀಕ್ಷೆ ಮೂಡಿಸಿದ್ದಾರೆ.

Story first published: Thursday, May 31, 2018, 14:20 [IST]
Other articles published on May 31, 2018
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+